ಇಂಪ್ಲಾಂಟೇಶನ್ ಪೂರ್ವ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್)

ಇಂಪ್ಲಾಂಟೇಶನ್ ಪೂರ್ವ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್)

ಇಂಪ್ಲಾಂಟೇಶನ್ ಪೂರ್ವ ಜೆನೆಟಿಕ್ ಸ್ಕ್ರೀನಿಂಗ್ ಎಂದರೇನು?

ಇಂಪ್ಲಾಂಟೇಶನ್ ಪೂರ್ವ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್) ಎನ್ನುವುದು ಐವಿಎಫ್ ಮೂಲಕ ಅಭಿವೃದ್ಧಿಪಡಿಸಲಾದ ಭ್ರೂಣಗಳ ಕ್ರೋಮೋಸೋಮಲ್(ವರ್ಣತಂತು) ವಸ್ತುವನ್ನು ಅಳವಡಿಸುವ ಮುನ್ನ ಅದರ ಅಸಹಜತೆಗಳನ್ನು ಪತ್ತೆಹಚ್ಚಲು ಪರೀಕ್ಷಿಸುವ ವಿಧಾನವಾಗಿದೆ. ಪಿಜಿಡಿಗೆ ವ್ಯತಿರಿಕ್ತವಾಗಿ, ಒಬ್ಬರು ಅಥವಾ ಇಬ್ಬರೂ ಪೋಷಕರು ತಿಳಿದಿರುವ ಆನುವಂಶಿಕ ಅಸಹಜತೆಯನ್ನು ಹೊಂದಿರುವಾಗ ನಿರ್ದಿಷ್ಟವಾಗಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಇಂಪ್ಲಾಂಟೇಶನ್ ಪೂರ್ವ ಜೆನೆಟಿಕ್ ಸ್ಕ್ರೀನಿಂಗ್ (ಪಿಜಿಎಸ್) ಅನ್ನು ಪೂರ್ವಭಾವಿ ಕ್ರೋಮೋಸೋಮಲ್ಲಿ ಸಾಮಾನ್ಯ ಆನುವಂಶಿಕ ಪೋಷಕರಿಂದ ಬರುವ ಭ್ರೂಣಗಳಿಗೆ ಮಾಡಲಾಗುತ್ತದೆ. ಇವುಗಳನ್ನು ಅನ್ಯೂಪ್ಲೋಯ್ಡಿ (ಕ್ರೋಮೋಸೋಮ್‍ಗಳ ಸಂಖ್ಯೆಯಲ್ಲಿ ಅಸಹಜತೆ) ಪರೀಕ್ಷಿಸಲಾಗುತ್ತದೆ. ಪಿಜಿಎಸ್ ನಿರ್ದಿಷ್ಟ ರೋಗಗಳಿಗಾಗಿ ಪರೀಕ್ಷೆಯಲ್ಲ.

ಕ್ರೋಮೋಸೋಮ್‍ಗಳಲ್ಲಿನ ಸಂಖ್ಯಾತ್ಮಕ ಅಸಹಜತೆಗಳಿಗಾಗಿ ಐವಿಎಫ್ ಮೂಲಕ ಅಭಿವೃದ್ಧಿಪಡಿಸಿದ ಭ್ರೂಣಗಳಿಂದ ಒಂದು ಅಥವಾ ಹೆಚ್ಚಿನ ಕೋಶಗಳನ್ನು ತೆಗೆದುಹಾಕುವುದನ್ನು ಪಿಜಿಎಸ್ ಒಳಗೊಂಡಿರುತ್ತದೆ (ಅನ್ಯೂಪ್ಲೋಯ್ಡಿ). ಈ ಪರೀಕ್ಷೆಯು ಸಾಮಾನ್ಯ ಸಂಖ್ಯೆಯ ವರ್ಣತಂತುಗಳನ್ನು (ಯೂಪ್ಲಾಯ್ಡ್ ಭ್ರೂಣಗಳು) ಹೊಂದಿರುವ ಭ್ರೂಣಗಳ ಅಳವಡಿಕೆಗೆ ಸಹಾಯ ಮಾಡುತ್ತದೆ. ಸಾಮಾನ್ಯ ಆರೋಗ್ಯವಂತ ಮಾನವರು 23 ಜೋಡಿ ವರ್ಣತಂತುಗಳನ್ನು ಹೊಂದಿದ್ದಾರೆ. ಜೆನೆಸಿಸ್ -24 ಎಂದೂ ಕರೆಯಲ್ಪಡುವ ಈ ಪರೀಕ್ಷೆಯು ಭ್ರೂಣ ವರ್ಗಾವಣೆಯ ಸಮಯದಲ್ಲಿ ಎಲ್ಲಾ 24 ಕ್ರೋಮೋಸೋಮ್‍ಗಳನ್ನು ಪರಿಶೀಲಿಸುತ್ತದೆ. ಅದರಲ್ಲಿ 22 ಜೋಡಿಗಳು ಲೈಂಗಿಕೇತರ ವರ್ಣತಂತುಗಳು ಮತ್ತು 2 ಲೈಂಗಿಕ ವರ್ಣತಂತುಗಳು ಎಕ್ಸ್ ಮತ್ತು ವೈ ಆಗಿರುತ್ತವೆ.

