ಘನೀಕೃತ ಭ್ರೂಣ ವರ್ಗಾವಣೆ

ಘನೀಕೃತ ಭ್ರೂಣ ವರ್ಗಾವಣೆ

ಘನೀಕೃತ ಭ್ರೂಣ ಎಂದರೆ ಅರ್ಥವೇನು?

ಫರ್ಟಿಲೈಸೇಷನ್‌ನ ನಂತರ ಭ್ರೂಣಗಳನ್ನು ಶೀಥಲೀಕರಿಸುವ ವಿಧಾನವನ್ನು ಘನೀಕೃತ ಭ್ರೂಣ ಎನ್ನುತ್ತೇವೆ. ಭ್ರೂಣಗಳನ್ನು 2ನೇ ದಿನ (ನಾಲ್ಕು – ಜೀವಕೋಶಗಳ ಹಂತ) – 5ನೇ ದಿನಗಳ (ಬ್ಲಾಸ್ಟೋಸಿಸ್ಟ್ ಹಂತ) ನಡುವೆ ಘನೀಕರಿಸಬಹುದು (ಫ್ರೀಜ್ ಮಾಡಬಹುದು). ಆರೋಗ್ಯಕರವಾದ ಮತ್ತು ಕಾರ್ಯಸಾಧ್ಯವಾದ ಭ್ರೂಣಗಳನ್ನು ‘ಘನೀಕರಿಸುವ ಯಂತ್ರ'ಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿ ತಾಪಮಾನವು - 150 ಡಿಗ್ರಿ ಸೆಲ್ಸಿಯಸ್‍ಗೆ ವೇಗವಾಗಿ ಇಳಿಯುವಂತೆ ಮಾಡಲಾಗುತ್ತದೆ. ನಂತರ - 196 ಡಿಗ್ರಿ ಸೆಲ್ಸಿಯಸ್‍ನಲ್ಲಿ ದ್ರವ ಸಾರಜನಕದ ಟ್ಯಾಂಕ್‍ಗಳಲ್ಲಿ ಭ್ರೂಣಗಳನ್ನು ಸಂಗ್ರಹಿಸಲಾಗುತ್ತದೆ.

ಎಫ್‍ಇಟಿ ಒಳಗೊಂಡಿರುವ ಕಾರ್ಯವಿಧಾನ ಯಾವುದು?

ಶೀಥಲೀಕರಣ ಭ್ರೂಣ ವರ್ಗಾವಣೆ (ಎಫ್‍ಇಟಿ) ಐವಿಎಫ್ ಚಿಕಿತ್ಸೆಯ ಒಂದು ಭಾಗವಾಗಿದೆ. ಅಲ್ಲಿ 1 ಐವಿಎಫ್ ಆವರ್ತನದಲ್ಲಿ ರಚಿಸಲಾದ ಕ್ರಿಯೋಪ್ರಿಸರ್ವ್ಡ್‌ ಭ್ರೂಣವನ್ನು ಕರಗಿಸಲಾಗುತ್ತದೆ ಮತ್ತು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಭ್ರೂಣಜನಕ ಹಂತದಲ್ಲಿ, ಫರ್ಟಿಲೈಸೇಷನ್‍ನಿಂದ ಬ್ಲಾಸ್ಟೋಸಿಸ್ಟ್ ಹಂತದವರೆಗೆ -150 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಭ್ರೂಣವನ್ನು ಸಂರಕ್ಷಿಸುವುದನ್ನು ಒಳಗೊಂಡಿರುತ್ತದೆ. ಕ್ರಿಯೋಪ್ರಿಸರ್ವ್ಡ್ ಭ್ರೂಣವು ದಾನಿ ಭ್ರೂಣವಾಗಿರಬಹುದು ಅಥವಾ ದಾನಿ ಅಂಡಾಣು ಅಥವಾ ದಾನಿ ವೀರ್ಯಾಣುವಿನಿಂದ ತಯಾರಿಸಲಾಗಿರುತ್ತದೆ.

