ಹಿಸ್ಟರೊಸ್ಕೋಪಿ

ಹಿಸ್ಟರೊಸ್ಕೋಪಿ

ಹಿಸ್ಟರೊಸ್ಕೋಪಿ ಗರ್ಭಾಶಯ ಕುಹರವನ್ನು ವೀಕ್ಷಿಸಲು ಗರ್ಭಕಂಠದ ಮೂಲಕ ಟೆಲಿಸ್ಕೋಪನ್ನು ಒಳಗೆ ಬಿಡುವ, ಟ್ರಾನ್ಸ್‌ಸರ್ವಿಕಲ್ ಮಾರ್ಗದಿಂದ (ಗರ್ಭಕಂಠದ ಮೂಲಕ) ಎಂಡೊಮೆಟ್ರಿಯಲ್ ಕುಳಿಯಲ್ಲಿ ನೋಡುವ ಮತ್ತು ಕಾರ್ಯನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಸಾಮಾನ್ಯ ಮೂಲ ಹಿಸ್ಟರೊಸ್ಕೋಪ್ ಬೇಕಾದ ಭಾಗವನ್ನು ವೀಕ್ಷಿಸುವುದಕ್ಕೆ ಸಹಾಯ ಮಾಡಲು ಬೆಳಕು ಹೊಂದಿರುವ ಉದ್ದವಾದ, ಕಿರಿದಾದ ದೂರದರ್ಶಕವಾಗಿದೆ. ಹಿಸ್ಟರೊಸ್ಕೋಪಿಯು ಕನಿಷ್ಠ ಆಕ್ರಮಣಕಾರಿ ಹಸ್ತಕ್ಷೇಪವಾಗಿದ್ದು, ಇದು ವಿವಿಧ ಗರ್ಭಾಶಯದೊಳಗಿನ ಮತ್ತು ಎಂಡೋಸರ್ವಿಕಲ್ ಸಮಸ್ಯೆಗಳ ರೋಗನಿರ್ಣಯ ಮತ್ತು ಚಿಕಿತ್ಸಿಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಡಯಾಗ್ನೋಸ್ಟಿಕ್ ಮತ್ತು ಆಪರೇಟಿವ್ ಹಿಸ್ಟರೊಸ್ಕೋಪಿ ಅವುಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವಗಳಿಂದಾಗಿ ಸ್ತ್ರೀರೋಗ ಶಾಸ್ತ್ರದ ಅಭ್ಯಾಸದಲ್ಲಿ ಪ್ರತ್ಯೇಕ ಮಾನದಂಡವಾಗಿದೆ.

ಹಿಸ್ಟರೊಸ್ಕೋಪಿಯ ವಿಧಗಳು ಯಾವುವು?

• ಡಯಾಗ್ನೋಸ್ಟಿಕ್ ಹಿಸ್ಟರೊಸ್ಕೋಪಿ - ಯಾವುದೇ ರೋಗಶಾಸ್ತ್ರದ ಅಥವಾ ಅಸಹಜ ಗಾಯಗಳಿಗಾಗಿ ಗರ್ಭಾಶಯದ ಒಳಭಾಗವನ್ನು ಪರೀಕ್ಷಿಸಲು ಗರ್ಭಕಂಠ ಮತ್ತು ಗರ್ಭಾಶಯದ ಕುಹರದ ಮೂಲಕ ದೂರದರ್ಶಕ(ಟೆಲಿಸ್ಕೋಪ್)ವನ್ನು ಒಳಸೇರಿಸಲಾಗುತ್ತದೆ.

• ಆಪರೇಟಿವ್ ಹಿಸ್ಟರೊಸ್ಕೋಪಿ - ರೋಗನಿರ್ಣಯದ ಹಿಸ್ಟರೊಸ್ಕೋಪಿಯಲ್ಲಿ ಯಾವುದೇ ರೋಗ ಅಥವಾ ಅಸಹಜತೆ ಕಂಡುಬಂದಲ್ಲಿ ಅದರ ಶಸ್ತ್ರಚಿಕಿತ್ಸೆಗಾಗಿ ಗರ್ಭಾಶಯದ ಕುಹರದೊಳಗೆ ಗರ್ಭಕಂಠದ ಮೂಲಕ ದೂರದರ್ಶಕವನ್ನು ಸೇರಿಸಲಾಗುತ್ತದೆ.

ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಸೂಚನೆಗಳು

ಹಿಸ್ಟರೊಸ್ಕೋಪಿಯ ಅಗತ್ಯವಿರುವಂತಹ ಗರ್ಭಾಶಯದ (ಕುಹರ) ರೋಗಶಾಸ್ತ್ರದ ರೋಗನಿರ್ಣಯ ಮತ್ತು ಶಸ್ತ್ರಕ್ರಿಯಾ ಚಿಕಿತ್ಸೆ:

• ಅಸಹಜ ಗರ್ಭಾಶಯದ ರಕ್ತಸ್ರಾವ (ಎಯುಬಿ): ಇದು ಅತಿಯಾದ ಋತುಚಕ್ರದ ಹರಿವು, ಅವಧಿಗಳ ನಡುವೆ ರಕ್ತಸ್ರಾವ, ಋತುಬಂಧದ ನಂತರ ರಕ್ತಸ್ರಾವ (ಪಿಎಂಬಿ), ಶಂಕಿತ ಮಾರಕತೆ(ಮ್ಯಾಲಿಗ್ನೆನ್ಸಿ), ಅಥವಾ ಮ್ಯಾಲಿಗ್ನೆನ್ಸಿ ಪೂರ್ವಭಾವಿ ಗಾಯಗಳು. ಗರ್ಭಾಶಯದೊಳಗಿನ ಅಸಹಜತೆಗಳ ನೇರ ವೀಕ್ಷಣೆ ಮತ್ತು ರೋಗನಿರ್ಣಯವಾಗಿ ಎಯುಬಿ ನಿರ್ವಹಣೆಯಲ್ಲಿ ಡಿ&ಸಿ ಬದಲಿಗೆ ಬಹುತೇಕ ಹಿಸ್ಟರೊಸ್ಕೋಪಿ ಬಂದಿರುತ್ತದೆ ಮತ್ತು ಏಕಕಾಲದಲ್ಲಿ ಚಿಕಿತ್ಸೆ ಮಾಡಬಹುದು.

