ಇತರ ಪುರುಷ ಕಾರ್ಯವಿಧಾನಗಳು

ಇತರ ಪುರುಷ ಕಾರ್ಯವಿಧಾನಗಳು

ಪುರುಷ ಸಂಬಧಿತ ಅಂಶವು ಸಂಪೂರ್ಣವಾಗಿ ಅಲ್ಲದಿದ್ದರೂ, ಸಂತಾನೋತ್ಪತ್ತಿ ಸಮಸ್ಯೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾರಣವಾಗಿರುತ್ತದೆ. ಆಗಾಗ್ಗೆ ಅಸುರಕ್ಷಿತ ಲೈಂಗಿಕ ಸಂಭೋಗ ನಡೆಸುತ್ತಿದ್ದರೂ ಕೂಡ ದಂಪತಿಗಳು ಗರ್ಭಧಾರಣೆಗೆ ತುಂಬಾ ಸಮಯದಿಂದ ಪ್ರಯತ್ನಿಸುತ್ತಿದ್ದರೆ ಮತ್ತು ಗರ್ಭಧರಿಸುವಲ್ಲಿ ಯಶಸ್ವಿಯಾಗದಿದ್ದರೆ, ಫರ್ಟಿಲಿಟಿಯ ಮೇಲೆ ಪರಿಣಾಮ ಬೀರುವ ಯಾವುದಾದರೂ ಮೂಲ ಕಾರಣವಿರಬಹುದು ಎಂದರ್ಥ. ಆದರೂ, ಇದು ಯಾವಾಗಲೂ ಸ್ತ್ರೀ ಸಂಬಧಿತ ಅಂಶವಾಗಿರಬೇಕಾಗಿಲ್ಲ, ಪುರುಷ ಸಂತಾನೋತ್ಪತ್ತಿ ಆರೋಗ್ಯದಲ್ಲಿನ ಯಾವುದೇ ಅಸಹಜತೆಗಳು ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಬಹುದು. ವೀರ್ಯಾಣುವಿನ ಉತ್ಪಾದನೆ, ಕಾರ್ಯ ಅಥವಾ ಚಲನೆಯ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳಿವೆ.

ವೀರ್ಯಾಣುಗಳ ಪ್ರಮಾಣ, ಗುಣಮಟ್ಟ, ರೂಪವಿಜ್ಞಾನ ಅಥವಾ ಚಲನಶೀಲತೆಯಲ್ಲಿ ಯಾವುದೇ ಅಸಹಜತೆ ಕಂಡುಬAದರೆ, ಸಂತಾನೋತ್ಪತ್ತಿ ಸಮಸ್ಯೆ ಉಂಟಾಗಬಹುದು. ಪುರುಷರ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುವ ಹಲವಾರು ಅಂಶಗಳಿವೆ, ಉದಾಹರಣೆಗೆ ಪುರುಷ ಸಂತಾನೋತ್ಪತ್ತಿ ಅಂಗಗಳಿಗೆ ಗಾಯ ಅಥವಾ ಹಾನಿ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು, ಜೀವನಶೈಲಿ, ಇತ್ಯಾದಿ. ಐವಿಎಫ್ ಕಾರ್ಯವಿಧಾನಗಳು ಅಂತಹ ಪ್ರಕರಣಗಳಲ್ಲಿ ಮಗುವಿನ ತಂದೆಯಾಗುವ ಸಂತೋಷವನ್ನು ನೀಡುವಲ್ಲಿ ಪವಾಡ ಉಂಟುಮಾಡಿವೆ. ಪಿಇಎಸ್‌ಎ ಮತ್ತು ಟಿಇಎಸ್‌ಎ ಸಾಮಾನ್ಯವಾಗಿ ಐವಿಎಫ್ ಕಾರ್ಯವಿಧಾನಗಳಾಗಿದ್ದರೂ, ಕೆಲವು ಪರಿಸ್ಥಿತಿಗಳಿಂದಾಗಿ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡಲು ಸಹಾಯಕವಾಗಬಲ್ಲ ಇತರ ಪುರುಷ ಸಂಬಧಿತ ವಿಧಾನಗಳಿವೆ. ಸರಿಯಾದ ಚಿಕಿತ್ಸಾವಿಧಾನವನ್ನು ಆಯ್ಕೆ ಮಾಡಲು, ಮೂಲ ಕಾರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದರೂ, ಕಾರ್ಯವಿಧಾನವು ಮೂಲ ಕಾರಣವನ್ನು ಅವಲಂಬಿಸಿರುತ್ತದೆ, ಇದನ್ನು ಕೆಲವು ಆರಂಭದ ರೋಗಲಕ್ಷಣಗಳ ಮೂಲಕ ತಿಳಿಯಬಹುದು.

