ಅನುಕ್ರಮ ವರ್ಗಾವಣೆ
ಅನುಕ್ರಮ ಭ್ರೂಣ ವರ್ಗಾವಣೆ (ಎಸ್‌ಇಟಿ)- ಸಂತಾನರಹಿತ ದಂಪತಿಗಳು ಪಿತೃತ್ವವನ್ನು ಪಡೆಯಲು ಸಹಾಯ ಮಾಡುವ ವರದಾನ!
ಅನುಕ್ರಮ ಭ್ರೂಣ ವರ್ಗಾವಣೆ (ಎಸ್‌ಇಟಿ) ಎಂದರೇನು?
ಎಸ್‌ಇಟಿ ಎಂಬುದು ಸಂತಾನೋತ್ಪತ್ತಿ ಸಮಸ್ಯೆಗೆ ಐವಿಎಫ್ ಚಿಕಿತ್ಸೆಗೆ ಒಳಗಾಗುವ ಮಹಿಳೆಯ ಒಂದೇ ಆವರ್ತನದಲ್ಲಿ ಎರಡು ಗುಂಪುಗಳ ಭ್ರೂಣಗಳ ವರ್ಗಾವಣೆಯಾಗಿರುತ್ತದೆ. ಸಾಕಷ್ಟು ಸಂಖ್ಯೆಯ ಹಿಂಪಡೆಯಲಾದ ಅಂಡಾಣುಗಳನ್ನು ಹೊಂದಿರುವ ರೋಗಿಗಳಲ್ಲಿ ದಿನ ೩ ಮತ್ತು ೫ ನೇ ದಿನದ ಅನುಕ್ರಮ ಅಥವಾ ಸತತ ಭ್ರೂಣ ವರ್ಗಾವಣೆಯು ಯಶಸ್ವಿ ಭ್ರೂಣದ ಅಳವಡಿಕೆ ಮಟ್ಟ, ತೃಪ್ತಿಕರ ಗರ್ಭಧಾರಣೆಯ ಮಟ್ಟ ಮತ್ತು ಬಹು ಗರ್ಭಧಾರಣೆಯ ಮಟ್ಟಗಳ ಪ್ರಯೋಜನಗಳನ್ನು ಸಮಾನ ಸಮಯದಲ್ಲಿ ನೀಡುತ್ತದೆ ಮತ್ತು ಬ್ಲಾಸ್ಟೊಸಿಸ್ಟ್ ವರ್ಗಾವಣೆಯಲ್ಲಿನ ಸಂಕೀರ್ಣ ತೊಂದರೆಗಳಾದ ವರ್ಗಾವಣೆ ಆವರ್ತನ ರದ್ದಾಗುವುದು ಮುಂತಾದ ತೊಡಕುಗಳನ್ನು ತಪ್ಪಿಸುತ್ತದೆಯಲ್ಲದೇ, ಹೆಚ್ಚು ಉತ್ತಮ ಬಹು ಕ್ರಮದ ಜನನಗಳಿಗೆ ದಾರಿಯಾಗುತ್ತದೆ.
ಬ್ಲಾಸ್ಟೊಸಿಸ್ಟ್ ವರ್ಗಾವಣೆಯು ಪುನರಾವರ್ತಿತ ಐವಿಎಫ್ ವೈಫಲ್ಯಗಳಲ್ಲಿ ಐವಿಎಫ್ ಫಲಿತಾಂಶವನ್ನು ಸುಧಾರಿಸುವ ವಿಧಾನವಾಗಿದೆ. ಆದರೆ ಭ್ರೂಣಗಳ ಸಂಖ್ಯೆ ಮತ್ತು ಗುಣಮಟ್ಟವು ಈ ವಿಧಾನದ ಫಲಿತಾಂಶವನ್ನು ನಿರ್ಧರಿಸುತ್ತದೆ. ಹೀಗಾಗಿ, ಸಂಪೂರ್ಣ ಆವರ್ತನವನ್ನು ರದ್ದಾಗುವಂತೆ ಮಾಡದೇ ಅನುಕ್ರಮ ವರ್ಗಾವಣೆ ವಿಧಾನವು ಪ್ರಯೋಜನವನ್ನು ಹೊಂದಿದೆ
ಎಸ್‌ಇಟಿಯನ್ನು ಯಾವಾಗ ನಿರ್ವಹಿಸಲಾಗುತ್ತದೆ?
