ಎಂಡೊಮೆಟ್ರಿಯಲ್ ಪುನರುಜ್ಜೀವನಗೊಳಿಸುವಿಕೆ

ಎಂಡೊಮೆಟ್ರಿಯಲ್ ಪುನರುಜ್ಜೀವನಗೊಳಿಸುವಿಕೆ

ಹೊಸ ತಂತ್ರಗಳು ಈಗ ಅಂಡಾಶಯ, ವೃಷಣ ಮತ್ತು ಎಂಡೊಮೆಟ್ರಿಯಲ್ ಪುನರುಜ್ಜೀವನÀಗೊಳಿಸುವಿಕೆಯನ್ನು ಸಾಧ್ಯವಾಗಿಸಿವೆೆ.

ಎಂಡೊಮೆಟ್ರಿಯಲ್ ಪುನರುಜ್ಜೀವನವು ಎಂಡೊಮೆಟ್ರಿಯಲ್ ದಪ್ಪ ಮತ್ತು ರಕ್ತ ಪೂರೈಕೆಯನ್ನು ಸುಧಾರಿಸುವ ಮೂಲಕ ಭ್ರೂಣದ ಯಶಸ್ವಿ ಅಳವಡಿಕೆಗಾಗಿ ಎಂಡೊಮೆಟ್ರಿಯAನ ಗುಣಮಟ್ಟವನ್ನು ಸುಧಾರಿಸುವ ಪ್ರಕ್ರಿಯೆಯಾಗಿದೆ, ಇದರಿಂದ ಭ್ರೂಣಗಳಿಗೆ ಸರಿಯಾದ ಪೋಷಣೆ ಮತ್ತು ಹಾರ್ಮೋನುಗಳನ್ನು ನೀಡುವ ಮೂಲಕ ಅಳವಡಿಸಲು ಸಹಾಯವಾಗುತ್ತದೆ.

ಗರ್ಭಾಶಯದ ಅತ್ಯಂತ ಒಳಗಿನ ಪದರವನ್ನು ಎಂಡೊಮೆಟ್ರಿಯಮ್ ಎಂದು ಕರೆಯಲಾಗುತ್ತದೆ. ಮಹಿಳೆಯ ಫರ್ಟಿಲಿಟಿ ಇರುವ ವರ್ಷಗಳಲ್ಲಿ ಗರ್ಭಾಶಯವು ಪ್ರತಿ ತಿಂಗಳು ಅದರ ಗಾತ್ರವನ್ನು ಬದಲಾಯಿಸುತ್ತದೆ. ನಿರಂತರ ಪುನರುತ್ಪಾದನೆಯು ಎಂಡೊಮೆಟ್ರಿಯನ ಅತ್ಯಂತ ಅನನ್ಯ ಅಂಶವಾಗಿದೆ, ಎಂಡೊಮೆಟ್ರಿಯಮ್ ಹೆಚ್ಚಾಗಿ ಎರಡು ಪದರಗಳನ್ನು ಹೊಂದಿರುವ ಮ್ಯೂಕೋಸಲ್ ಅಂಗಾAಶದಿAದ ಮಾಡಲ್ಪಟ್ಟಿದೆ, ಮೈಮೆಟ್ರಿಯಮ್ ಎಂಬ ನಯವಾದ ಸ್ನಾಯುಗಳಿಗೆ ಲಗತ್ತಿಸಲಾದ ಸ್ಟ್ರಾಟಮ್ ಬಸಾಲಿಸ್ ಎಂಡೊಮೆಟ್ರಿಯಮ್‌ಗೆ ಆಧಾರವನ್ನು ರೂಪಿಸುತ್ತದೆ ಮತ್ತು ಈ ಪದರವು ತುಲನಾತ್ಮಕವಾಗಿ ಬದಲಾಗದೆ ಉಳಿಯುತ್ತದೆ.