ತಾತ್ವಿಕವಾಗಿ, ಹೆಚ್ಚಿನ ಐವಿಎಫ್ ಆವರ್ತನಗಳು ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯನ್ನು ಒಳಗೊಂಡಿರುತ್ತವೆ. ತಾಜಾ ಭ್ರೂಣ ವರ್ಗಾವಣೆ ಅಪರೂಪ. ಏಕೆಂದರೆ ಎಫ್‍ಇಟಿಯ ತಂತ್ರಗಳು ಬಹಳಷ್ಟು ಸುಧಾರಿಸಿವೆ ಮತ್ತು ಎಫ್‍ಇಟಿಯ ಫಲಿತಾಂಶವು ತಾಜಾ ವರ್ಗಾವಣೆಗಳಿಗಿಂತ ಬಹಳಷ್ಟು ಉತ್ತಮವಾಗಿವೆ. ಬಹುತೇಕ ವೈದ್ಯರು ಎಲೆಕ್ಟಿವ್ ಫ್ರೋಜನ್ ಭ್ರೂಣ ವರ್ಗಾವಣೆಯನ್ನು ಶಿಫಾರಸು ಮಾಡುತ್ತಾರೆ (ಇದನ್ನು “ಫ್ರೀಜ್ ಆಲ್” ವಿಧಾನ ಎಂದೂ ಕರೆಯಲಾಗುತ್ತದೆ). ಅಲ್ಲಿ ತಾಜಾ ಭ್ರೂಣ ವರ್ಗಾವಣೆಯನ್ನು ಆಯ್ಕೆ ಮಾಡಲಾಗುವುದಿಲ್ಲ. ಇಲ್ಲಿ ಎಲ್ಲಾ ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡಲಾಗುತ್ತದೆ ಮತ್ತು ಮುಂದಿನ ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಎಫ್‍ಇಟಿ ಆವರ್ತನದಲ್ಲಿ ವರ್ಗಾಯಿಸಲಾಗುತ್ತದೆ.

ಘನೀಕೃತ ಭ್ರೂಣ ವರ್ಗಾವಣೆಯನ್ನು ಏಕೆ ಆರಿಸಬೇಕು?

ಮಹಿಳೆಯ ಆರೋಗ್ಯ ಪರಿಸ್ಥಿತಿ ಮತ್ತು ಕೆಲವು ಸಂದರ್ಭಗಳನ್ನು ಅವಲಂಬಿಸಿ, ಫರ್ಟಿಲಿಟಿ ವೈದ್ಯರು ಎಫ್‍ಇಟಿಗೆ ಸಲಹೆ ನೀಡಬಹುದು. ಅದು ಮಹಿಳೆಯು ಈಗ ಅಥವಾ ಭವಿಷ್ಯದಲ್ಲಿ ಯಾವುದೇ ಸಮಯದಲ್ಲಿ ಗರ್ಭಿಣಿಯಾಗಲು ಸಹಾಯ ಮಾಡುತ್ತದೆ. ಘನೀಕೃತ ಭ್ರೂಣವು ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ:

• ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡುವ ಅವಕಾಶ: ಐವಿಎಫ್ ಆವರ್ತನದಿಂದ ಹಲವಾರು ಭ್ರೂಣಗಳು ಉಂಟಾಗಬಹುದು. ಬಹು ಭ್ರೂಣಗಳನ್ನು ಗರ್ಭಾಶಯಕ್ಕೆ ವರ್ಗಾಯಿಸುವುದರಿಂದ ಬಹು ಗರ್ಭಧಾರಣೆಯ ಅಪಾಯವನ್ನು ಹೆಚ್ಚಿಸುತ್ತದೆ (ತ್ರಿವಳಿ ಅಥವಾ ಕ್ವಾಡ್ರುಪ್ಲೆಟ್‍ಗಳಂತಹವು). ಈ ಅಪಾಯವನ್ನು ಕಡಿಮೆ ಮಾಡಲು, ವೈದ್ಯರು ಉತ್ತಮ ಮತ್ತು ಸುರಕ್ಷಿತ ಗರ್ಭಧಾರಣೆಯನ್ನು ಹೊಂದಲು ಆಯ್ದ ಏಕ ಭ್ರೂಣ ವರ್ಗಾವಣೆಯನ್ನು (ಇಎಸ್‍ಇಟ್) ಶಿಫಾರಸು ಮಾಡಬಹುದು. ಒಬ್ಬರು ತಮ್ಮ ಐವಿಎಫ್ ಚಕ್ರದ ನಂತರ ಯಾವುದೇ “ಹೆಚ್ಚುವರಿ ಭ್ರೂಣಗಳನ್ನು” ಫ್ರೀಜ್ ಮಾಡಲು ಅಥವಾ ಕ್ರಿಯೋಪ್ರಿಸರ್ವ್ ಮಾಡಲು ಆಯ್ಕೆ ಮಾಡಬಹುದು.