• ಗರ್ಭಾಶಯದ ಕುಹರದೊಳಗಿನ ಎಂಡೊಮೆಟ್ರಿಯಲ್ ಪಾಲಿಪ್ಸ್ ಮತ್ತು ಫೈಬ್ರಾಯ್ಡ್‌ಗಳನ್ನು ಸಬ್‍ಮ್ಯೂಕಸ್ ಮಯೋಮಾ ಎಂದೂ ಕರೆಯುತ್ತಾರೆ: ಎಂಡೊಮೆಟ್ರಿಯಲ್ ಪಾಲಿಪ್ಸ್ ಮತ್ತು ಫೈಬ್ರಾಯ್ಡ್‌ಗಳು ಅನಿಗದಿತ ಯೋನಿ ರಕ್ತಸ್ರಾವಕ್ಕೆ ಕಾರಣವಾಗುತ್ತವೆ. 35 ವರ್ಷಕ್ಕಿಂತ ಮೇಲ್ಪಟ್ಟ 20% ಮಹಿಳೆಯರು ಫೈಬ್ರಾಯ್ಡ್‌ಗಳನ್ನು ಹೊಂದಿದ್ದಾರೆ, ಇದು ಅತ್ಯಂತ ಸಾಮಾನ್ಯವಾದ ಸೊಂಟದ ಭಾಗದಲ್ಲಿನ ಗೆಡ್ಡೆಯಾಗಿದೆ. ಮೆನೊರ್ಹೇಜಿಯಾ (ಅತಿಯಾದ ರಕ್ತಸ್ರಾವ) ಉಂಟುಮಾಡುವ ಸಬ್‍ಮ್ಯುಕೋಸಲ್ ಫೈಬ್ರಾಯ್ಡ್‌ಗಳು ಶಸ್ತ್ರಚಿಕಿತ್ಸೆ ನಡೆಸಬೇಕೆಂಬುದಕ್ಕೆ ಸಾಮಾನ್ಯ ಸೂಚನೆಯಾಗಿದೆ. ಇತರ ಸೂಚನೆಗಳಲ್ಲಿ ಸಂತಾನೋತ್ಪತ್ತಿ ಸಮಸ್ಯೆ, ಡಿಸ್ಮೆನೊರಿಯಾ ಮತ್ತು ಸೊಂಟದಲ್ಲಿನ ನೋವು ಸೇರಿವೆ. ಗರ್ಭಾಶಯದ ಕುಳಿಯಲ್ಲಿ ಪಾಲಿಪ್ಸ್ ಮತ್ತು ಸಬ್‍ಮ್ಯುಕೋಸಲ್ ಫೈಬ್ರಾಯ್ಡ್‌ಗಳನ್ನು ಗುರುತಿಸುವಲ್ಲಿ ಡಯಾಗ್ನೋಸ್ಟಿಕ್ ಹಿಸ್ಟರೊಸ್ಕೋಪಿ ಶೇ. 88 ವರೆಗೆ ಪರಿಣಾಮಕಾರಿಯಾಗಿದೆ.

• ಮುಲ್ಲೆರಿಯನ್ ವೈಪರೀತ್ಯಗಳು: ಮುಲ್ಲೆರಿಯನ್ ವೈಪರೀತ್ಯಗಳು ಸರಿಸುಮಾರು ಶೇ. 1-2 ಮಹಿಳೆಯರಲ್ಲಿ, ಶೇ. 4ರಷ್ಟು ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ಮಹಿಳೆಯರಲ್ಲಿ ಮತ್ತು ಮರುಕಳಿಸುವ ಗರ್ಭಪಾತಗಳನ್ನು ಹೊಂದಿರುವ ಶೇ. 10-15ರಷ್ಟು ರೋಗಿಗಳಲ್ಲಿ ಕಂಡುಬರುತ್ತವೆ. ಈ ವೈಪರೀತ್ಯಗಳು ಡಿಡೆಲ್ಫಿಸ್‍ನಿಂದ (ಒಂದು ಜೋಡಿ ಗರ್ಭಾಶಯ, ಗರ್ಭಕಂಠಗಳು ಮತ್ತು ಯೋನಿ ಇರುವಂತಹ ಗರ್ಭಾಶಯದ ವಿರೂಪ) ಮುಲ್ಲೆರಿಯನ್ ಅಜೆನೆಸಿಸ್‍ವರೆಗೆ (ಗರ್ಭಾಶಯ ಇಲ್ಲದಿರುವ ಜನ್ಮಜಾತ ವಿರೂಪ ಮತ್ತು ಸಂಬಂಧಿತ ಅಂಗಗಳು ಬೆಳವಣಿಗೆ ಹೊಂದದಿರುವುದು).