ಆದರೂ, ಎರಡನೇ ಪದರದ ಸ್ತರವು ಕ್ರಿಯಾತ್ಮಕವಾಗಿರುತ್ತದೆ ಮತ್ತು ಋತು ಆವರ್ತನವನ್ನು ಮಾರ್ಗದರ್ಶಿಸುವ ಮಾಸಿಕ ಹಾರ್ಮೋನ್ ಹರಿವಿಗೆ ಪ್ರತಿಕ್ರಿಯೆಯಾಗಿ ಬದಲಾಗುತ್ತದೆ. ಇದು ಎಂಡೊಮೆಟ್ರಿಯಮ್ ಆಗಿದ್ದು, ಹೆಣ್ಣು ಗರ್ಭಧರಿಸಿದಾಗ ಫಲವತ್ತಾದ ಅಂಡಾಣು ಸ್ವತಃ ಅಳವಡಿಸಿಕೊಳ್ಳುತ್ತದೆ. ಪ್ರತಿ ತಿಂಗಳು ಋತುಆವರ್ತನದ ಭಾಗವಾಗಿ ಭ್ರೂಣಕ್ಕೆ ಆತಿಥ್ಯ ವಹಿಸಲು ಹೆಣ್ಣಿನ ದೇಹವು ಎಂಡೊಮೆಟ್ರಿಯಮ್ ಅನ್ನು ಸಿದ್ಧಪಡಿಸುತ್ತದೆ. ಎಂಡೊಮೆಟ್ರಿಯಲ್ ದಪ್ಪವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ ಇದು ಹಾರ್ಮೋನುಗಳು ಎಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮತ್ತು ಪ್ರೊಜೆನಿಟರ್ ಸೆಲ್ ಜನಸಂಖ್ಯೆ ಮತ್ತು ಉರಿಯೂತದ ಮಧ್ಯವರ್ತಿಗಳಿಂದ ಪ್ರಭಾವಿತವಾಗಿರುತ್ತದೆ. ಈ ಅಂಶಗಳು ಯಾವುದಾದರೂ ತೊಂದರೆಗೊಳಗಾದರೆ, ಪರಿಣಾಮವಾಗಿ ಗರ್ಭಾಶಯದ ಗಾಯದ ರಚನೆಯಾಗುವುದು, ಅನಿಯಂತ್ರಿತ ಪ್ರಸರಣ ಮತ್ತು ಭಾರೀ ಮುಟ್ಟಿನ ರಕ್ತಸ್ರಾವದೊಂದಿಗೆ ಎಂಡೊಮೆಟ್ರಿಯಲ್ ಅಸ್ವಸ್ಥತೆಗಳು ಕಂಡುಬರುತ್ತವೆ.

ಎAಡೊಮೆಟ್ರಿಯಲ್ ಬೆಳವಣಿಗೆಯ ಆವರ್ತನಗಳು ಎಸ್ಟೊçಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳಿಂದ ಉಂಟಾಗುತ್ತವೆ. ಮಹಿಳೆಯು ಗರ್ಭಿಣಿಯಾಗದಿದ್ದರೆ ಮುಟ್ಟಿನ ಮೂಲಕ ಎಂಡೊಮೆಟ್ರಿಯಮ್ ಅನ್ನು ಹೊರಹಾಕಲು ಅವು ಕಾರಣವಾಗುತ್ತವೆ. ಎಂಡೊಮೆಟ್ರಿಯಮ್ ಮುಟ್ಟಿನ ಅವಧಿಗಳಲ್ಲಿ ತೆಳ್ಳಗಿರುತ್ತದೆ ಮತ್ತು ಸಾಮಾನ್ಯವಾಗಿ ೨ ರಿಂದ ೪ ಮಿಲಿಮೀಟರ್ ದಪ್ಪ ಇರುತ್ತದೆ, ಅಂಡೋತ್ಪತ್ತಿ ಮೊದಲು ಎಂಡೊಮೆಟ್ರಿಯಮ್ ದಪ್ಪವಾಗಲು ಪ್ರಾರಂಭಿಸುತ್ತದೆ ಮತ್ತು ೫ ರಿಂದ ೭ ಮಿಮೀ ನಡುವಿನ ದಪ್ಪ ಇರಬಹುದು. ಎಂಡೊಮೆಟ್ರಿಯಮ್ ದಪ್ಪವಾಗಿ ಬೆಳೆಯುತ್ತದೆ ಮತ್ತು ಅಂಡೋತ್ಪತ್ತಿ ಕಡೆಗೆ ಸುಮಾರು ೧೧ ಮಿಮೀ ವರೆಗೆ ಬೆಳೆಯಬಹುದು. ಎಂಡೊಮೆಟ್ರಿಯಲ್ ದಪ್ಪವು ಅತ್ಯಧಿಕವಾಗಿರುವ ಸಮಯ ಎಂದರೆ ಹಾರ್ಮೋನುಗಳು ಅಂಡಾಣು ಬಿಡುಗಡೆಯನ್ನು ಪ್ರಚೋದಿಸಿದಾಗ ಅಂಡೋತ್ಪತ್ತಿ ಸಮಯದಲ್ಲಿ ೧೬ ಮಿಮೀ ದಪ್ಪ ಇರಬಹುದು. ಎಂಡೊಮೆಟ್ರಿಯಮ್ ಸಾಕಷ್ಟು ದಪ್ಪವಾಗಿರದಿದ್ದರೆ ಭ್ರೂಣವು ಗರ್ಭಾಶಯದ ಗೋಡೆಗೆ ಅಂಟಿಕೊಳ್ಳಲು ಸಾಧ್ಯವಾಗುವುದಿಲ್ಲ.

