ವೆರಿಕೋಸಿಲೆ

ವೆರಿಕೋಸಿಲೆ

ನಿಮ್ಮ ಸ್ಕೋರ್ಟೋಮ್ (ವೃಷಣಗಳು) ಹಿಡಿದಿಟ್ಟುಕೊಳ್ಳುವ ಜೋಲಾಡುವ ಚರ್ಮದೊಳಗಿನ ರಕ್ತನಾಳ ಊದಿಕೊಳ್ಳುವುದನ್ನು ವೆರಿಕೋಸೆಲೆ ಎಂದು ಕರೆಯಲಾಗುತ್ತದೆ.

ವೆರಿಕೋಸೆಲೆ ಕಡಿಮೆ ವೀರ್ಯ ಉತ್ಪಾದನೆ ಮತ್ತು ಕೆಳಮಟ್ಟದ ವೀರ್ಯಾಣು ಗುಣಮಟ್ಟಕ್ಕೆ ಕಾರಣವಾಗುತ್ತದೆ. ಇದು ಪುರುಷ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗುತ್ತದೆ. ವೃಷಣಗಳು ಸಾಮಾನ್ಯಕ್ಕಿಂತ ಕಡಿಮೆ ಅಭಿವೃದ್ಧಿ ಹೊಂದಲು ಅಥವಾ ಕುಗ್ಗುವಿಕೆಗೆ ಕಾರಣವಾಗಲು ವೆರಿಕೋಸೆಲೆ ಕೂಡ ಕಾರಣವಾಗಬಹುದು.

ರೋಗಲಕ್ಷಣಗಳು

ವೆರಿಕೋಸೆಲೆ ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ವಿರಳವಾಗಿ, ಇದು ನೋವನ್ನು ಉಂಟುಮಾಡಬಹುದು. ನೋವು ಈ ಕೆಳಗಿನಂತೆ ಇರಬಹುದು:

• ತೀಕ್ಷ್ಣತೆಯಿಂದ ಮಂದ ಅಸ್ವಸ್ಥತೆಗೆ ಬದಲಾಗುತ್ತದೆ

• ಹೆಚ್ಚು ದೈಹಿಕ ಪರಿಶ್ರಮದಿಂದ ಅಥವಾ ದೀರ್ಘಾವಧಿಯವರೆಗೆ ನಿಂತಿರುವಾಗ ಹೆಚ್ಚುತ್ತದೆ

• ಒಂದು ದಿನದ ಅವಧಿಯಲ್ಲ್ಲಿ ಹದಗೆಡುತ್ತದೆ

• ಫರ್ಟಿಲಿಟಿ ಹಾನಿಗೊಳಗಾಗಲು ಕಾರಣವಾಗುತ್ತದೆ

ಕಾಲಾನಂತರದಲ್ಲಿ, ವೆರಿಕೋಸೆಲೆ ಹಿಗ್ಗಬಹುದು ಮತ್ತು ಹೆಚ್ಚು ಎದ್ದು ಕಾಣುವಂತಾಗಬಹುದು. ವೆರಿಕೊಸೆಲೆಯನ್ನು “ಹುಳುಗಳ ಚೀಲ” ಎಂದು ವರ್ಣಿಸುತ್ತಾರೆ. ಈ ಸ್ಥಿತಿಯು ವೃಷಣ ಊದಿಕೊಳ್ಳಲು ಕಾರಣವಾಗಬಹುದು, ಇದು ವೃಷಣದಲ್ಲಿ ವೀರ್ಯಾಣು ಉತ್ಪಾದನೆಯನ್ನು ತಡೆಯುತ್ತದೆ.

ಫರ್ಟಿಲಿಟಿ ವೈದ್ಯರನ್ನು ಯಾವಾಗ ನೋಡಬೇಕು?