ಪುರುಷ ಬಂಜೆತನದ ಲಕ್ಷಣಗಳು

• ಲೈಂಗಿಕ ಚಟುವಟಿಕೆಯ ಸಮಸ್ಯೆಗಳು - ಲೈಂಗಿಕ ಬಯಕೆಯ ಕೊರತೆ, ಕಡಿಮೆ ಸ್ಖಲನ, ಸ್ಖಲನದಲ್ಲಿ ತೊಂದರೆ, ಹಿಮ್ಮೆಟ್ಟಿಸುವ ಸ್ಖಲನ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಇತ್ಯಾದಿ.

• ವೃಷಣಗಳ ಊತ ಅಥವಾ ಮೃದುತ್ವ.

• ಗೈನೆಕೊಮಾಸ್ಟಿಯಾ (ಸ್ತನಗಳ ಅಸಹಜ ಬೆಳವಣಿಗೆ).

• ಸ್ಕ್ರೋಟಮ್ (ವೃಷಣ ಚೀಲ) ನೋವು.

ಇವುಗಳ ಜೊತೆಗೆ, ಕೆಲವು ಕ್ರೋಮೋಸೋಮಲ್(ವರ್ಣತಂತು) ಅಥವಾ ಹಾರ್ಮೋನ್ ಅಸ್ವಸ್ಥತೆಗಳು ಅಥವಾ ಮನುಷ್ಯ ಸಂತಾನಹರಣದ ರೂಪದಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಇರಬಹುದು.

ಮೇಲಿನ ಯಾವುದೇ ರೋಗಲಕ್ಷಣಗಳಿಂದ ನೀವು ಬಳಲುತ್ತಿದ್ದರೆ, ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವುದು ಮೂಲ ಕಾರಣವನ್ನು ಉತ್ತಮವಾಗಿ ವಿವರಿಸಲು ಮತ್ತು ಸರಿಯಾದ ಚಿಕಿತ್ಸಾ ವಿಧಾನವನ್ನು ಅಥವಾ ಕಾರ್ಯವಿಧಾನವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಕಾರಣವನ್ನು ಗುರುತಿಸಿದ ನಂತರ, ವೈದ್ಯರು ನಿರ್ದಿಷ್ಟ ವಿಧಾನವನ್ನು ಶಿಫಾರಸು ಮಾಡಬಹುದು. ಪುರುಷ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡಲು ಹಲವಾರು ಕ್ರಮಗಳಿವೆ.

ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡಲು ಪುರುಷರಿಗೆ ಇತರ ವಿಧಾನಗಳು

• ವೆರಿಕೋಸೆಲೆಕ್ಟಮಿ - ವೆರಿಕೋಸೆಲೆ ಎಂಬುದು ವೀರ್ಯಾಣು ಬಳ್ಳಿಯ ಬಳಿ ರಕ್ತನಾಳಗಳಲ್ಲಿ ರಕ್ತ ಸಂಗ್ರಹವಾದಾಗ ಉಂಟಾಗುವ ಒಂದು ಸ್ಥಿತಿಯಾಗಿದೆ. ವೆರಿಕೊಸೆಲೆಕ್ಟಮಿ ಎನ್ನುವುದು ವಿಸ್ತರಿಸಿದ ರಕ್ತನಾಳಗಳನ್ನು ತೆಗೆದುಹಾಕಲು ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ರಕ್ತದ ಹರಿವನ್ನು ಪುನಃಸ್ಥಾಪಿಸಲು ಸಹಾಯ ಮಾಡುವ ಒಂದು ವಿಧಾನವಾಗಿದೆ. ಸ್ಕ್ರೋಟಮ್ ನಲ್ಲಿ ವೆರಿಕೋಸೆಲೆ ಬೆಳವಣಿಗೆಯಾದರೆ, ಅದು ಇತರ ಸಂತಾನೋತ್ಪತ್ತಿ ಅಂಗಗಳಿಗೆ ರಕ್ತದ ಹರಿವನ್ನು ನಿರ್ಬಂಧಿಸಬಹುದು.