ಅನುಕ್ರಮ ಭ್ರೂಣ ವರ್ಗಾವಣೆ-(ಎಸ್‌ಇಟಿ) ಗರ್ಭಾವಸ್ಥೆಯ ಮಟ್ಟಗಳು ಮತ್ತು ಸಂತಾನೋತ್ಪತ್ತಿ ಸಮಸ್ಯೆಯಿರುವ ದಂಪತಿಗಳಲ್ಲಿ ಅಳವಡಿಕೆ ಮಟ್ಟಗಳನ್ನು ಹೆಚ್ಚಿಸುತ್ತದೆ!
ಐವಿಎಫ್ ಚಿಕಿತ್ಸೆಯ ಪುನರಾವರ್ತಿತ ವೈಫಲ್ಯವು ರೋಗಿಗಳು ಮತ್ತು ಅವರ ವೈದ್ಯರಿಗೆ ಕಾಡುತ್ತ್ತದೆ. ಭ್ರೂಣಗಳ ಗುಣಮಟ್ಟ ಉತ್ತಮವಾಗಿದ್ದರೂ ಪದೇಪದೆ ಐವಿಎಫ್ ಚಿಕಿತ್ಸೆಯಲ್ಲಿ ವಿಫಲಗೊಳ್ಳುವ ರೋಗಿಗಳು ಸವಾಲನ್ನು ಒಡ್ಡುತ್ತಾರೆ. ಒಂದು ಅಧ್ಯಯನದ ಪ್ರಕಾರ, ಐವಿಎಫ್ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಸರಾಸರಿ ಗರ್ಭಧಾರಣೆಯ ದರವು ಸುಮಾರು ಶೇ. ೨೦ರಷ್ಟಾಗಿದೆ, ಆದರೆ ಅನುಕ್ರಮ ಭ್ರೂಣ ವರ್ಗಾವಣೆಗೆ (ಎಸ್‌ಇಟಿ) ಒಳಗಾಗುವ ರೋಗಿಗಳು ಶೇ. ೫೦ ಕ್ಕಿಂತ ಹೆಚ್ಚು ಗರ್ಭಧಾರಣೆಯ ಪ್ರಮಾಣವನ್ನು ಹೊಂದಿರುತ್ತಾರೆ.
ಎಸ್‌ಇಟಿಯ ಪ್ರಯೋಜನಗಳು
ಗರ್ಭಾಶಯದಲ್ಲಿ ಬೆಳವಣಿಗೆಯನ್ನು ನಿಲ್ಲಿಸುವ ಭ್ರೂಣಗಳು ಇಂಪ್ಲಾಟೇಶನ್ ವೈಫಲ್ಯಕ್ಕೆ ಕಾರಣವಾಗುತ್ತವೆ ಎಂಬ ಊಹೆಯ ಅಡಿಯಲ್ಲಿ, ಅವುಗಳನ್ನು ಬ್ಲಾಸ್ಟೊಸಿಸ್ಟ್ ಹಂತಕ್ಕೆ ಬೆಳೆಸುವುದು ಎರಡು ಗುರಿಗಳನ್ನು ಪೂರೈಸುತ್ತದೆ.