ಗರ್ಭಾವಸ್ಥೆಯಲ್ಲಿ ಎಂಡೊಮೆಟ್ರಿಯಮ್ ಎಷ್ಟು ದಪ್ಪ ಇರಬೇಕು?

ಗರ್ಭಾವಸ್ಥೆಯಲ್ಲಿ ಎಂಡೊಮೆಟ್ರಿಯಲ್ ದಪ್ಪವು ಪ್ರಮುಖ ಪಾತ್ರ ವಹಿಸುತ್ತದೆ. ತುಂಬಾ ದಪ್ಪ ಅಥವಾ ತುಂಬಾ ತೆಳುವಾದ ಎಂಡೊಮೆಟ್ರಿಯಮ್ ಆರೋಗ್ಯಕರ, ಪೂರ್ಣಾವಧಿಯ ಗರ್ಭಧಾರಣೆಯ ಸಾಧ್ಯತೆಗಳಿಗೆ ಸಂಬಧಿಸಿದೆ. ಸಾಮಾನ್ಯ ಎಂಡೊಮೆಟ್ರಿಯಮ್ ಭ್ರೂಣವನ್ನು ಯಶಸ್ವಿಯಾಗಿ ಅಳವಡಿಸಲು ಅನುವು ಮಾಡಿಕೊಡುತ್ತದೆ ಮತ್ತು ಅದಕ್ಕೆ ಅಗತ್ಯವಿರುವ ಸರಿಯಾದ ಪೋಷಣೆಯನ್ನು ಪಡೆಯುತ್ತದೆ. ಗರ್ಭಾವಸ್ಥೆಯ ನಂತರದ ಹಂತದಲ್ಲಿ ಎಂಡೊಮೆಟ್ರಿಯಮ್ ದಪ್ಪವಾಗುತ್ತದೆ. ಸಂತಾನೋತ್ಪತ್ತಿ ಸಮಸ್ಯೆಗೆ ಸಾಮಾನ್ಯ ಕಾರಣವೆಂದರೆ ಎಂಡೊಮೆಟ್ರಿಯಲ್ ದಪ್ಪ ಕಳಪೆಯಾಗಿರುವುದು. ಎಂಡೊಮೆಟ್ರಿಯಲ್ ದಪ್ಪವು ನಿರಂತರವಾಗಿ ೭ಎಂಎಂ ಗಿಂತ ಕಡಿಮೆಯಿರುವುದು ಹಲವಾರು ಪರಿಸ್ಥಿತಿಗಳಿಂದ ಉಂಟಾಗಬಹುದು.ಅವುಗಳಲ್ಲಿ ಕೆಲವು ಇಂತಿವೆ:

• ಕಡಿಮೆ ಮಟ್ಟದ ಎಸ್ಟ್ರೊಜೆನ್ ಹಾರ್ಮೋನ್

• ಗರ್ಭಾಶಯಕ್ಕೆ ಆಘಾತ (ಸಿಸೇರಿಯನ್ ವಿಭಾಗಗಳು, ಪುನರಾವರ್ತಿತ ಚಿಕಿತ್ಸೆ),

• ಹಿಂದಿನ ಆ್ಯಂಟಿ-ಟ್ಯೂಮರಲ್ ಚಿಕಿತ್ಸೆಗಳು (ರೇಡಿಯೊಥೆರಪಿ,ಕಿಮೊಥೆರಪಿ, ಶಸ್ತ್ರಚಿಕಿತ್ಸೆ)

