ಮ್ಯಾಕ್ಸ್(ಎಂಎಸಿಎಸ್)

ಮ್ಯಾಕ್ಸ್(ಎಂಎಸಿಎಸ್)

ಮ್ಯಾಕ್ಸ್ ಎಂದರೇನು?

ಮ್ಯಾಗ್ನೆಟಿಕ್ ಆಕ್ಟಿವೇಟೆಡ್ ಸೆಲ್ ವಿಂಗಡಣೆ (ಒಂಆಸ್) ಎಂಬುದು ಇಮ್ಯುನೊಮ್ಯಾಗ್ನೆಟಿಕ್ ತಂತ್ರವಾಗಿದ್ದು ಅದು ಜೀವಕೋಶದ ಹಾನಿ ಅಥವಾ ಸಾವಿನ ಯಾವುದೇ ಲಕ್ಷಣಗಳನ್ನು ತೋರಿಸದ ವೀರ್ಯಾಣುಗಳ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ. (ಅಪೊಪ್ಟೋಸಿಸ್ ಎಂದೂ ಕರೆಯುತ್ತಾರೆ) ಅಂದರೆ ಅವುಗಳ ಸಂಪೂರ್ಣ ಡಿಎನ್‌ಎ ಹಾಳಾಗದೇ ಉಳಿದಿರುತ್ತದೆ.

ಎಆರ್‌ಟಿ (ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ಸ್) ಮೂಲಕ ಗರ್ಭಧಾರಣೆಯನ್ನು ಸಾಧಿಸಲು ಅತ್ಯಂತ ನಿರ್ಣಾಯಕ ಅಂಶವೆಂದರೆ ವೀರ್ಯದ ಗುಣಮಟ್ಟ. ವೀರ್ಯದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ವಿವಿಧ ಅಂಶಗಳಲ್ಲಿ, ಅಪೊಪ್ಟೋಟಿಕ್ ವೀರ್ಯಾಣುವು ಅವುಗಳಲ್ಲಿ ಒಂದಾಗಿದೆ. ಅಪೊಪ್ಟೋಟಿಕ್ ವೀರ್ಯಾಣುವನ್ನು ಈ ವಿಧಾನವನ್ನು ಬಳಸಿಕೊಂಡು ಮಾದರಿಯಿಂದ ತೆಗೆದುಹಾಕಬಹುದು ಏಕೆಂದರೆ ಅವುಗಳ ಜೀವಕೋಶ ಪೊರೆಗಳು ಪತ್ತೆ ಮಾಡಬಹುದಾದ ಗುರುತುಗಳನ್ನು ಹೊಂದಿರುತ್ತವೆ. ಹೀಗಾಗಿ ಈ ತಂತ್ರದಿಂದ ವೀರ್ಯದ ಗುಣಮಟ್ಟವನ್ನು ಸುಧಾರಿಸಬಹುದು. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಿಕ್ಸ್ ಅನ್ನು ನಿರ್ವಹಿಸುವ ಮೊದಲು ವೆರಿಕೋಸೆಲ್ ಹೊಂದಿರುವ ಪುರುಷರಲ್ಲಿ ವೀರ್ಯದ ಡಿಎನ್‌ಎ ವಿಘಟನೆಯನ್ನು ಕಡಿಮೆ ಮಾಡಲು ಮ್ಯಾಗ್ನೆಟಿಕ್-ಆಕ್ಟಿವೇಟೆಡ್ ಸೆಲ್ ವಿಂಗಡಣೆಯು ಅತ್ಯಂತ ಪರಿಣಾಮಕಾರಿ ವಿಧಾನಗಳಲ್ಲಿ ಒಂದಾಗಿದೆ. ವೆರಿಕೋಸೆಲೆ ಹೊಂದಿರುವ ಪುರುಷರಲ್ಲಿ ವೀರ್ಯದ ನಿಯತಾಂಕಗಳು ಅಪೊಪ್ಟೋಟಿಕ್ ಮಾರ್ಕರ್‌ಗಳು, ಡಿಎನ್‌ಎ ವಿಘಟನೆ ಇತ್ಯಾದಿಗಳನ್ನು ಒಳಗೊಂಡಿರುವ ಹೆಚ್ಚಿನ ಮಟ್ಟದ ಅಸಹಜತೆಗಳನ್ನು ಪ್ರದರ್ಶಿಸುತ್ತವೆ.

ಯಾವ ಸಂದರ್ಭಗಳಲ್ಲಿ (ಎಂಎಸಿಎಸ್) ಸೂಚಿಸಲಾಗುತ್ತದೆ?