• ಜನ್ಮಜಾತ ಗರ್ಭಾಶಯದ ವಿರೂಪಗಳು (ಗರ್ಭಾಶಯದ ಒಳಗಿನ ಸೆಪ್ಟಮ್): ಶೇ. 35ರಷ್ಟು ಗರ್ಭಾಶಯದ ರಚನೆಯಲ್ಲಿನ ವೈಪರೀತ್ಯಗಳು ಕಂಡಲ್ಲಿ ಅದು ಸೆಪ್ಟೇಟ್ ಗರ್ಭಾಶಯವಾಗಿದ್ದು, ಇದು ಸಂತಾನೋತ್ಪತ್ತಿ ವೈಫಲ್ಯದ ಘಟನೆಗಳೊಂದಿಗೆ ಅತ್ಯಂತ ಹೆಚ್ಚಿನ ಸಂಬಂಧ ಹೊಂದಿದೆ.

• ಸಂತಾನೋತ್ಪತ್ತಿ ಸಮಸ್ಯೆ: ಹಿಸ್ಟರೊಸ್ಕೋಪಿಯು ಗರ್ಭಾಶಯದ ಕುಹರದ ಮೌಲ್ಯಮಾಪನಕ್ಕಾಗಿ ಹಿಸ್ಟರೊಸಲ್ಪಿಂಗೋಗ್ರಫಿಗೆ ಸಮನಾಗಿರುತ್ತದೆ ಮತ್ತು ಇದು ಸಾಮಾನ್ಯವಾಗಿ ವಾಡಿಕೆಯ ಸಂತಾನೋತ್ಪತ್ತಿ ಸರಿಪಡಿಸುವ ಕೆಲಸದ ಭಾಗವಾಗಿರುವುದಿಲ್ಲ, ಏಕೆಂದರೆ ಇದು ಗರ್ಭಾಶಯದ ತುಂಬುವಿಕೆಯ ದೋಷಗಳ ಕಾರಣವನ್ನು ಪತ್ತೆಹಚ್ಚುವಲ್ಲಿ ನಿಖರತೆಯನ್ನು ಹೆಚ್ಚಿಸುತ್ತದೆ, ಏಕೆಂದರೆ ವಿವರಿಸಲಾಗದ ಸಂತಾನೋತ್ಪತ್ತಿ ಸಮಸ್ಯೆಯಲ್ಲಿ ಗರ್ಭಾಶಯದ ಕುಹರ ಮತ್ತು ಗರ್ಭಕಂಠವನ್ನು ಮೌಲ್ಯಮಾಪನ ಮಾಡಲು ಲ್ಯಾಪರೋಸ್ಕೊಪಿ ಜೊತೆಗೆ ಹಿಸ್ಟೆರೋಸ್ಕೋಪಿಯನ್ನು ನಡೆಸಬಹುದು.

• ಗರ್ಭಾಶಯದ ಅಂಟಿಕೊಳ್ಳುವಿಕೆಗಳು (ಆಶರ್ಮನ್ಸ್ ಸಿಂಡ್ರೋಮ್): ಅಮೆನೋರಿಯಾ ಅಥವಾ ಸಂತಾನೋತ್ಪತ್ತಿ ಸಮಸ್ಯೆಯು ಹೆಚ್ಚಾಗಿ ಗರ್ಭಾಶಯದ ಅಂಟಿಕೊಳ್ಳುವಿಕೆಯಿಂದ (ಐಯುಎ) ಉಂಟಾಗುತ್ತದೆ, ಸಾಮಾನ್ಯ ಜನಸಂಖ್ಯೆಯಲ್ಲಿ ಗರ್ಭಾಶಯದ ಅಂಟಿಕೊಳ್ಳುವಿಕೆಯ ಪ್ರಕರಣಗಳ ಪ್ರಮಾಣವು ಶೇ. 1.5ರಷ್ಟಾಗಿದೆ, ಡೈಲೇಷನ್ ಕ್ಯುರೆಟ್ಟೇಜ್‍ಗಳೊಂದಿಗೆ ಚಿಕಿತ್ಸೆ ನೀಡಲಾದ 3 ಅಥವಾ ಹೆಚ್ಚಿನ ಸ್ವಾಭಾವಿಕ ಗರ್ಭಪಾತ ಮತ್ತು ಚಿಕಿತ್ಸೆ ನಂತರ 30% ವರೆಗೆ ಹೆಚ್ಚಾಗುತ್ತದೆ.

• ಸಂತಾನಶಕ್ತಿ ಹರಣ: ಹಿಸ್ಟರೊಸ್ಕೋಪಿಕ್ ಸ್ಟೆರ್‍ಲೈಸೇಷನ್ (ಸಂತಾನಶಕ್ತಿ ಹರಣ) ಬದಲಾಯಿಸಲಾಗದ ಟ್ಯೂಬಲ್ ಸ್ಟೆರ್‍ಲೈಸೇಷನ್ ಟ್ರಾನ್ಸ್‌ಸರ್ವಿಕಲ್ ಅನ್ನು ನಡೆಸಬಹುದು.

• ಪ್ರಾಕ್ಸಿಮಲ್ ಟ್ಯೂಬಲ್ ಅಡಚಣೆ: ಎಚ್‍ಎಸ್‍ಜಿಯಲ್ಲಿ ಫಾಲೋಪಿಯನ್ ಟ್ಯೂಬ್ ಅನ್ನು ಪ್ರವೇಶಿಸಲು ವ್ಯತಿರಿಕ್ತತೆಯ ವೈಫಲ್ಯವಿದ್ದ ಸಂದರ್ಭಗಳಲ್ಲಿ ಫಾಲೋಪಿಯನ್ ಟ್ಯೂಬ್‍ನಲ್ಲಿನ ಬ್ಲಾಕ್‍ಗಾಗಿ ಹಿಸ್ಟರೊಸ್ಕೋಪಿಕ್ ಟ್ಯೂಬಲ್ ಕ್ಯಾನ್ಯುಲೇಶನ್ ಅನ್ನು ಹೆಚ್ಚಾಗಿ ಸೂಚಿಸಲಾಗುತ್ತದೆ.