• ಡಿಎಂಡ್‌ಸಿ ನಂತರ ಅಥವಾ ಸೊಂಟದ ಕುಹರದ ಸೋಂಕಿನಿದಾಗಿ ಎಂಡೊಮೆಟ್ರಿಯಲ್ ಕುಹರದೊಳಗೆ (ಗಾಯ ಅಂಗಾಶಗಳು) ಅಶೆರ್‌ಮ್ಯಾನ್ಸ್ ಸಿಂಡ್ರೋಮ್-ರಚನೆ.

• ದೀರ್ಘಕಾಲದ ಸೋಂಕುಗಳು (ಎಂಡೊಮೆಟ್ರಿಟಿಸ್, ಸೊಂಟದ ಉರಿಯೂತದ ಕಾಯಿಲೆ)

ಎಂಡೊಮೆಟ್ರಿಯಲ್ ಪುನರುಜ್ಜೀವನಗೊಳಿಸುವುದಕ್ಕೆ ಮಾಡಲಾದ ಚಿಕಿತ್ಸಾ ಯೋಜನೆಗಳು

ಅಳವಡಿಕೆ ಮತ್ತು ಗರ್ಭಾವಸ್ಥೆಯ ಮುಖ್ಯ ಅಂಶವೆಂದರೆ ಎಂಡೊಮೆಟ್ರಿಯಲ್ ಸಾಕಷ್ಟು ದಪ್ಪ ಇರುವುದು, ಎಆರ್‌ಟಿಯ ಯಶಸ್ಸಿನ ಮಟ್ಟಗಳು (ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ) ಎಂಡೊಮೆಟ್ರಿಯಮ್ ತೆಳ್ಳಗಿದ್ದರೆ ಪ್ರತಿಕೂಲ ಪರಿಣಾಮ ಬೀರುತ್ತವೆ.

ಎಂಡೊಮೆಟ್ರಿಯಲ್ ದಪ್ಪತನ ಮತ್ತು ನಂತರದ ಎಂಡೊಮೆಟ್ರಿಯಲ್ ಗ್ರಹಣಕ್ರಿಯೆಯನ್ನು ಸುಧಾರಿಸಲು ಹಲವಾರು ಚಿಕಿತ್ಸಾ ವಿಧಾನಗಳಿವೆ.