ಪಿಜಿಎಸ್ ಪತ್ತೆಹಚ್ಚಬಹುದಾದ ಸಾಮಾನ್ಯ ಪರಿಸ್ಥಿತಿಗಳು

• ಟರ್ನರ್ ಸಿಂಡ್ರೋಮ್

• ಕ್ಲೈನ್‍ಫೆಲ್ಟರ್ ಸಿಂಡ್ರೋಮ್

• ಡೌನ್ ಸಿಂಡ್ರೋಮ್

• ಎಡ್ವಡ್ರ್ಸ್ ಸಿಂಡ್ರೋಮ್

• ಪಟೌ ಸಿಂಡ್ರೋಮ್

• ಟ್ರೈಸೋಮಿಗಳು ಮತ್ತು ಮೊನೊಸೋಮಿಗಳು (ಇಂಪ್ಲಾಂಟೇಶನ್ ವೈಫಲ್ಯ ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ)

• ಕ್ರೋಮೋಸೋಮ್‍ಗಳಲ್ಲಿನ ಸೆಗ್ಮೆಂಟಲ್ ಗೇಯ್ನ್‌ ಎಂಡ್ ಲಾಸಸ್(ವಿಭಾಗೀಯ ಲಾಭ ಮತ್ತು ನಷ್ಟಗಳು) (>20ಎಂಬಿ) ಭ್ರೂಣದಲ್ಲಿ ಅಸಹಜತೆಗಳಿಗೆ ಕಾರಣವಾಗಬಹುದು.

ನಿಮಗೆ ಪಿಜಿಎಸ್ ಪರೀಕ್ಷೆ ಏಕೆ ಬೇಕು?

• ಯಶಸ್ವಿ ಗರ್ಭಧಾರಣೆಯನ್ನು ಸಾಧಿಸಲು ಅಗತ್ಯವಿರುವ ಐವಿಎಫ್ ಆವರ್ತನಗಳ ಸಂಖ್ಯೆಯನ್ನು ಕಡಿಮೆ ಮಾಡಲು. ಪಿಜಿಎಸ್‍ನೊಂದಿಗೆ ಗರ್ಭಧಾರಣೆಯ ಮಟ್ಟವು ಪಿಜಿಎಸ್‍ಅನ್ನು ಬಳಸದೆಯೇ ಸುಮಾರು ಶೇ. 73 ಮತ್ತು ಶೇ. 36 ಆಗಿದೆ.

• ಏಕ ಭ್ರೂಣ ವರ್ಗಾವಣೆಗೆ ಹೆಚ್ಚಿನ ಯಶಸ್ಸಿನ ಪ್ರಮಾಣವಿದೆ.

• ಅನ್ಯೂಪ್ಲೋಯ್ಡೀಸ್‍ನಿಂದಾಗಿ ಗರ್ಭಪಾತವಾಗುವ ಸಾಧ್ಯತೆ ಕಡಿಮೆಯಾಗಿದೆ.

• 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಯಶಸ್ಸಿನ ಮಟ್ಟ ಹೆಚ್ಚಿದೆ.

ಯಾರು ಪರೀಕ್ಷೆಗೆ ಒಳಗಾಗುವ ಅಗತ್ಯವಿರುತ್ತದೆ?

• ಐವಿಎಫ್‍ಗೆ ಒಳಗಾಗುತ್ತಿರುವ ದಂಪತಿಗಳು.

• ಐವಿಎಫ್‍ಗೆ ಒಳಗಾಗುವಾಗ ಯಾವುದೇ ವಯಸ್ಸಿನಲ್ಲಿ ಪುನರಾವರ್ತಿತ ಇಂಪ್ಲಾಂಟೇಶನ್ ವೈಫಲ್ಯ ಅಥವಾ ಪುನರಾವರ್ತಿಸುವ ಗರ್ಭಧಾರಣೆಯ ನಷ್ಟವನ್ನು ಹೊಂದಿರುವ ರೋಗಿಗಳು.

• ಐವಿಎಫ್‍ಗೆ ಒಳಗಾಗುತ್ತಿರುವ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು.

• ಪುನರಾವರ್ತಿತ ಗರ್ಭಪಾತಗಳನ್ನು ಕಂಡಿರುವ ದಂಪತಿಗಳು.