• ಸ್ಥಳಾಂತರವಾದ / ಎಂಬೆಡೆಡ್ ಗರ್ಭಾಶಯದ ಸಾಧನಗಳನ್ನು ತೆಗೆದುಹಾಕಲು: ಸೋನೋಗ್ರಫಿ-ಮಾರ್ಗದರ್ಶನದ ಮರುಪಡೆಯುವಿಕೆ ವಿಫಲವಾದ ನಂತರ ನೇರ ದೃಶ್ಯೀಕರಣದ ಅಡಿಯಲ್ಲಿ ಸ್ಥಳಾಂತರವಾದ / ಎಂಬೆಡೆಡ್ ಗರ್ಭಾಶಯದ ಸಾಧನಗಳನ್ನು ತೆಗೆದುಹಾಕಲು ಹಿಸ್ಟರೊಸ್ಕೋಪಿಯನ್ನು ಬಳಸಬಹುದು.

• ಪುನರಾವರ್ತಿತ ಗರ್ಭಪಾತಗಳ ಸಂದರ್ಭದಲ್ಲಿ

• ಗರ್ಭಧಾರಣೆ ಮುಗಿದ ನಂತರ ಉಳಿದುಕೊಂಡ ತುಣುಕುಗಳ ತೆರವುಗೊಳಿಸುವಲ್ಲಿ

• ಎಯುಬಿ ಚಿಕಿತ್ಸೆಯಾಗಿ ಎಂಡೊಮೆಟ್ರಿಯಲ್ ಅಬ್ಲೇಶನ್‍ಗಾಗಿ

ಹಿಸ್ಟರೊಸ್ಕೋಪಿಯ ಪ್ರಯೋಜನಗಳು

ಸಾಂಪ್ರದಾಯಿಕ ಡೈಲೇಷನ್ ಮತ್ತು ಕ್ಯುರೆಟ್ಟೇಜ್(ಡಿ & ಸಿ)ಗಿಂತ ಹಿಸ್ಟರೊಸ್ಕೋಪಿಯ ಪ್ರಯೋಜನಗಳು: ಡಿ & ಸಿಗಿಂತ ಲಾಭಗಳೆಂದರೆ ಗರ್ಭಾಶಯದ ನಿರ್ದಿಷ್ಟ ಪ್ರದೇಶಗಳ ಅಂಗಾಂಶ ಮಾದರಿಗಳನ್ನು ವೈದ್ಯರು ತೆಗೆದುಕೊಳ್ಳಬಹುದು ಮತ್ತು ಡಿ & ಸಿ ಯಲ್ಲಿ ತಪ್ಪಿಸಿಕೊಳ್ಳಬಹುದಾದ ಯಾವುದೇ ಫೈಬ್ರಾಯ್ಡ್‌ಗಳು, ಪಾಲಿಪ್ಸ್ ಅಥವಾ ರಚನಾತ್ಮಕ ಅಸಹಜತೆಗಳನ್ನು ವೀಕ್ಷಿಸಬಹುದು.

ಸಂತಾನೋತ್ಪತ್ತಿ ಸಮಸ್ಯೆ ಹೊಂದಿರುವ ರೋಗಿಗಳಿಗೆ ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆ: ಗರ್ಭಾಶಯದ ಕುಹರದ ರೋಗಶಾಸ್ತ್ರದಿಂದ ಉಂಟಾಗುವ ಸಂತಾನೋತ್ಪತ್ತಿ ಸಮಸ್ಯೆಗಳಾದ ಸಬ್‍ಮ್ಯೂಕಸ್ ಫೈಬ್ರಾಯ್ಡ್‌ಗಳು, ಗರ್ಭಾಶಯದ ಸೆಪ್ಟಮ್, ಪಾಲಿಪ್ಸ್, ಗರ್ಭಾಶಯದ ಒಳಗಿನ ಅಂಟಿಕೊಳ್ಳುವಿಕೆಗಳು, ಟಿ-ಆಕಾರದ ಗರ್ಭಾಶಯವನ್ನು ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ನಿರ್ವಹಿಸಬಹುದು.

ಹಿಸ್ಟರೊಸ್ಕೋಪಿಯ ಲಾಭ, ಅನುಕೂಲಗಳು:

• ಹೊಟ್ಟೆಯ ಮೇಲೆ ಲ್ಯಾಪರೊಟಮಿ / ಸೀಳುಗಾಯವನ್ನು ತಪ್ಪಿಸುವುದು.

• ಡೇಕೇರ್(ಒಂದು ದಿನದಲ್ಲಿಯೇ ಆಸ್ಪತ್ರೆಯಿಂದ ಬಿಡುಗಡೆ ಲಭಿಸುವಂತಹ) ಶಸ್ತ್ರಚಿಕಿತ್ಸೆ - ಕಡಿಮೆ ಆಸ್ಪತ್ರೆ ವಾಸ್ತವ್ಯ.

• ಸುಲಭದ ಕಾರ್ಯವಿಧಾನ.

• ಕಡಿಮೆ ಶಸ್ತ್ರಕ್ರಿಯೆ ಸಮಯ.

• ಶಸ್ತ್ರಕ್ರಿಯೆ ಸಂಧರ್ಭದಲ್ಲಿ ಕಡಿಮೆ ರಕ್ತ ನಷ್ಟ.