ಎಸ್ಟ್ರಾಡಿಯೋಲ್, ಎಚ್‌ಸಿಜಿ (ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಫಿನ್, ಜಿಎನ್‌ಆರ್‌ಹೆಚ್ (ಗೊನಾಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್, ಆಸ್ಪಿರಿನ್‌ನಂತಹ ವಾಸೋಆ್ಯಕ್ಟಿವ್ ವಸ್ತುಗಳು, ವಿಟಮಿನ್-ಇ, ನೈಟ್ರೊಗ್ಲಿಸರಿನ್, ಗ್ರ‍್ಯಾನ್ಯುಲ್ ಜಿ-ಸಿಎಸ್‌ಎಫ್‌ನಂತಹ ಬೆಳವಣಿಗೆಯ ಅಂಶದ ಗರ್ಭಾಶಯದೊಳಗೆ ಮಿಶ್ರಣ(ಆಸ್ಲೋನ್ ಗ್ರ‍್ಯಾನ್ಯುಲ್ ಸಿಎಸ್‌ಎಫ್‌ನಂತಹ ಬೆಳವಣಿಗೆಯ ಅಂಶದ ಒಳಗಿನ ಗರ್ಭಾಶಯದ ಕಷಾಯ) ಗೊನಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ ಮೂಲಕ ಹಾರ್ಮೋನುಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಫ್ಯಾಕ್ಟರ್ ಮತ್ತು ಇತ್ತೀಚಿನ ಅಪ್ಲಿಕೇಶನ್‌ಗಳಾದ ಪ್ಲೇಟ್‌ಲೆಟ್-ರಿಚ್ ಪ್ಲಾಸ್ಮಾ(ಪಿಆರ್‌ಪಿ), ವಿದ್ಯುತ್ ಪ್ರಚೋದನೆ ಮತ್ತು ಪುನರುತ್ಪಾದಕ ಔಷಧ) ಹೆಚ್ಚಿನ ಸಂಖ್ಯೆಯ ಸೈಟೋಕಿನ್‌ಗಳು ಮತ್ತು ಬೆಳವಣಿಗೆಯ ಅಂಶಗಳೊAದಿಗೆ ಪ್ರಸರಣ ಮತ್ತು ಪುನರುತ್ಪಾದನೆಯನ್ನು ಪಿಆರ್‌ಪಿ ಉತ್ತೇಜಿಸುತ್ತದೆ. ಎಸ್ಟ್ರೊಜೆನ್‌ನೊಂದಿಗೆ ಎಂಡೊಮೆಟ್ರಿಯಮ್‌ನ ದಪ್ಪದಲ್ಲಿ ಯಾವುದೇ ಸುಧಾರಣೆ ಇಲ್ಲದಿರುವ ಸಂದರ್ಭಗಳಲ್ಲಿ ಅಥವಾ ಊಸೈಟ್ ದಾನ ಅಥವಾ ಆಶರ್‌ಮನ್ಸ್ ಸಿಂಡ್ರೋಮ್‌ನ ಸಂದರ್ಭಗಳಲ್ಲಿ, ಪಿಆರ್‌ಪಿಯು ಸಾಂಕ್ರಾಮಿಕ ರೋಗಗಳ ಪ್ರಸರಣ ಮತ್ತು ರೋಗನಿರೋಧಕ ಪ್ರತಿಕ್ರಿಯೆಗಳ ಕನಿಷ್ಠ ಅಪಾಯಗಳನ್ನು ಹೊಂದಿರುವ ಸುರಕ್ಷಿತ ವಿಧಾನವಾಗಿದೆ ಏಕೆಂದರೆ ಇದನ್ನು ಸ್ವಯಂ ರಕ್ತ ಮಾದರಿಗಳೊಂದಿಗೆ ತಯಾರಿಸಲಾಗುತ್ತದೆ ಮತ್ತು ಎಂಡೊಮೆಟ್ರಿಯಲ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಐವಿಎಫ್ ಸಮಯದಲ್ಲಿ ಗರ್ಭಧಾರಣೆಯ ಫಲಿತಾಂಶವನ್ನು ಸುಧಾರಿಸುತ್ತದೆ.

ಈ ಚಿಕಿತ್ಸೆಯ ಪ್ರಯೋಜನವನ್ನು ಯಾರು ಪಡೆಯಬಹುದು?

• ಗರ್ಭಾಶಯದ ಅಂಶದಿಂದಾಗಿ ಹಲವಾರು ಐವಿಎಫ್ ವೈಫಲ್ಯಗಳನ್ನು ಅನುಭವಿಸಿದ ಮಹಿಳೆಯರು.

• ಆಶರ್‌ಮನ್ ಸಿಂಡ್ರೋಮ್ ಹೊಂದಿರುವ ಮಹಿಳೆಯರು.

• ಗರ್ಭಾಶಯದ ಹೈಪೋಪ್ಲಾಸಿಯಾದಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು

ಯಶಸ್ಸಿನ ಅಂಶಗಳು

ಹೀಗಿದ್ದಲ್ಲಿ ಎಂಡೊಮೆಟ್ರಿಯಲ್ ಪುನರುಜ್ಜೀವನಗೊಳಿಸುವಿಕೆ ಚಿಕಿತ್ಸೆಯು ಯಶಸ್ವಿಯಾಗಿರುತ್ತದೆ:

• ಚಿಕಿತ್ಸೆಯ ನಂತರ ಉತ್ತಮ ರಕ್ತ ಪೂರೈಕೆಯೊಂದಿಗೆ ಎಂಡೊಮೆಟ್ರಿಯಲ್ ೯ ಮಿಮೀಗಿಂತ ಹೆಚ್ಚಿನ ದಪ್ಪವಿರುವುದು

• ವಲಯ ೪ (ಭ್ರೂಣಕ್ಕೆ ಹತ್ತಿರವಿರುವ ವಲಯ) ವರೆಗೆ ಉಪ-ಎಂಡೊಮೆಟ್ರಿಯಲ್ ರಕ್ತ ಪೂರೈಕೆ.