ತಾಜಾ ಐವಿಎಫ್ ವರ್ಗಾವಣೆ ವಿಫಲವಾದಾಗ ಕ್ರಿಯೋಪ್ರಿಸವ್ರ್ಡ್ ಭ್ರೂಣಗಳು ಬಳಕೆಯಾಗುತ್ತವೆ. ಉದಾಹರಣೆಗೆ, ನೀವು ಐವಿಎಫ್ ಆವರ್ತನದಿಂದ ಐದು ಭ್ರೂಣಗಳನ್ನು ಪಡೆಯುತ್ತೀರಿ ಎಂದುಕೊಳ್ಳೋಣ. ಆಗ ನಿಮ್ಮ ವೈದ್ಯರು ತಾಜಾ ಭ್ರೂಣ ವರ್ಗಾವಣೆಯಾಗಿ ಆಯ್ದ ಒಂದು ಭ್ರೂಣ ವರ್ಗಾವಣೆಯನ್ನು ಶಿಫಾರಸು ಮಾಡುತ್ತಾರೆ. ಐದು ಐವಿಎಫ್ ಭ್ರೂಣಗಳಲ್ಲಿ ಒಂದನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಉಳಿದ ನಾಲ್ಕು ಕ್ರಿಯೋಪ್ರಿಸವ್ರ್ಡ್ ಆಗಿರುತ್ತವೆ. ಭ್ರೂಣ ವರ್ಗಾವಣೆಯು ಯಶಸ್ವಿ ಗರ್ಭಧಾರಣೆಗೆ ಕಾರಣವಾಗದಿದ್ದರೆ, ಮಹಿಳೆಗೆ ಎರಡು ಆಯ್ಕೆಗಳಿರುತ್ತವೆ. ಅವರು ಇನ್ನೊಂದು ಪೂರ್ಣ ಐವಿಎಫ್ ಚಕ್ರವನ್ನು ಆರಿಸಿಕೊಳ್ಳಬಹುದು ಅಥವಾ ಒಂದು ಅಥವಾ ಎರಡು ಕ್ರಿಯೋಪ್ರಿಸರ್ವ್ಡ್‌ ಭ್ರೂಣಗಳನ್ನು ವರ್ಗಾಯಿಸಬಹುದು. ಸಂರಕ್ಷಿತ ಹೆಪ್ಪುಗಟ್ಟಿದ ಭ್ರೂಣಗಳು ಅಥವಾ ಕ್ರಿಯೋಪ್ರಿಸರ್ವ್ಡ್‌ ಭ್ರೂಣಗಳಿಂದ ಒಂದು ಅಥವಾ ಹೆಚ್ಚಿನ ಭ್ರೂಣಗಳನ್ನು ವರ್ಗಾಯಿಸುವುದು ವೆಚ್ಚಕ್ಕೆ ಸಂಬಂಧಿಸಿದಂತೆ ಅತ್ಯಂತ ಪರಿಣಾಮಕಾರಿ ಆಯ್ಕೆಯಾಗಿದೆ.

• ಇನ್ನೊಂದು ಮಗುವಿಗೆ ಯೋಜನೆ: ಕ್ರಿಯೋಪ್ರಿಸರ್ವ್ಡ್‌ ಭ್ರೂಣಗಳು ಅನಿರ್ದಿಷ್ಟವಾಗಿ ಮಂಜುಗಡ್ಡೆಯಲ್ಲಿ ಉಳಿಯಬಹುದು. ದಂಪತಿಗಳು ತಮ್ಮ ಐವಿಎಫ್-ಗರ್ಭಧಾರಿತ ಮಗುವಿಗೆ, ಒಡಹುಟ್ಟಿದವರನ್ನು ನೀಡಲು ನಿರ್ಧರಿಸಿದರೆ ಮತ್ತು ಅವರು ಇನ್ನೂ ಕ್ರಿಯೋಪ್ರಿಸರ್ವೇಷನ್‍ನಲ್ಲಿ ಭ್ರೂಣಗಳನ್ನು ಹೊಂದಿದ್ದರೆ, ಆ ಕ್ರಿಯೋಪ್ರಿಸರ್ವ್ಡ್ ಭ್ರೂಣಗಳು ಮತ್ತೆ ಗರ್ಭಾವಸ್ಥೆ ಪಡೆಯಲು ಸಹಾಯ ಮಾಡಬಹುದು. ದಂಪತಿಗಳು ಸಂಪೂರ್ಣ ಐವಿಎಫ್ ಪ್ರಕ್ರಿಯೆಯನ್ನು ಪುನರಾವರ್ತಿಸಬೇಕಾಗಿಲ್ಲ.