ವರಿಕೊಸೆಲೆ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಫರ್ಟಿಲಿಟಿಯು ಮೌಲ್ಯಮಾಪನ ಅಥವಾ ಸಾಮಾನ್ಯ ದೈಹಿಕ ಪರೀಕ್ಷೆಯ ಸಮಯದಲ್ಲಿ ವೆರಿಕೋಸಿಲೆ ಗಮನಕ್ಕೆ ಬರಬಹುದು:

• ನೀವು ಊತವನ್ನು ಕಂಡುಕೊAಡರೆ ಅಥವಾ ನಿಮ್ಮ ವೃಷಣಗಳಲ್ಲಿ ನೋವನ್ನು ಅನುಭವಿಸಿದರೆ

• ನಿಮ್ಮ ಸ್ಕ್ರೋಟಮ್ ಮೇಲೆ ದ್ರವ್ಯರಾಶಿಯನ್ನು ಕಂಡುಬAದರೆ

• ನಿಮ್ಮ ವೃಷಣಗಳು ವಿಭಿನ್ನ ಗಾತ್ರಗಳಲ್ಲಿವೆ ಎಂಬುದನ್ನು ಗಮನಿಸಿದರೆ

• ನಿಮ್ಮ ಯೌವನದಲ್ಲಿ ವೆರಿಕೊಸೆಲೆ ಬೆಳವಣಿಗೆ ಕಂಡುಬಂದರೆ

• ನಿಮಗೆ ಫರ್ಟಿಲಿಟಿ ಸಮಸ್ಯೆಗಳು ಇದ್ದರೆ

ಮೇಲಿನ ರೋಗಲಕ್ಷಣಗಳಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಹಲವಾರು ಪರಿಸ್ಥಿತಿಗಳು ವೃಷಣ ದ್ರವ್ಯರಾಶಿ ಅಥವಾ ನೋವಿಗೆ ಕಾರಣವಾಗಿವೆ, ಅವುಗಳಲ್ಲಿ ಕೆಲವಕ್ಕೆ ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ.

ಕಾರಣಗಳು

ಫ್ಯೂನಿಕಲ್ ರಕ್ತವನ್ನು ನಿಮ್ಮ ವೃಷಣಗಳಿಗೆ ಮತ್ತು ಹೊರಗೆ ಒಯ್ಯುತ್ತದೆ. ವೆರಿಕೊಸೆಲೆಗೆ ಕಾರಣವೇನು ಎಂಬುದು ಖಚಿತವಾಗಿಲ್ಲ. ರಕ್ತನಾಳಗಳ ಒಳಗಿನ ಕವಾಟಗಳು ರಕ್ತವನ್ನು ಹರಿಯದಂತೆ ತಡೆಗಟ್ಟಿದಾಗ ರಕ್ತನಾಳಗಳನ್ನು ಹಿಗ್ಗಿ ವೆರಿಕೋಸೆಲೆ ಉಂಟಾಗುತ್ತವೆ ಎಂದು ಅನೇಕ ತಜ್ಞರು ನಂಬುತ್ತಾರೆ. ಇದು ವೃಷಣವನ್ನು ನೋಯಿಸಬಹುದು ಮತ್ತು ಹದಗೆಟ್ಟ ಫರ್ಟಿಲಿಟಿಗೆ ಕಾರಣವಾಗಬಹುದು.

ಪ್ರೌಢಾವಸ್ಥೆಗೆ ಬರುವ ಸಮಯದಲ್ಲಿ ವೆರಿಕೋಸಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ, ಎಡ ವೃಷಣ ರಕ್ತನಾಳದ ಎಡಭಾಗದಲ್ಲಿ ಸಂಭವಿಸುತ್ತವೆ.