• ಕುಟುಂಬದಲ್ಲಿ ಕ್ರೋಮೋಸೋಮಲ್ ಅಸಹಜತೆಗಳ ಸಕಾರಾತ್ಮಕ ಇತಿಹಾಸವನ್ನು ಹೊಂದಿರುವ ದಂಪತಿಗಳು.

• ವರ್ಣತಂತುಗಳಲ್ಲಿ ಅಸಹಜತೆಯ ತೊಂದರೆಯ ರೋಗನಿರ್ಣಯವಾಗಿರುವವರು

ಪಿಜಿಎಸ್‍ಅನ್ನು ಮುಖ್ಯವಾಗಿ ತಾಯಿಯಾಗುವ ವಯಸ್ಸು ಮೀರಿದ ವಯಸ್ಸಿನ ದಂಪತಿಗಳು, ಗುರುತಿಸಲಾದ ಕೌಟುಂಬಿಕ ವರ್ಣತಂತು ಸ್ಥಳಾಂತರಗಳು ಅಥವಾ ವಿಲೋಮಗಳು, ವಂಶವಾಹಿ ನಕಲುಗಳು ಮತ್ತು ವಂಶವಾಹಿ ಅಳಿಸುವಿಕೆಗಳು ಅಥವಾ ನೈಸರ್ಗಿಕವಾಗಿ ಮತ್ತು ಐವಿಎಫ್ ಮೂಲಕ ಮರುಕಳಿಸುವ ಗರ್ಭಧಾರಣೆಯ ನಷ್ಟವನ್ನು ಹೊಂದಿರುವ ಕುಟುಂಬಗಳಿಗೆ ಸೂಚಿಸಲಾಗುತ್ತದೆ. ಕ್ರೋಮೋಸೋಮ್ ಅಸಹಜತೆಗಳಿಗಾಗಿ ಭ್ರೂಣಗಳನ್ನು ಪರೀಕ್ಷಿಸುವ ಮೂಲಕ ಗರ್ಭಧಾರಣೆಯ ದರವನ್ನು ಸುಧಾರಿಸುವ ಗುರಿಯನ್ನು ಸ್ಕ್ರೀನಿಂಗ್(ಪರೀಕ್ಷೆಗಳು) ಹೊಂದಿದೆ - ನಂತರದ ಜೀವನದಲ್ಲಿ ಮಕ್ಕಳನ್ನು ಹೊಂದಲು ಆಯ್ಕೆ ಮಾಡುವ ಕುಟುಂಬಗಳಿಗೆ ಹೆಚ್ಚುತ್ತಿರುವ ಸಮಸ್ಯೆ ಇದೇ ಆಗಿದೆ. ಪಿಜಿಎಸ್ ಸ್ಕ್ರೀನಿಂಗ್ ಮಾಡದಿದ್ದರೆ ದೃಶ್ಯ ಗುಣಮಟ್ಟ ಮತ್ತು ರೂಪವಿಜ್ಞಾನ ಆಧರಿಸಿ ಭ್ರೂಣಗಳ ಆಯ್ಕೆ ಕೈಗೊಳ್ಳಲಾಗುತ್ತದೆ. ಪಿಜಿಎಸ್ ಅನ್ನು ಹೊಂದಿರುವ ಆವರ್ತನಗಳಲ್ಲಿ, ಭ್ರೂಣಗಳನ್ನು ಅವುಗಳ ಕ್ರೋಮೋಸೋಮ್ ಪೂರಕತೆಯನ್ನು ಆಧರಿಸಿ ಮತ್ತಷ್ಟು ಮೌಲ್ಯಮಾಪನ ಮಾಡಲಾಗುತ್ತದೆ. ಸಾಮಾನ್ಯ ಸಂಖ್ಯೆಯ ಕ್ರೋಮೋಸೋಮ್‍ಗಳನ್ನು ಹೊಂದಿರುವ ಭ್ರೂಣಗಳು ಗರ್ಭಾವಸ್ಥೆಯ ಫಲಿತಾಂಶ ಕಾಣುವ ಸಾಧ್ಯತೆ ಹೆಚ್ಚು. ಈ ಪರೀಕ್ಷೆಗಳು ಐವಿಎಫ್ ಪ್ರಕ್ರಿಯೆಯ ಅತ್ಯಗತ್ಯ ಹಂತವಾಗಿರದ ಕಾರಣ, ಪಿಜಿಡಿ/ಪಿಜಿಎಸ್ ವೆಚ್ಚವನ್ನು ಸಾಮಾನ್ಯವಾಗಿ ಐವಿಎಫ್ ಆವರ್ತನದ ವೆಚ್ಚದಲ್ಲಿ ಸೇರಿಸಲಾಗುವುದಿಲ್ಲ.

ಈ ಪುಟವನ್ನು ಹಂಚಿಕೊಳ್ಳಿ