• ಜೆನೆಟಿಕ್ ಸ್ಕ್ರೀನಿಂಗ್ ವ್ಯಾಪ್ತಿ: ಪಿಜಿಡಿ ಮತ್ತು ಪಿಜಿಎಸ್ ಅನ್ನು ಬಳಸಿಕೊಂಡು ನಿರ್ದಿಷ್ಟ ಆನುವಂಶಿಕ ಕಾಯಿಲೆಗಳು ಅಥವಾ ದೋಷಗಳಿಗಾಗಿ ಭ್ರೂಣಗಳನ್ನು ಸ್ಕ್ರೀನಿಂಗ್ ಮಾಡುವುದು ಸಾಧ್ಯ. ಅಂಡಾಣು ಮರುಪಡೆಯುವಿಕೆ ಆದಮೇಲೆ ಫರ್ಟಿಲೈಸೇಷನ್ ನಂತರದ ಮೂರು ಅಥವಾ ಐದನೇ ದಿನದಂದು ಬಯಾಪ್ಸಿ ಮೂಲಕ ಇದನ್ನು ಮಾಡಲಾಗುತ್ತದೆ. ಪಿಜಿಡಿ ಮತ್ತು ಪಿಜಿಎಸ್ ಆನುವಂಶಿಕ ಕಾಯಿಲೆಗಳನ್ನು ಮುಂದಿನ ಪೀಳಿಗೆಯವರಿಗೆ ಸಾಗಿಸುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭ್ರೂಣಗಳು ಹೆಪ್ಪುಗಟ್ಟಿದರೆ ಮಾತ್ರ ಇದನ್ನು ಮಾಡಬಹುದು.

ಎಫ್‍ಇಟಿ ಪೂರ್ವ ಇಂಪ್ಲಾಂಟೇಶನ್ ಜೆನೆಟಿಕ್ ಪರೀಕ್ಷೆಯ (ಪಿಜಿಟಿ) ಅವಿಭಾಜ್ಯ ಅಂಗವಾಗಿದೆ. ಬಯಾಪ್ಸಿ ಮಾಡಿದ ಎಲ್ಲಾ ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡಲಾಗುತ್ತದೆ. ಫಲಿತಾಂಶಗಳು ಬಂದ ನಂತರ, ಪಿಜಿಟಿಯ ಫಲಿತಾಂಶಗಳ ಆಧಾರದ ಮೇಲೆ ಎಫ್‍ಇಟಿ-ಐವಿಎಫ್ ಆವರ್ತನಗಳಿಗೆ ಯಾವ ಭ್ರೂಣಗಳನ್ನು ವರ್ಗಾಯಿಸಬೇಕೆಂದು ವೈದ್ಯರು ನಿರ್ಧರಿಸುತ್ತಾರೆ.