• ವೆರಿಕೋಸೆಲೆ ಎಂಬೋಲೈಸೇಶನ್ - ಇದು ಒಂದೇ ದಿನದ ವೈದ್ಯಕೀಯ ಕ್ರಮವಾಗಿದ್ದು, ಕ್ಯಾಥೆಟರ್ (ಉದ್ದದ ಕೊಳವೆ) ಸಹಾಯದಿಂದ ವೆರಿಕೋಸೆಲೆಯಲ್ಲಿ ರಕ್ತವನ್ನು ಚಲಿಸಲು ಸಹಾಯ ಮಾಡುತ್ತದೆ. ವೃಷಣ ಪ್ರದೇಶವನ್ನು ತಲುಪಲು ತೊಡೆಸಂದು ಸಣ್ಣ ಸೀಳುಗಾಯದ ಮೂಲಕ ಕ್ಯಾಥೆಟರ್‌ಅನ್ನು ಸೇರಿಸಲಾಗುತ್ತದೆ. ಕ್ಯಾಥೆಟರ್ ಗುರಿ ಪ್ರದೇಶವನ್ನು ತಲುಪಿದ ನಂತರ, ಕೆಲವು ರಾಸಾಯನಿಕಗಳನ್ನು ಚುಚ್ಚುವ ಮೂಲಕ ರಕ್ತವನ್ನು ಹಿಡಿದಿಟ್ಟುಕೊಂಡು ಹಿಗ್ಗಿರುವ ಅಭಿಧಮನಿಯು ಕುಗ್ಗುವಂತೆ ಮಾಡಲಾಗುತ್ತದೆ. ಕಾರ್ಯವಿಧಾನವು ವೆರಿಕೋಸೆಲೆಯಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತವನ್ನು ಇತರ ಮಾರ್ಗಗಳ ಮೂಲಕ ನಿರ್ದೇಶಿಸುತ್ತದೆ. ಈ ವಿಧಾನವನ್ನು ಅಲ್ಪಮಟ್ಟಿನ ನಿದ್ರಾಜನಕ ಅಡಿಯಲ್ಲಿ ನಡೆಸಲಾಗುತ್ತದೆ.

• ಟ್ರಾನ್ಸ್ಯುರೆಥ್ರಲ್ ಎಜಾಕ್ಯುಲೇಟರಿ ಡಕ್ಟ್ ರಿಸೆಕ್ಷನ್ - ಪೆಲ್ವಿಸ್ ಯಾವುದೇ ಆಘಾತ ಅಥವಾ ಯಾವುದೇ ಸೋಂಕಿನಿಂದ ಸ್ಖಲನ ನಾಳದ ಅಡಚಣೆ ಉಂಟಾದರೆ ಈ ವಿಧಾನವನ್ನು ನಡೆಸಲಾಗುತ್ತದೆ. ಅಡ್ಡಿ ಅಥವಾ ಅಡಚಣೆಯು ವೀರ್ಯವನ್ನು ಹೊರಹಾಕುವ ಸಾಮರ್ಥ್ಯವನ್ನು ತಡೆಯುತ್ತದೆ; ಆದ್ದರಿಂದ, ನಾಳದಲ್ಲಿನ ಯಾವುದೇ ಅಡೆತಡೆಯನ್ನು ತೆಗೆದುಹಾಕಲು ರೆಸೆಕ್ಟೋಸ್ಕೋಪ್ (ಟೆಲಿಸ್ಕೋಪಿಕ್ ಸಾಧನ) ಅನ್ನು ಮೂತ್ರನಾಳಕ್ಕೆ ಸೇರಿಸಲಾಗುತ್ತದೆ.