• ಶಸ್ತ್ರಕ್ರಿಯೆಯ ನಂತರ ಕಡಿಮೆ ನೋವು ಮತ್ತು ವೇಗವಾಗಿ ಚೇತರಿಕೆ.

• ಗರ್ಭಾವಸ್ಥೆಯ ದರಗಳಲ್ಲಿ ಗಮನಾರ್ಹ ಸುಧಾರಣೆ.

• ಗರ್ಭಾವಸ್ಥೆಯ ನಂತರ ಸಿಸೇರಿಯನ್ ತಪ್ಪಿಸುವುದು.

ಹಿಸ್ಟರೊಸ್ಕೋಪಿಗೆ ವಿರೋಧಾಭಿಪ್ರಾಯಗಳು

ಕೆಳಗಿನ ತೊಂದರೆ ಇರುವುದಾಗಿ ಕಂಡುಬಂದ ರೋಗಿಗಳಲ್ಲಿ ಹಿಸ್ಟರೊಸ್ಕೋಪಿಯನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ:

• ಸಕ್ರಿಯ ಗರ್ಭಕಂಠದ ಅಥವಾ ಗರ್ಭಾಶಯದ ಸೋಂಕು.

• 10 ಸೆಂ.ಮೀ. ಗಿಂತ ಉದ್ದವಾಗಿರುವ ದೊಡ್ಡ ಗರ್ಭಾಶಯದ ಕುಹರ (ವೈದ್ಯಕೀಯವಾಗಿ 12-ವಾರದ ಗರ್ಭಿಣಿಯ ಗರ್ಭಾಶಯದಂತೆಯೇ) (ಆದರೂ, ಈ ಸಂಖ್ಯೆ ಬದಲಾಗಬಹುದು ಮತ್ತು ಕೆಲವೊಮ್ಮೆ ರೋಗಿಯ ಅಭ್ಯಾಸಗಳನ್ನು ಅವಲಂಬಿಸಿರುತ್ತದೆ.)

• ಶಸ್ತ್ರಚಿಕಿತ್ಸೆಯ ಮುನ್ನ ತೀವ್ರ ವೈದ್ಯಕೀಯ ಪರಿಸ್ಥಿತಿಗಳು

• ಗರ್ಭಾವಸ್ಥೆ

ಹಿಸ್ಟರೊಸ್ಕೋಪಿಗೆ ಸಂಬಂಧಿಸಿದ ಕಾಳಜಿಗಳು ಮತ್ತು ವಿರೋಧಿ ಸೂಚನೆಗಳು ಯೋಜಿತ ಕಾರ್ಯವಿಧಾನವನ್ನು ಅವಲಂಬಿಸಿರುತ್ತದೆ. ಎಂಡೊಮೆಟ್ರಿಯಲ್ ಅಬ್ಲೇಶನ್‍ಗಾಗಿ, ಭವಿಷ್ಯದ ಫರ್ಟಿಲಿಟಿಯ ಬಯಕೆ, ವಿಲಕ್ಷಣವಾದ ಎಂಡೊಮೆಟ್ರಿಯಲ್ ಹೈಪರ್‍ಪ್ಲಾಸಿಯಾ ಅಥವಾ ಎಂಡೊಮೆಟ್ರಿಯಲ್ ಕಾರ್ಸಿನೋಮ ಮತ್ತು ರೋಗನಿರ್ಣಯ ಮಾಡದ ಅಸಹಜ ರಕ್ತಸ್ರಾವಗಳು ಪರಿಗಣನೆಯಲ್ಲಿ ಸೇರಿರುತ್ತವೆ.

ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮುನ್ನ ಮಾಡಲಾದ ಮೌಲ್ಯಮಾಪನಗಳು

ಪ್ರಯೋಗಾಲಯ ವೈದ್ಯಕೀಯ ತನಿಖೆಗಳು, ಇಮೇಜಿಂಗ್ ಅಧ್ಯಯನಗಳು ಮತ್ತು ರೋಗನಿರ್ಣಯದ ಅಧ್ಯಯನದಂತಹ ಅಗತ್ಯ ತನಿಖೆಗಳೊಂದಿಗೆ ಸಲಹಾತಜ್ಞರಿಂದ ನಿಮ್ಮ ಆರೋಗ್ಯ ಸ್ಥಿತಿಯ ಸಂಪೂರ್ಣ ಕೂಲಂಕುಶ ಮೌಲ್ಯಮಾಪನವನ್ನು ಮಾಡಲಾಗುತ್ತದೆ.

• ಸಿಬಿಸಿ: ಉಲ್ಲೇಖಿಸಲಾದ ಶ್ರೇಣಿಯಲ್ಲಿನ ಸಂಪೂರ್ಣ ರಕ್ತದ ಎಣಿಕೆಯು ಎಲ್ಲಾ ಪ್ರಮುಖ ಮತ್ತು ಗುಣಪಡಿಸುವ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆ ಮತ್ತು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಖಾತ್ರಿಗೊಳಿಸುತ್ತದೆ.

• ರಕ್ತದ ಟೈಪಿಂಗ್ ಮತ್ತು ಸ್ಕ್ರೀನಿಂಗ್: ಕೆಲವು ಶಸ್ತ್ರಚಿಕಿತ್ಸಾ ಹಿಸ್ಟರೊಸ್ಕೋಪಿಕ್ ಕಾರ್ಯವಿಧಾನಗಳಲ್ಲಿ ರಕ್ತಸ್ರಾವದ ಅಪಾಯವು ಅಗತ್ಯವಿದ್ದರೆ ಬದಲಿ ರಕ್ತದ ಉತ್ಪನ್ನಗಳನ್ನು ಸೇರಿಸಬೇಕಾದ ಸಾಧ್ಯತೆಯನ್ನುಹೆಚ್ಚಿಸುತ್ತದೆ.