ಎಂಡೊಮೆಟ್ರಿಯಲ್ ಪುನರುಜ್ಜೀವನಗೊಳಿಸುವಿಕೆ ಚಿಕಿತ್ಸೆಯು ನವೀನ ಮತ್ತು ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಕಳಪೆ ಎಂಡೊಮೆಟ್ರಿಯಲ್ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಲು ಜೊತೆಗೆ ಯಶಸ್ವಿ ಭ್ರೂಣದ ಅಳವಡಿಕೆಗೆ ಸಹಾಯ ಮಾಡುತ್ತದೆ. ನೈಸರ್ಗಿಕ ಫರ್ಟಿಲೈಸೇಷನ್ ಮೂಲಕ ಗರ್ಭಧಾರಣೆಯನ್ನು ಸಾಧಿಸಬಹುದು, ಅದು ಕೆಲಸ ಮಾಡದಿದ್ದರೆ ಐವಿಫ್ ಮತ್ತು ಐಯುಐ ಮಾಡಲಾಗುತ್ತದೆ. ಗರ್ಭಾಶಯದ ಅಂಶಗಳಿAದ ಸಂತಾನನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಬಾಡಿಗೆ ತಾಯ್ತನಕ್ಕೆ ನಿಜವಾದ ಪರ್ಯಾಯವೆಂದರೆ ಎಂಡೊಮೆಟ್ರಿಯಲ್ ಪುನರುತ್ಪಾದನೆಯನ್ನು ಒದಗಿಸುವುದಾಗಿದೆ.

ಬೆಂಗಳೂರಿನಲ್ಲಿರುವ ಅತ್ಯುತ್ತಮ ಐವಿಎಫ್ ಕೇಂದ್ರಗಳಲ್ಲಿ ಒಂದಾಗಿರುವ ಗರ್ಭಗುಡಿ ಐವಿಎಫ್ ಕೇಂದ್ರವು ಗರ್ಭಾಶಯದ ಒಳಪದರ ಸುಧಾರಣೆಗೆ ಪಿಆರ್‌ಪಿ ಚಿಕಿತ್ಸೆಯನ್ನು ನೀಡುತ್ತದೆ, ಕಳಪೆ ಎಂಡೊಮೆಟ್ರಿಯಲ್ ಗ್ರಹಣಕ್ರಿಯೆಯಿಂದಾಗಿ ಗರ್ಭಿಣಿಯಾಗಲು ಸಾಧ್ಯವಾಗದ ಅಥವಾ ತೆಳುವಾದ ಎಂಡೊಮೆಟ್ರಿಯಲ್ ಲೈನಿಂಗ್‌ನಿಂದಾಗಿ ಪುನರಾವರ್ತಿತ ಐವಿಎಫ್ ವೈಫಲ್ಯಗಳಿಗೆ ಒಳಗಾದ ಮಹಿಳೆಯರಿಗೆ. ದೀರ್ಘಕಾಲದವರೆಗೆ ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ ಮತ್ತು ಲಭ್ಯವಿರುವ ಎಲ್ಲಾ ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಿ ಮುಗಿಸಿದ್ದರೆ, ಅದು ಎಲ್ಲ ಕೊನೆಯಾದಂತೆ ಎಂದು ಭಾವಿಸಲು ಪ್ರಾರಂಭಿಸಬಹುದು, ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ಎಂಡೊಮೆಟ್ರಿಯಲ್ ಪುನಶ್ಚೇತನಕ್ಕಾಗಿ ಪ್ಲೇಟ್‌ಲೆಟ್ ಸಮೃದ್ಧ ಪ್ಲಾಸ್ಮಾ ಚಿಕಿತ್ಸೆಯು ಭರವಸೆಯ ಕಿರಣವಾಗಿದೆ.

ಈ ಪುಟವನ್ನು ಹಂಚಿಕೊಳ್ಳಿ