• ಐಚ್ಛಿಕ ಕಾರ್ಯವಿಧಾನವನ್ನು ಆಯ್ಕೆ ಮಾಡುವ ಅವಕಾಶ: ಮಹಿಳೆಯು ಪಿಜಿಡಿ/ಪಿಜಿಎಸ್ ಜೊತೆಗೆ ಅಥವಾ ಪಿಜಿಡಿ/ಪಿಜಿಎಸ್ ಇಲ್ಲದೆಯೇ ಐಚ್ಛಿಕ ಘನೀಕೃತ ಭ್ರೂಣ ವರ್ಗಾವಣೆಯನ್ನು ಆರಿಸಿಕೊಳ್ಳಬಹುದು. “ಎಲ್ಲವನ್ನೂ ಫ್ರೀಜ್ ಮಾಡುವ” ವಿಧಾನದೊಂದಿಗೆ, ತಾಜಾ ಭ್ರೂಣ ವರ್ಗಾವಣೆಯು ಯೋಜನೆಯ ಭಾಗವಾಗಿರುವುದಿಲ್ಲ. ಇದು ಪಿಜಿಡಿ/ಪಿಜಿಎಸ್ ಅಥವಾ ಜೆನೆಟಿಕ್ ಸ್ಕ್ರೀನಿಂಗ್ ಇಲ್ಲದೆಯೂ ಸಂಭವಿಸಬಹುದು. ತಾಜಾ ಭ್ರೂಣ ವರ್ಗಾವಣೆಯು ಕಾರ್ಯಸಾಧ್ಯವಾದ, ಆರೋಗ್ಯಕರ ಗರ್ಭಧಾರಣೆಗೆ ಕಾರಣವಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದನ್ನು ತಪ್ಪಿಸಲು ಮತ್ತು ಸುರಕ್ಷಿತವಾಗಿರಲು, ಅಂಡಾಣುವನ್ನು ಹಿಂಪಡೆದ ಮೂರರಿಂದ ಐದು ದಿನಗಳ ನಂತರ ಎಲ್ಲಾ ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡಲಾಗುತ್ತದೆ. ಒಂದು ತಿಂಗಳ ನಂತರ, ಅಂಡಾಶಯದ ಉತ್ತೇಜಕ ಔಷಧಿಗಳ ಪ್ರಭಾವವಿಲ್ಲದೆ ಎಂಡೊಮೆಟ್ರಿಯಮ್ ರೂಪುಗೊಳ್ಳುವ ಅವಕಾಶವಿರುತ್ತದೆ. ಆಗ ಹೆಪ್ಪುಗಟ್ಟಿದ ಭ್ರೂಣದ ವರ್ಗಾವಣೆಯು ನಡೆಯಬಹುದು. ಆ ಎಫ್‍ಇಟಿ ಆವರ್ತನದಲ್ಲಿ, ಫರ್ಟಿಲಿಟಿ ವೈದ್ಯರು ಎಂಡೊಮೆಟ್ರಿಯಲ್ ಗ್ರಹಣ ಕ್ರಿಯೆಯನ್ನು ಹೆಚ್ಚಿಸಲು ಹಾರ್ಮೋನ್ ಔಷಧಗಳನ್ನು ಶಿಫಾರಸು ಮಾಡಬಹುದು (ವಿಶೇಷವಾಗಿ ಮಹಿಳೆ ಸ್ವತಃ ಅಂಡೋತ್ಪತ್ತಿ ಮಾಡದಿದ್ದರೆ, ವೈದ್ಯರು ಎಫ್‍ಇಟಿಯನ್ನು ಹಾರ್ಮೋನುಗಳ ಔಷಧಿಗಳೊಂದಿಗೆ ಮಾಡಬಹುದು.).

• ತಾಜಾ ಭ್ರೂಣ ವರ್ಗಾವಣೆ ಯೋಜನೆ ಆಯ್ಕೆ ಮಾಡಲಾಗಿಲ್ಲ: ವಿವಿಧ ಕಾರಣಗಳಿಗಾಗಿ ತಾಜಾ ಭ್ರೂಣ ವರ್ಗಾವಣೆಯನ್ನು ಆಯ್ಕೆ ಮಾಡದೇ ಇರಬಹುದು. ಉದಾಹರಣೆಗೆ, ಮಹಿಳೆಯು ಜ್ವರ ಹೊಂದಿದ್ದಲ್ಲಿ ಅಥವಾ ಅಂಡಾಣುವನ್ನು ಹಿಂಪಡೆದ ನಂತರ ಆದರೆ ವರ್ಗಾವಣೆಯ ಮುನ್ನ ಯಾವುದೇ ಇತರೆ ಅನಾರೋಗ್ಯದಿಂದ ಬಳಲುತ್ತಿದ್ದರೆ ದಂಪತಿಗಳು ಎಫ್‍ಇಟಿ ಹೊಂದಲು ಸಾಧ್ಯವಿಲ್ಲ. ಎಂಡೊಮೆಟ್ರಿಯಲ್ ಪರಿಸ್ಥಿತಿಗಳು ಉತ್ತಮವಾಗಿಲ್ಲ ಎಂದು ಅಲ್ಟ್ರಾಸೌಂಡ್‍ನಲ್ಲಿ ಕಂಡರೆ ಫರ್ಟಿಲಿಟಿ ವೈದ್ಯರು ಎಲ್ಲಾ ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡಲು ಶಿಫಾರಸು ಮಾಡಬಹುದು. ನಂತರ ಎಫ್‍ಇಟಿ-ಐವಿಎಫ್‍ಅನ್ನು ನಂತರದ ದಿನಾಂಕಕ್ಕೆ ನಿಗದಿಪಡಿಸಬಹುದು.