ಈ ತಂತ್ರವನ್ನು ಎಆರ್‌ಟಿ (ಸಹಾಯಕ ಸಂತಾನೋತ್ಪತ್ತಿ ತಂತ್ರಗಳು)ಗಾಗಿ ಎಲ್ಲಾ ರೀತಿಯ ರೋಗಿಗಳೊಂದಿಗೆ ಬಳಸಬಹುದು ಆದರೆ ಮುಖ್ಯವಾಗಿ ಈ ಕೆಳಗಿನವುಗಳಿಗೆ ಬಳಸಲಾಗುತ್ತದೆ

• ಕೃತಕ ಗರ್ಭಧಾರಣೆಯ ಚಿಕಿತ್ಸೆಗಾಗಿ

• ವೀರ್ಯಾಣು ಮಾದರಿಯಲ್ಲಿ ಉನ್ನತ ಮಟ್ಟದ ಡಿಎನ್‌ಎ ವಿಘಟನೆಯ ರೋಗಿಗಳಲ್ಲಿ

• ಪುನರಾವರ್ತಿತ ಗರ್ಭಪಾತದ ಕಾರಣವನ್ನು ಗುರುತಿಸಲಾಗದ ಸಂದರ್ಭಗಳಲ್ಲಿ

• ಒಂದು ಐವಿಎಫ್ ಚಕ್ರವು ವಿಫಲವಾದ ಸಂದರ್ಭಗಳಲ್ಲಿ ಅಥವಾ ಭ್ರೂಣದ ಗುಣಮಟ್ಟವು ಕಳಪೆಯಾಗಿರುವಾಗ ಅದು ಅಂಡಾಣುಗಳಿಗೆ ಕಾರಣವಾಗದ ಸಂದರ್ಭದಲ್ಲಿ

• ಕಳಪೆ ಇಂಪ್ಲಾಂಟೇಷನ್ ದರಗಳು

ಎಂಎಸಿಎಸ್‌ನ ಕಾರ್ಯವಿಧಾನ ಏನು?

ಎಂಎಸಿಎಸ್ ತಂತ್ರವು ಸರಳವಾದ, ಆಕ್ರಮಣಶೀಲವಲ್ಲದ ಕ್ರಮವಾಗಿದ್ದು, ಸಂತಾನೋತ್ಪತ್ತಿ ಸಮಸ್ಯೆ ಇರುವ ರೋಗಿಗಳಲ್ಲಿ ಡಿಎನ್‌ಎ ವಿಘಟನೆಯನ್ನು ಎಆರ್‌ಟಿಗಿಂತ ಮುನ್ನ ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.

ಮ್ಯಾಗ್ನೆಟಿಕ್ ಆಕ್ಟಿವೇಟೆಡ್ ಸೆಲ್ ವಿಂಗಡಣೆಯು ಆರೋಗ್ಯಕರ ವೀರ್ಯಾಣುವನ್ನು ಅನಾರೋಗ್ಯಕರ ವೀರ್ಯಾಣುಗಳಿಂದ ಪ್ರತ್ಯೇಕಿಸುವ ಒಂದು ವಿಧಾನವಾಗಿದೆ. ವೀರ್ಯವನ್ನು ಬೇರ್ಪಡಿಸುವ ಕಾಲಮ್‌ನಲ್ಲಿ ಕಾಂತೀಯ ಕ್ಷೇತ್ರದ ಮೂಲಕ ರವಾನಿಸಲಾಗುತ್ತದೆ. ಸತ್ತ ಮತ್ತು ಅಪೊಪ್ಟೋಟಿಕ್ ವೀರ್ಯಾಣುಗಳನ್ನು ಬೇರ್ಪಡಿಸುವ ಕಾಲಮ್‌ಗಳಲ್ಲಿ ಉಳಿಸಿಕೊಳ್ಳಲಾಗುತ್ತದೆ ಆದರೆ ಉತ್ತಮ ಗುಣಮಟ್ಟದ ಲೈವ್ ವೀರ್ಯಾಣುಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ.