• ಸಂತಾನಹರಣವನ್ನು ವಿಮುಖಗೊಳಿಸುವುದು - ಈ ವಿಧಾನವು ವಾಸ್ ಡಿಫರೆನ್ಸ್ (ವೃಷಣದಿಂದ ಮೂತ್ರನಾಳಕ್ಕೆ ವೀರ್ಯವನ್ನು ಸಾಗಿಸುವ ಟ್ಯೂಬ್‌ಗಳು) ಮರುಸಂಪರ್ಕಿಸುವ ಮೂಲಕ ಫರ್ಟಿಲಿಟಿಯನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ. ಕಾರ್ಯವಿಧಾನವನ್ನು ಸಾಧಾರಣವಾಗಿ ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ನಡೆಸಲಾಗುತ್ತದೆ.

• ಮೈಕ್ರೋ ಟಿಎಇಎಸ್‌ಇ (ಮೈಕ್ರೋಸರ್ಜಿಕಲ್ ಟೆಸ್ಟಿಕುಲರ್ ಸ್ಪರ್ಮ್ ಎಕ್ಸ್ಟ್ರಾಕ್ಷನ್) - ಅಪೇಕ್ಷಿತ ಪ್ರಮಾಣದ ವೀರ್ಯಾಣುವನ್ನು ಉತ್ಪಾದಿಸಲು ಸಾಧ್ಯವಾಗದ ಪುರುಷರಿಗೆ ಶಿಫಾರಸು ಮಾಡಲಾದ ಕಾರ್ಯವಿಧಾನ ಇದಾಗಿದೆ. ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಸಾಮಾನ್ಯವಾಗಿ ನಡೆಸುವ ಈ ಶಸ್ತ್ರಚಿಕಿತ್ಸಾ ವಿಧಾನವು ವೃಷಣಗಳಿಂದ ವೀರ್ಯಾಣುವನ್ನು ಹಿಂಪಡೆಯುವುದನ್ನು ಒಳಗೊಂಡಿರುತ್ತದೆ. ಹಿಂಪಡೆಯಲಾದ ವೀರ್ಯಾಣುವನ್ನು ನಂತರದ ದಿನಗಳಲ್ಲಿ ಬಳಕೆಗಾಗಿ ಫ್ರೀಜ್ ಮಾಡಲಾಗುತ್ತದೆ, ಅದೇ ದಿನದಲ್ಲಿ ಮತ್ತಷ್ಟು ಫರ್ಟಿಲೈಸೇಷನ್ ಪ್ರಕ್ರಿಯೆಯು ಸಂಭವಿಸಲು ನೇರವಾಗಿ ಅಂಡಾಣುವೊಳಗೆ ಚುಚ್ಚಲಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯಲ್ಲಿ ಪರಿಸ್ಥಿತಿಗಳು ಭಿನ್ನವಾಗಿರುವುದರಿಂದ, ತಜ್ಞರ ಮೂಲಕ ಸಹಾಯವನ್ನು ಪಡೆಯುವ ಮೂಲಕ ಮಾತ್ರ ಸರಿಯಾದ ವಿಧಾನವನ್ನು ನಿರ್ಧರಿಸಬಹುದು. ಮೇಲಿನ ಯಾವುದಾದರೂ ನಿಮಗೆ ಕಾಳಜಿ ಉಂಟುಮಾಡಿದಲ್ಲಿ, ಸಮಸ್ಯೆಯ ಸ್ಪಷ್ಟ ತಿಳುವಳಿಕೆಗಾಗಿ ನಿಮ್ಮ ತಜ್ಞರೊಂದಿಗೆ ಮಾತನಾಡಿ ಏಕೆಂದರೆ ಇತ್ತೀಚಿನ ವರ್ಷಗಳಲ್ಲಿ ಪುರುಷ ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಚಿಕಿತ್ಸೆಯು ಅದ್ಭುತ ಯಶಸ್ಸನ್ನು ತೋರಿಸಿದೆ.

ಈ ಪುಟವನ್ನು ಹಂಚಿಕೊಳ್ಳಿ