• ಭ್ರೂಣ ದಾನಿಯಾಗಿ ಬಳಸಿ: ಕೆಲವು ದಂಪತಿಗಳು ತಮ್ಮ ಬಳಕೆಯಾಗದ ಭ್ರೂಣಗಳನ್ನು ಮತ್ತೊಂದು ಸಂತಾನಹೀನ ದಂಪತಿಗಳಿಗೆ ದಾನ ಮಾಡಲು ಆಯ್ಕೆ ಮಾಡುತ್ತಾರೆ. ದಂಪತಿಗಳು ಭ್ರೂಣ ದಾನಿಯನ್ನು ಬಳಸಲು ನಿರ್ಧರಿಸಿದರೆ, ಅವರ ಆವರ್ತನವು ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯಾಗಿರುತ್ತದೆ.

• ಒಎಚ್‍ಎಸ್‍ಎಸ್ ಅಪಾಯ: ಅಂಡಾಶಯದ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್ (ಒಎಚ್‍ಎಸ್‍ಎಸ್) ಒಂದು ಅಪಾಯವಾಗಿದ್ದು, ಫಲವತ್ತತೆ ಔಷಧಗಳು (ತೀವ್ರ ಮತ್ತು ಅಪರೂಪದ ಸಂದರ್ಭಗಳಲ್ಲಿ) ಫಲವತ್ತತೆಯ ನಷ್ಟ ಮತ್ತು ಸಾವಿಗೆ ಕಾರಣವಾಗಬಹುದು. ತಾಜಾ ಭ್ರೂಣ ವರ್ಗಾವಣೆಯ ಮೊದಲು ಒಎಚ್‍ಎಸ್‍ಎಸ್‍ನ ಅಪಾಯವು ಅಧಿಕವಾಗಿ ಕಂಡುಬಂದರೆ, ಅದು ರದ್ದುಗೊಳ್ಳುತ್ತದೆ. ಇದು ಸಂಭವಿಸಿದಾಗ, ಎಲ್ಲಾ ಭ್ರೂಣಗಳನ್ನು ಕ್ರಿಯೋಪ್ರಿಸರ್ವ್ ಮಾಡಲಾಗುತ್ತದೆ. ಗರ್ಭಾವಸ್ಥೆಯು ಒಎಚ್‍ಎಸ್‍ಎಸ್ ಅನ್ನು ಉಲ್ಬಣಗೊಳಿಸುವುದರಿಂದ ರದ್ದುಗೊಳಿಸುವುದು ಅವಶ್ಯಕ. ಮಹಿಳೆಯು ಒಎಚ್‍ಎಸ್‍ಎಸ್‍ನಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆಕೆ ಒಎಚ್‍ಎಸ್‍ಎಸ್‍ನಿಂದ ಚೇತರಿಸಿಕೊಂಡ ನಂತರ ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆ ಆವರ್ತನವನ್ನು ಯೋಜಿಸಲಾಗುತ್ತದೆ.

ಘನೀಕೃತ ಭ್ರೂಣ ವರ್ಗಾವಣೆ ಅಥವಾ ತಾಜಾ ಭ್ರೂಣ ವರ್ಗಾವಣೆ, ಯಾವುದು ಉತ್ತಮ?

ತಾಜಾ ಭ್ರೂಣ ವರ್ಗಾವಣೆಗಿಂತ ಫ್ರೀಜ್‌ ಮಾಡಿದ ಭ್ರೂಣ ವರ್ಗಾವಣೆ ಮಾಡಿದರೆ ಗರ್ಭಧಾರಣೆಯ ಯಶಸ್ಸಿನ ಪ್ರಮಾಣ ಉತ್ತಮವಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯ ನಂತರ ಗರ್ಭಧರಿಸಿದ ಗರ್ಭಾವಸ್ಥೆಯು ಉತ್ತಮ ಫಲಿತಾಂಶಗಳನ್ನು ಹೊಂದಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಆದರೂ, ಹೆಚ್ಚಿನ ಅಧ್ಯಯನಗಳು ಕಿರಿಯ ಮಹಿಳೆಯರಲ್ಲಿ ಉತ್ತಮ ಮುನ್ಸೂಚನೆ ತೋರಿಸಿವೆ. 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಮುನ್ಸೂಚನೆ ಅಸ್ಪಷ್ಟವಾಗಿದೆ.