• ಎಲೆಕ್ಟ್ರೊಲೈಟ್ ನಿರ್ಣಯಗಳು: ವೈದ್ಯಕೀಯ ಅಸ್ವಸ್ಥತೆಗಳಿರುವ ರೋಗಿಗಳು ಮೂತ್ರವರ್ಧಕಗಳನ್ನು ಸೇವಿಸಿದರೆ ಚಯಾಪಚಯ ಅಸಹಜತೆಗಳಿಗೆ ಒಳಗಾಗುವಂತೆ ಎಲೆಕ್ಟ್ರೊಲೈಟ್‍ಗಳನ್ನು ಪೂರ್ವಭಾವಿಯಾಗಿ ಪರೀಕ್ಷಿಸಬೇಕು. ಎಚ್‍ಸಿಜಿ (ಹ್ಯೂಮನ್ ಕೋರಿಯಾನಿಕ್ ಗೊನಡೋಟ್ರೋಫಿನ್) ಅನ್ನು ಪರೀಕ್ಷಿಸುವ ಮೂಲಕ ಗರ್ಭಧಾರಣೆಯ ಸ್ಥಿತಿಯನ್ನು ನಿರ್ಣಯಿಸುವುದು ಸಂತಾನೋತ್ಪತ್ತಿ ವಯಸ್ಸಿನ ಯಾವುದೇ ಮಹಿಳೆಯಲ್ಲಿ ಕಡ್ಡಾಯವಾಗಿದೆ.

• ಗರ್ಭಕಂಠದ ಕಲ್ಚರ್‍ಗಳು: ಕ್ಲಮೈಡಿಯ ಮತ್ತು ಗೊನೊರಿಯಾಕ್ಕೆ ಪೂರ್ವಭಾವಿ ಪರೀಕ್ಷೆ. ರೋಗಿಯು ಯೋನಿ ಡಿಸ್ಚಾರ್ಜ್ ಅನುಭವಿಸುತ್ತಿದ್ದರೆ ಬ್ಯಾಕ್ಟೀರಿಯಾದ ಯೋನಿನೋಸಿಸ್ ಮತ್ತು ಟ್ರೈಕೊಮೋನಿಯಾಸಿಸ್ಗಾಗಿ ಕಲ್ಚರ್‍ಗಳು ಮತ್ತು ವೆಟ್ ಸ್ಮಿಯರ್‍ಗಳನ್ನು ಶಿಫಾರಸು ಮಾಡಲಾಗುತ್ತದೆ.

• ಪ್ಯಾಪ್ ಸ್ಮಿಯರ್: ಗರ್ಭಕಂಠಕ್ಕೆ ಯಾವುದೇ ಆಘಾತ ಯಾವುದೇ ಅಸಹಜತೆಗಳ ನೋಟವನ್ನು ಬದಲಾಯಿಸಬಹುದಾದ್ದರಿಂದ ಪ್ಯಾಪ್ ಸ್ಮಿಯರ್‍ನಲ್ಲಿ ಸಾಮಾನ್ಯವಾದ ಪರಿಶೋಧನೆಯ ಅಗತ್ಯವಿರುತ್ತದೆ.

• ಹಿಸ್ಟರೊಸಲ್ಪಿಂಗೋಗ್ರಾಮ್: ಗರ್ಭಾಶಯದ ಕುಹರವನ್ನು ಮೌಲ್ಯಮಾಪನ ಮಾಡಲು ಮತ್ತು ಫಾಲೋಪಿಯನ್ ಟ್ಯೂಬ್‍ಗಳ ಸ್ಪಷ್ಟತೆಗಾಗಿ ಈ ಕ್ರಮ ನಡೆಸಬಹುದು.

• ಸಿಟಿ ಸ್ಕ್ಯಾನಿಂಗ್ ಅಥವಾ ಎಂಆರ್‍ಐ: ಹಿಸ್ಟರೊಸಲ್ಪಿಂಗೋಗ್ರಫಿಯಲ್ಲಿನ ಸಂಶೋಧನೆಗಳು ಸ್ಪಷ್ಟವಾದ ಚಿತ್ರವನ್ನು ನೀಡದಿರುವುದರ ಹೊರತಾಗಿ ಈ ಇಮೇಜಿಂಗ್ ಅಧ್ಯಯನಗಳು ಸಾಮಾನ್ಯವಾಗಿ ಅಗತ್ಯವಿಲ್ಲ.