• ಮೊದಲನೆಯದಾಗಿ, ವರ್ಗಾವಣೆಗಾಗಿ ಭ್ರೂಣಗಳ ಉತ್ತಮ ಆಯ್ಕೆಗೆ ಇದು ಅವಕಾಶ ಮಾಡಿಕೊಡುತ್ತದೆ
• ಎರಡನೆಯದಾಗಿ, ಇದು ಎಂಡೊಮೆಟ್ರಿಯಮ್ ಮತ್ತು ಇಂಪ್ಲಾಟೇಶನ್ ವಿಂಡೋವನ್ನು ಸಾಧಿಸುವ ಸಾಮರ್ಥ್ಯದೊಂದಿಗೆ ಹೊಂದಿಕೊಳ್ಳುತ್ತದೆೆ.
• ಬ್ಲಾಸ್ಟೊಸಿಸ್ಟ್ ಹಂತಕ್ಕೆ ಬೆಳೆದ ಭ್ರೂಣಗಳ ವರ್ಗಾವಣೆಯು ದುರ್ಬಲಗೊಂಡವುಗಳ ಯಾದೃಚ್ಛಿಕ ಆಯ್ಕೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ಭ್ರೂಣಗಳು ಮಾತ್ರ ವರ್ಗಾವಣೆಯಾಗುತ್ತವೆ, ಇದರಿಂದ ಬಹು ಗರ್ಭಧಾರಣೆಯ ಅಪಾಯ ಕಡಿಮೆಯಾಗುತ್ತದೆ. ಆದ್ದರಿಂದ ಇದು ಅನೇಕ ಭ್ರೂಣಗಳನ್ನು ಉತ್ಪಾದಿಸುವ ರೋಗಿಗಳಿಗೆ ಮಾತ್ರ ಸೂಕ್ತವಾದ ವಿಧಾನವಾಗಿದೆ.
• ಅನುಕ್ರಮ ಭ್ರೂಣ ವರ್ಗಾವಣೆಯ ಹಿಂದಿನ ತಾರ್ಕಿಕತೆಯೆಂದರೆ, ಪ್ರಾಥಮಿಕ ದಿನ-೩ರ ವರ್ಗಾವಣೆಯ ಸಮಯದಲ್ಲಿ, ಭ್ರೂಣಗಳು (೧ ಅಥವಾ ೨ ಭ್ರೂಣಗಳು) ಎಂಡೊಮೆಟ್ರಿಯಲ್ ಗ್ರಹಣ ಕ್ರಿಯೆಯಲ್ಲಿ ಏರಿಕೆಯನ್ನು ಉಂಟುಮಾಡಬಹುದು, ಇದರಿಂದಾಗಿ ದಿನದ ೫ ರಂದು ಎರಡನೇ ವರ್ಗಾವಣೆಗೆ (೧ ಬ್ಲಾಸ್ಟೊಸಿಸ್ಟ್) ಉತ್ತಮ ಎಂಡೊಮೆಟ್ರಿಯಲ್ ಲೈನಿಂಗ್ ಅನ್ನು ಸೃಷ್ಟಿಸಬಹುದು.
ಭ್ರೂಣಗಳು ಗರ್ಭಾಶಯದೊಂದಿಗೆ ಮಾತನಾಡುತ್ತವೆ
ಹಲವಾರು ಕಾರಣಗಳಿಗಾಗಿ ಹಲವಾರು ರೋಗಿಗಳಿಗೆ ಕೇವಲ ಒಂದು ವರ್ಗಾವಣೆಗಿಂತ ಎಸ್‌ಇಟಿ ಉತ್ತಮವಾಗಿರುತ್ತದೆ:
• ಮೊದಲನೆಯದಾಗಿ, ಭ್ರೂಣಗಳು ಸೈಟೊಕಿನ್‌ಗಳು ಎಂಬ ಹಾರ್ಮೋನ್‌ಗಳನ್ನು ಬಳಸಿಕೊಂಡು ಗರ್ಭಾಶಯದೊಂದಿಗೆ ಸಂವಹನ ನಡೆಸುತ್ತವೆ. ಆ ಸೈಟೊಕಿನ್‌ಗಳ ಉಪಸ್ಥಿತಿಯು ಗರ್ಭಾಶಯದ ಅಳವಡಿಕೆಗೆ ವಿರುದ್ಧವಾಗಿ ಸಹಾಯ ಮಾಡುತ್ತದೆ. ಅಂಡಾಣು ಮತ್ತು ಗರ್ಭಾಶಯದೊಳಗಿನ ದ್ರವಗಳ ನಿಖರವಾಗಿ ಗುರುತಿಸುವುದು ಅಸಾಧ್ಯ. ಬಹುಶಃ ಭ್ರೂಣವು ಗರ್ಭಾಶಯಕ್ಕೆ ಏನನ್ನು ಅಳವಡಿಸಬೇಕು ಮತ್ತು ಅಭಿವೃದ್ಧಿಪಡಿಸಬೇಕು ಎಂದು ಹೇಳಬಹುದು.