ಎಫ್‍ಇಟಿಯನ್ನು ಆರಿಸಿಕೊಂಡರೆ, ದಂಪತಿಗಳು ಉತ್ತಮ ಫರ್ಟಿಲಿಟಿ ತಜ್ಞರನ್ನು ಸಂಪರ್ಕಿಸಬೇಕು. ಏಕೆಂದರೆ ವೈದ್ಯಕೀಯ ಇತಿಹಾಸವನ್ನು ನೋಡಿದ ನಂತರ ಹೆಚ್ಚಿನ ಚಿಕಿತ್ಸೆಯ ಸಲಹೆ ನೀಡಲು ಅವರು ಉತ್ತಮ ವ್ಯಕ್ತಿಗಳಾಗಿರುತ್ತಾರೆ.

ಎಫ್‍ಇಟಿ ಪ್ರಕ್ರಿಯೆ

• ಮಹಿಳೆಯು ತನ್ನ ಮುಟ್ಟಿನ ಅವಧಿಯನ್ನು ತಲುಪಿದ ನಂತರ, ಬೇಸ್‍ಲೈನ್ ಅಲ್ಟ್ರಾಸೌಂಡ್ ಮತ್ತು ರಕ್ತದ ಮಾದರಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಎಲ್ಲವೂ ಸರಿಯಾಗಿದ್ದರೆ, ಪೂರಕ ಎಸ್ಟ್ರೊಜೆನ್ ನೀಡಲಾಗುತ್ತದೆ. ಇದು ಆರೋಗ್ಯಕರ ಎಂಡೊಮೆಟ್ರಿಯಲ್ ಲೈನಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಸ್ಟ್ರೊಜೆನ್ ಪೂರಕವನ್ನು ಸುಮಾರು ಎರಡು ವಾರಗಳವರೆಗೆ ಮುಂದುವರಿಸಲಾಗುತ್ತದೆ, ನಂತರ ಅಲ್ಟ್ರಾಸೌಂಡ್ ಮತ್ತು ಹೆಚ್ಚಿನ ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

• ಸರಿಸುಮಾರು ಎರಡು ವಾರಗಳ ಎಸ್ಟ್ರೊಜೆನ್ ಬೆಂಬಲದ ನಂತರ, ಪ್ರೊಜೆಸ್ಟರಾನ್ ಬೆಂಬಲವನ್ನು ಸೇರಿಸಲಾಗುತ್ತದೆ. ಪ್ರೊಜೆಸ್ಟರಾನ್ ಅನ್ನು ಇಂಟ್ರಾಮಸ್ಕುಲರ್ ಇಂಜೆಕ್ಷನ್ ಅಥವಾ ಯೋನಿ ಸಪ್ಲಿಮೆಂಟ್ರಿಗಳಾಗಿ (ಜೆಲ್ ಅಥವಾ ಟ್ಯಾಬ್ಲೆಟ್) ನೀಡಲಾಗುತ್ತದೆ.

•ಪ್ರೊಜೆಸ್ಟರಾನ್ ಪೂರಕಗಳು ಯಾವಾಗ ಪ್ರಾರಂಭವಾಗುತ್ತವೆ ಮತ್ತು ಯಾವ ಹಂತದಲ್ಲಿ ಭ್ರೂಣವನ್ನು ಕ್ರಿಯೋಪ್ರ್ರಿಸರ್ವ್ ಮಾಡಲಾಗಿದೆ ಎಂಬುದನ್ನು ಆಧರಿಸಿ ಭ್ರೂಣ ವರ್ಗಾವಣೆಯನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ, ಭ್ರೂಣದ ಘನೀಕರಣವು ಅಂಡಾಣು-ಹಿಂಪಡೆಯುವಿಕೆಯ ನಂತರದ ಐದನೆಯ ದಿನದಲ್ಲಿದ್ದರೆ, ಪ್ರೊಜೆಸ್ಟರಾನ್ ಪೂರೈಕೆಯು ಪ್ರಾರಂಭವಾದ ನಂತರ ಹೆಪ್ಪುಗಟ್ಟಿದ ಭ್ರೂಣದ ವರ್ಗಾವಣೆಯು ಆರನೇ ದಿನಕ್ಕೆ ಇರುತ್ತದೆ.