• ಎಂಡೊಮೆಟ್ರಿಯಲ್ ಬಯಾಪ್ಸಿಗಳು: ಪೆರಿಮೆನೋಪಾಸ್/ಋತುಬಂಧಕ್ಕೊಳಗಾದ ಮಹಿಳೆಯರು ಮತ್ತು 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅನಿಗದಿತ ರಕ್ತಸ್ರಾವವನ್ನು ಹೊಂದಿದ್ದರೆ (ಉದಾಹರಣೆಗೆ, ಭಾರೀ ಮುಟ್ಟಿನ ಸ್ರಾವ, ಅನಿಗದಿತ ರಕ್ತಸ್ರಾವಗಳು, ದೀರ್ಘಕಾಲದ ಮುಟ್ಟಿನ ಸ್ರಾವ) ಮತ್ತು ಮುಟ್ಟುಇಲ್ಲದಿರುವ ಜೊತೆಗೆ ಕನಿಷ್ಠ 6 ತಿಂಗಳವರೆಗೆ ಅವಿರೋಧಿತ ಎಸ್ಟ್ರೋಜೆನ್ ಹೊಂದಿರುವ ಮಹಿಳೆಯರಲ್ಲಿ ಎಂಡೊಮೆಟ್ರಿಯಲ್ ಬಯಾಪ್ಸಿಗಳನ್ನು ಸೂಚಿಸಲಾಗುತ್ತದೆ. ಜೊತೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ದೈಹಿಕ ದೃಢತೆಗಾಗಿ ವೈದ್ಯರ ಅಭಿಪ್ರಾಯವನ್ನು ತೆಗೆದುಕೊಳ್ಳಲಾಗುತ್ತದೆ. ರೋಗಿ ಎದುರಿಸುತ್ತಿರುವ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ಅಗತ್ಯದ ಬಗ್ಗೆ ಆಕೆಗೆ ವಿವರಿಸಲಾಗುತ್ತದೆ. ಕಾರ್ಯವಿಧಾನದ ಪ್ರಯೋಜನಗಳು ಮತ್ತು ಅನಾನುಕೂಲಗಳನ್ನು ವಿವರಿಸಲಾಗುತ್ತದೆ. ಶಸ್ತ್ರಕ್ರಿಯೆ ಕ್ರಮಕ್ಕಾಗಿ ಕೇಂದ್ರಕ್ಕೆ ಸೇರ್ಪಡೆಯಾಗುವ ಮುನ್ನ ಅನುಸರಿಸಬೇಕಾದ ಎಲ್ಲಾ ಅಗತ್ಯ ಮಾಹಿತಿಯನ್ನು ರೋಗಿಗೆ ನೀಡಲಾಗುತ್ತದೆ.

ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ವಿಧಾನ

ಆಸ್ಪತ್ರೆಗೆ ದಾಖಲಾದ ನಂತರ, ಕೆಲವು ಔಷಧಿಗಳನ್ನು ನೀಡಿದ ಬಳಿಕ ಆಪರೇಷನ್ ಥಿಯೇಟರ್‌ಗೆ ಸ್ಥಳಾಂತರಿಸಲಾಗುತ್ತದೆ. ರೋಗಿಗೆ ಸಾಮಾನ್ಯ ಅರಿವಳಿಕೆ ನೀಡಲಾಗುತ್ತದೆ ಮತ್ತು ಅಗತ್ಯ ರೀತಿಯ ಸ್ಥಾನದಲ್ಲಿ ರೋಗಿಯನ್ನು ಇರಿಸಲಾಗುತ್ತದೆ, ಅಸೆಪ್ಟಿಕ್ ಸ್ಥಿತಿಯಲ್ಲಿ ಭಾಗಗಳನ್ನು ತಯಾರಿಸಿದ ನಂತರ ಡ್ರೇಪಿಂಗ್ ಮಾಡಲಾಗುತ್ತದೆ. ವಾಡಿಕೆಯಂತೆ ಗರ್ಭಕಂಠ ಅಗಲಿಸುವ ಕ್ರಮವನ್ನು ನಡೆಸಲಾಗುವುದಿಲ್ಲ. ಹಿಸ್ಟರೊಸ್ಕೋಪ್ ಅನ್ನು ಕ್ಯಾಮೆರಾ, ಲೈಟ್ ಕೇಬಲ್ ಮತ್ತು ಸಲೈನ್ ಟ್ಯೂಬ್‍ಗಳಿಗೆ (ಗರ್ಭಾಶಯದ ಕುಹರದ ವಿಸ್ತರಣೆಗಾಗಿ) ಸಂಪರ್ಕಿಸಲಾಗಿದೆ. ಗರ್ಭಾಶಯದ ಕುಹರದೊಳಗೆ ಪ್ರವೇಶಿಸಲು ಗರ್ಭಕಂಠದ ಮೂಲಕ ಹಿಸ್ಟರೊಸ್ಕೋಪ್ ಅನ್ನು ಪರಿಚಯಿಸಲಾಗುತ್ತದೆ. ಟ್ಯೂಬ್ (ಓಸ್ಟಿಯಾ) ತೆರೆಯುವಿಕೆಗಳನ್ನು ದೃಶ್ಯೀಕರಿಸಲಾಗಿದೆ.