ಉತ್ತಮ ಗರ್ಭಾವಸ್ಥೆಯ ಮಟ್ಟಗಳನ್ನು ಪಡೆಯಲು ಮತ್ತು ಇಂಪ್ಲಾಂಟೇಷನ್ ವೈಫಲ್ಯಗಳನ್ನು ಕಡಿಮೆ ಮಾಡಲು ಎಂಎಸಿಎಸ್ ಸಹಾಯ ಮಾಡುತ್ತದೆ, ಆದ್ದರಿಂದ ಇದನ್ನು ಮುಖ್ಯವಾಗಿ ಕಳಪೆ ಇಂಪ್ಲಾAಟೇಶನ್ ದರ, ಪುನರಾವರ್ತಿತ ಐವಿಎಫ್ ವೈಫಲ್ಯಗಳು ಮತ್ತು ವೀರ್ಯಾಣುಗಳಲ್ಲಿ ಹೆಚ್ಚಿನ ಡಿಎನ್‌ಎ ವಿಘಟನೆಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ವೀರ್ಯಾಣುಗಳನ್ನು ಬೇರ್ಪಡಿಸಿದ ನಂತರ ಅಂಡಾಣುಗಳನ್ನು ಐಸಿಎಸ್‌ಐ (ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್) ಮೂಲಕ ಫರ್ಟಿಲೈಸ್ ಮಾಡಲಾಗುತ್ತದೆ, ಇದು ಐವಿಎಫ್ ಚಿಕಿತ್ಸೆಯಲ್ಲಿ ಮೈಕ್ರೊಮ್ಯಾನಿಪ್ಯುಲೇಷನ್ ತಂತ್ರವನ್ನು ಬಳಸುತ್ತದೆ, ಅಲ್ಲಿ ಆರೋಗ್ಯಕರ ವೀರ್ಯವನ್ನು ಉತ್ತಮವಾದ ಸೂಕ್ಷö್ಮ ಸೂಜಿಯನ್ನು ಬಳಸಿಕೊಂಡು ಅಂಡಾಣುವಿನ ಸೈಟೋಪ್ಲಾಸಂಗೆ ಚುಚ್ಚಲಾಗುತ್ತದೆ.

ವೀರ್ಯಾಣುವು ತನ್ನದೇ ಆದ ಮೇಲೆ ಚಲಿಸುವ ಮತ್ತು ಅಂಡಾಣುವಿಗೆ ಅಂಟಿಕೊಳ್ಳುವ ಸಾಮರ್ಥ್ಯವನ್ನು ಐಸಿಎಸ್‌ಐ ಅವಲಂಬಿಸಿರುವುದಿಲ್ಲ. ಅಂಡಾಣುವೊಳಗೆ ಫರ್ಟಿಲೈಸೇಷನ್ ಸೆಲ್ಯುಲಾರ್ ಪ್ರಕ್ರಿಯೆಯು ಸಂಭವಿಸುತ್ತದೆ, ಅದು ಸ್ವಾಭಾವಿಕವಾಗಿ ಸಂಭವಿಸುತ್ತದೆ. ಡಿಎಫ್‌ಐ (ಡಿಎನ್‌ಎ ಫ್ರಾಗ್ಮೆಂಟೇಶನ್ ಇಂಡೆಕ್ಸ್) ಶೇ. ೨೫ಕ್ಕಿಂತ ಹೆಚ್ಚಿನ ಸೂಚ್ಯಂಕ ಹೊಂದಿರುವ ರೋಗಿಗಳಲ್ಲಿ ಎಮ್‌ಎಸಿಎಸ್‌ಅನ್ನು ಸೂಚಿಸಲಾಗುತ್ತದೆ, ಇದು ಕಳಪೆ ಡಿಎನ್‌ಎ ಸಮಗ್ರತೆಯನ್ನು ಸೂಚಿಸುತ್ತದೆ. ಎಂಎಸಿಎಸ್ ಬಳಸಿ ವೀರ್ಯಾಣುವನ್ನು ಬೇರ್ಪಡಿಸಿದ ನಂತರ ಐವಿಎಫ್/ಐಸಿಎಸ್‌ಐ ತಂತ್ರಗಳನ್ನು ನಡೆಸಲಾಗುತ್ತದೆ.

ಗರ್ಭಗುಡಿ ಚಿಕಿತ್ಸೆಯ ಎಲ್ಲಾ ಹಂತಗಳಲ್ಲಿ ವೈಯಕ್ತಿಕ ಆರೈಕೆ ಮತ್ತು ಬೆಂಬಲವನ್ನು ಒದಗಿಸುತ್ತದೆ. ಗರ್ಭಗುಡಿ ಐವಿಎಫ್ ಕೇಂದ್ರವು ಬೆಂಗಳೂರಿನಲ್ಲಿರುವ ಅತ್ಯುತ್ತಮ ಐವಿಎಫ್ ಕೇಂದ್ರಗಳಲ್ಲಿ ಒಂದಾಗಿದೆ, ಅವರು ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಕೆಲವು ಅತ್ಯುತ್ತಮ ವೈದ್ಯರೊಂದಿಗೆ ಇತ್ತೀಚಿನ ಅಸಿಸ್ಟೆಡ್ ರಿಪ್ರೊಡಕ್ಷನ್ ಟೆಕ್ನಾಲಜಿಯಲ್ಲಿ ಆದ್ಯಪ್ರವರ್ತಕರಾಗಿದ್ದಾರೆ ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು ಅತ್ಯಂತ ಹೆಚ್ಚಿನ ಚಿಕಿತ್ಸಾ ಆಯ್ಕೆಗಳನ್ನು ಒದಗಿಸುತ್ತಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