ಅಪಾಯಗಳು

ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆ ಆವರ್ತನವು ಕಡಿಮೆ ಅಪಾಯವನ್ನು ಹೊಂದಿರುತ್ತದೆ. ಐವಿಎಫ್(ಮತ್ತು ಫರ್ಟಿಲಿಟಿ ಔಷಧಗಳು) ಬಳಸುವಲ್ಲಿ ಒಂದು ಅಪಾಯವೆಂದರೆ ಅಂಡಾಶಯದ ಹೈಪರ್‌ಸ್ಟಿಮ್ಯುಲೇಶನ್ ಸಿಂಡ್ರೋಮ್ (ಒಎಚ್‍ಎಸ್‍ಎಸ್). ಆದರೂ, ನೀವು ಎಫ್‍ಇಟಿ ಆವರ್ತನದಲ್ಲಿ ಒಎಚ್‍ಎಸ್‍ಎಸ್ ಬಗ್ಗೆ ಚಿಂತಿಸಬೇಕಾಗಿಲ್ಲ. ಏಕೆಂದರೆ ಅಂಡಾಶಯವನ್ನು ಉತ್ತೇಜಿಸುವ ಔಷಧಿಗಳು ಬಳಕೆಯಲ್ಲಿಲ್ಲ. ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯಿಂದ ಆಗುವ ಗರ್ಭಧಾರಣೆಗಳು ತಾಜಾ ಭ್ರೂಣ ವರ್ಗಾವಣೆಗಿಂತ ಆರೋಗ್ಯಕರ ವಾಗಿರಬಹುದು. ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಯ ಶಿಶುಗಳು, ಅಕಾಲಿಕ ಜನನ, ಸತ್ತ ಜನನ ಮತ್ತು ಕಡಿಮೆ ಜನನ ತೂಕ ಮುಂತಾದವುಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಸಂಶೋಧನೆ ತೋರಿಸಿದೆ.

ಭ್ರೂಣ ವರ್ಗಾವಣೆಯು ಅಪಸ್ಥಾನೀಯ ಗರ್ಭಧಾರಣೆಯ ಅಪಾಯ ಮತ್ತು ಸೋಂಕಿನ ಅಪಾಯ ಸೇರಿದಂತೆ ಅಪಾಯಗಳನ್ನು ಒಳಗೊಂಡಿದೆ. ಭ್ರೂಣಗಳ ವರ್ಗಾವಣೆಯ ಸಂಖ್ಯೆಯನ್ನು ಆಧರಿಸಿ, ಬಹು ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರಬಹುದು (ಇದು ಗರ್ಭಿಣಿಗೆ ಮತ್ತು ಅವರು ಹೊತ್ತಿರುವ ಭ್ರೂಣಗಳಿಗೆ ತನ್ನದೇ ಆದ ಅಪಾಯಗಳನ್ನು ಹೊಂದಿರುತ್ತದೆ).

ವೆಚ್ಚಗಳು

ವೈದ್ಯಕೀಯ ತನಿಖೆಗಳು, ಸಲಹೆ ಸಮಾಲೋಚನೆಗಳು, ಅಲ್ಟ್ರಾಸೌಂಡ್ ಮಾನಿಟರಿಂಗ್, ಹಾರ್ಮೋನ್ ಬೆಂಬಲ ಮತ್ತು ವರ್ಗಾವಣೆ ಪ್ರಕ್ರಿಯೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿರುವ ವೆಚ್ಚಕ್ಕಾಗಿ ದಂಪತಿಗಳು ಯೋಜನೆ ಕೈಗೊಳ್ಳಬೇಕಾಗಿದೆ. ಸಾಮಾನ್ಯವಾಗಿ ಕೆಲವು ಪ್ರಮಾಣದ ಲೂಟಿಯಲ್ ಹಂತದ ಬೆಂಬಲವಿದೆ - ಪರಿಕಲ್ಪನೆಯ ಯಶಸ್ವಿ ಮುಂದುವರಿಕೆಗಾಗಿ ‘ಪೂರಕ’ ಎಂದು ನೀಡಲಾಗುವ ಔಷಧಗಳು ಸೇರಿದಂತೆ ಎಫ್‍ಇಟಿ ಆವರ್ತನದ ವೆಚ್ಚವು ಸಾಮಾನ್ಯವಾಗಿ ಸಂಪೂರ್ಣ ಐವಿಎಫ್ ಆವರ್ತನಕ್ಕಿಂತ ಕಡಿಮೆಯಿರುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