ಗರ್ಭಾಶಯದ ಕುಹರದ ಒಳಪದರವು ಅನಾರೋಗ್ಯಕರ ಎಂಡೊಮೆಟ್ರಿಯಮ್, ಅಂಟಿಕೊಳ್ಳುವಿಕೆಗಳು, ಪಾಲಿಪ್ಸ್, ಫೈಬ್ರಾಯ್ಡ್ಗಳನ್ನು ಹೊಂದಿದೆಯೇ ಎಂದು ನೋಡಿ ಸಂಪೂರ್ಣವಾಗಿ ಪರಿಸ್ಥಿತಿ ಮೌಲ್ಯೀಕರಿಸಲಾಗುತ್ತದೆ. ಗರ್ಭಕಂಠದ ಕಾಲುವೆಯನ್ನು ನೋಡಲು ಟೆಲಿಸ್ಕೋಪನ್ನು ನಿಧಾನವಾಗಿ ಹಿಂತೆಗೆದುಕೊಳ್ಳಲಾಗುತ್ತದೆ. ಪ್ರಕರಣವನ್ನು ಅವಲಂಬಿಸಿ ಹಿಸ್ಟರೊಸ್ಕೋಪ್‍ನೊಂದಿಗೆ ಎಂಡೊಮೆಟ್ರಿಯಲ್ ಬಯಾಪ್ಸಿ ತೆಗೆದುಕೊಳ್ಳಲಾಗುತ್ತದೆ ಮತ್ತು ಅಗತ್ಯ ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತದೆ. ಯೋನಿಯನ್ನು ನಂಜುನಿರೋಧಕಗಳಿಂದ ಸ್ವಚ್ಛಗೊಳಿಸಲಾಗುತ್ತದೆ. ಅರಿವಳಿಕೆಯಿಂದ ಚೇತರಿಸಿಕೊಳ್ಳುವ ಮೊದಲು ರೋಗಿಯನ್ನು ಮಲಗುವ ಸ್ಥಿತಿಯಲ್ಲಿ ಇರಿಸಲಾಗುತ್ತದೆ. ರೋಗಿ ಸಂಪೂರ್ಣ ಪ್ರಜ್ಞೆ ಪಡೆದು ಮತ್ತು ಕೋಣೆಯಲ್ಲಿ ಉಳಿಯಲು ಯೋಗ್ಯವಾಗುವವರೆಗೆ ಒಟಿ / ಚೇತರಿಕೆ ಕೊಠಡಿಯಲ್ಲಿರಿಸಿ ವೈದ್ಯಕೀಯವಾಗಿ ಗಮನಿಸಲಾಗುತ್ತದೆ. ಚೇತರಿಕೆಯ ಕೋಣೆಯಲ್ಲಿ, ರೋಗಿಗೆ ನೋವು ನಿವಾರಕಗಳೊಂದಿಗೆ 4 ಗಂಟೆಗಳ ಕಾಲ ಡ್ರಿಪ್ಸ್ ನೀಡಲಾಗುತ್ತದೆ. 4 ಗಂಟೆಗಳ ನಂತರ ಸಣ್ಣ ಗುಟುಕುಗಳಾಗಿ ನಿಧಾನವಾಗಿ ನೀರನ್ನು ನೀಡಲಾಗುತ್ತದೆ ನಂತರ ದ್ರವವನ್ನು ನೀಡಲಾಗುತ್ತದೆ. ಸೇವಿಸಿದ ದ್ರವವನ್ನು ಚೆನ್ನಾಗಿ ಸಹಿಸಿಕೊಂಡ ನಂತರ ಮೃದುವಾದ ಆಹಾರ ನೀಡುವುದನ್ನು ಪ್ರಾರಂಭಿಸಲಾಗುತ್ತದೆ. ರೋಗಿಯು ಅರಿವಳಿಕೆಯಿಂದ ಚೇತರಿಸಿಕೊಂಡ ನಂತರ ಹಾಸಿಗೆ ಬಿಟ್ಟೆದ್ದು ಹೊರಕ್ಕೆ ಬರಲು ಸಜ್ಜುಗೊಳಿಸಲಾಗುತ್ತದೆ.

ಹಿಸ್ಟರೊಸ್ಕೋಪಿ ಶಸ್ತ್ರಚಿಕಿತ್ಸೆಯ ನಂತರ ತಪಾಸಣೆ ಮತ್ತು ಆಸ್ಪತ್ರೆಯಿಂದ ಬಿಡುಗಡೆ

ರೋಗಿಯು ಸೇವಿಸಿದ ದ್ರವವನ್ನು ಚೆನ್ನಾಗಿ ಸಹಿಸಿಕೊಂಡ ನಂತರ ಮತ್ತು ಸ್ವಂತವಾಗಿ ಮೂತ್ರ ವಿಸರ್ಜನೆ ಮಾಡಿದ ನಂತರವೇ ಚಿಕಿತ್ಸಾ ಕೇಂದ್ರದಿಂದ ಬಿಡುಗಡೆಗೆ ಯೋಗ್ಯರಾಗಿರುತ್ತಾರೆ. ಬಿಡುಗಡೆಯ ಸಮಯದಲ್ಲಿ, ಆಹಾರ, ಔಷಧಿಗಳು, ಆಂಬುಲೇಷನ್, ಸ್ನಾನ, ಕೆಲಸಕ್ಕೆ ಮರಳುವುದು ಮತ್ತು ಇತರ ದೈನಂದಿನ ಚಟುವಟಿಕೆಗಳ ಬಗ್ಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ವಿವರಿಸಲಾಗುತ್ತದೆ. ಆಸ್ಪತ್ರೆಗೆ ಬೇಗನೆ ಹಿಂದಿರುಗುವ ಅಗತ್ಯವಿರುವ ಎಲ್ಲ ಚಿಹ್ನೆಗಳು/ಲಕ್ಷಣಗಳ ಬಗ್ಗೆ ವಿವರಿಸಲಾಗುತ್ತದೆ.

ಆಸ್ಪತ್ರೆಯಿಂದ ಬಿಡುಗಡೆ ಸಮಯದಲ್ಲಿ, ರೋಗಿಯು ಮತ್ತೆ ತಪಾಸಣೆಗೆ ಬರಬೇಕಾದ ದಿನಾಂಕವನ್ನು ಸೂಚಿಸುತ್ತಾರೆ (ಸಾಮಾನ್ಯವಾಗಿ 5-7 ದಿನಗಳು). ಕೆಲವು ಪ್ರಕರಣಗಳಲ್ಲಿ ಬಯಾಪ್ಸಿ ವರದಿಗಳ ಆಧಾರದ ಮೇಲೆ ಚಿಕಿತ್ಸೆಯ ಹೆಚ್ಚುವರಿ ಮಾರ್ಗವನ್ನು ನಿರ್ಧರಿಸಲಾಗುತ್ತದೆ.

ಈ ಪುಟವನ್ನು ಹಂಚಿಕೊಳ್ಳಿ