• ಎರಡನೆಯದಾಗಿ, ೩ ನೇ ದಿನದಂದು ಗರ್ಭಾಶಯ ಸಿದ್ಧವಿರುವಾಗ ಮೊದಲ ಗುಂಪಿನ ಭ್ರೂಣಗಳು ಎರಡನೇ ಗುಂಪನ್ನು ಅಳವಡಿಸಲು ಸಹಾಯ ಮಾಡುತ್ತದೆ.
• ವರ್ಗಾವಣೆ ಮಾಡಲು ಹೆಚ್ಚುವರಿ ಭ್ರೂಣಗಳಲ್ಲಿ ಅತ್ಯುತ್ತಮವಾದದನ್ನು ಆಯ್ಕೆಮಾಡುವುದನ್ನು ಎಸ್‌ಇಟಿ ಒದಗಿಸುತ್ತದೆ ಮತ್ತು ಬದುಕುಳಿದವರು ಇಲ್ಲದಿರಬಹುದಾದ ಹೆಚ್ಚುವರಿ ಕ್ರಯೋಪ್ರಿಸರ್ವ್ (ಫ್ರೀಜ್) ಅಗತ್ಯವನ್ನು ಕಡಿಮೆ ಮಾಡುತ್ತದೆ. ತನ್ಮೂಲಕ ಅಳವಡಿಕೆ ಮತ್ತು ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ತಾಜಾವಾಗಿ ವರ್ಗಾವಣೆಯಾಗದ ಬ್ಲಾಸ್ಟೊಸಿಸ್ಟ್ಗಳನ್ನು ಇನ್ನೂ ಕ್ರಯೋಪ್ರ‍್ರಿಸರ್ವ್ ಮಾಡಬಹುದು ಮತ್ತು ನಂತರ ಹೆಪ್ಪುಗಟ್ಟಿದ ಭ್ರೂಣ ವರ್ಗಾವಣೆಗಾಗಿ (ಎಫ್‌ಇಟಿ) ಕರಗಿಸಿ ದ್ರವಸ್ಥಿತಿಗೆ ತರಬಹುದು.
ಗರ್ಭಗುಡಿ ಐವಿಎಫ್‌ನಲ್ಲಿರುವ ನಮ್ಮ ಘಟಕವು ಈ ತಂತ್ರದಲ್ಲಿ ಪರಿಣತಿ ಹೊಂದಿದೆ. ನಾವು ಭಾರತದಾದ್ಯಂತ ಅನೇಕ ರೋಗಿಗಳನ್ನು ಪಡೆಯುತ್ತೇವೆ, ಅವರು ಇತರ ವೈದ್ಯರೊಂದಿಗೆ ಹೊರಗೆ ಅನೇಕ ಬಾರಿ ವಿಫಲರಾಗಿದ್ದಾರೆ. ನಾವು ಈ ವ್ಯವಸ್ಥೆಯನ್ನು ಬಳಸುತ್ತೇವೆ ಮತ್ತು ಅವುಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಗರ್ಭಧಾರಣೆಯನ್ನು ಸಾಧಿಸುತ್ತೇವೆ