ಸAಕೀರ್ಣ ತೊಂದರೆಗಳು

ವರಿಕೊಸೆಲೆ ಈ ಕೆಳಗಿನ ತೊಂದರೆಗಳಿಗೆ ಕಾರಣವಾಗಬಹುದು:

• ಬಾಧಿತ ವೃಷಣದ ಕುಗ್ಗುವಿಕೆ (ಅಟ್ರೋಫಿ). ವೃಷಣದ ಬಹುಪಾಲು ವೀರ್ಯ-ಉತ್ಪಾದಿಸುವ ಕೊಳವೆಗಳನ್ನು ಒಳಗೊಂಡಿದೆ. ಹಾನಿಗೊಳಗಾದಾಗ, ವೃಷಣವು ಕುಗ್ಗುತ್ತದೆ ಮತ್ತು ಮೃದುವಾಗುತ್ತದೆ, ಆದ್ದರಿಂದ ವೀರ್ಯ ಉತ್ಪಾದನೆಯ ಚಟುವಟಿಕೆಯನ್ನು ತಡೆಯುತ್ತದೆ. ವೃಷಣಗಳ ಕುಗ್ಗುವಿಕೆ ಅಸ್ಪಷ್ಟವಾಗಿದೆ, ಆದರೆ ಅಸಮರ್ಪಕ ಕವಾಟಗಳು ರಕ್ತನಾಳಗಳೊಳಗೆ ರಕ್ತವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತವೆೆ. ಇದು ರಕ್ತನಾಳಗಳೊಳಗೆ ಹೆಚ್ಚಿದ ಒತ್ತಡಕ್ಕೆ ಕಾರಣವಾಗಬಹುದು; ರಕ್ತದಲ್ಲಿನ ವಿಷಗಳಿಗೆ ಒಡ್ಡಿಕೊಳ್ಳುವುದರಿಂದ ವೃಷಣ ನಾಶ ಉಂಟಾಗುತ್ತದೆ.

ವೃಷಣದಲ್ಲಿ ಅಥವಾ ಅದರ ಸುತ್ತಲಿನ ಸ್ಥಳೀಯ ತಾಪಮಾನವನ್ನು ವೆರಿಕೋಸೆಲೆಗಳು ಅತಿ ಹೆಚ್ಚು ಇರಿಸಬಹುದು, ಇದು ವೀರ್ಯಾಣು ರಚನೆ, ಚಲನೆ (ಚಲನಶೀಲತೆ) ಮತ್ತು ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.

ರೋಗನಿರ್ಣಯ

ನಿಮ್ಮ ವೈದ್ಯರು ದೈಹಿಕ ಪರೀಕ್ಷೆಯನ್ನು ನಡೆಸುತ್ತಾರೆ, ಇದು ನಿಮ್ಮ ವೃಷಣದ ಮೇಲೆ ಹುಳುಗಳ ಚೀಲದಂತೆ ಭಾಸವಾಗುವ ಕೋಮಲವಲ್ಲದ ದ್ರವ್ಯರಾಶಿಯನ್ನು ಬಹಿರಂಗಪಡಿಸಬಹುದು. ನೀವು ಚಿಕ್ಕದಾದ ವೆರಿಕೊಸೆಲೆಯನ್ನು ಹೊಂದಿದ್ದರೆ, ನೀವು ನಿಂತುಕೊಳ್ಳಬೇಕು, ಆಳವಾದ ಉಸಿರನ್ನು ತೆಗೆದುಕೊಂಡು ಅದನ್ನು ಹಿಡಿದಿಟ್ಟುಕೊಳ್ಳಬೇಕು (ವಲ್ಸಾಲ್ವಾ ಮನೋವರ್). ರಕ್ತನಾಳಗಳ ಅಸಹಜ ಹಿಗ್ಗುವಿಕೆಯನ್ನು ಪತ್ತೆಹಚ್ಚಲು ಇದು ನಿಮ್ಮ ವೈದ್ಯರಿಗೆ ಸಹಾಯ ಮಾಡುತ್ತದೆ. ದೈಹಿಕ ಪರೀಕ್ಷೆಯು ನಿಖರವಾದ ಫಲಿತಾಂಶಗಳನ್ನು ನೀಡದಿದ್ದರೆ, ನಿಮ್ಮ ವೈದ್ಯರು ಸ್ಕ್ರೋಟಲ್ ಅಲ್ಟಾçಸೌಂಡ್ ಪರೀಕ್ಷೆಯನ್ನು ಆದೇಶಿಸಬಹುದು. ಈ ಪರೀಕ್ಷೆಯು ನಿಮ್ಮ ದೇಹದೊಳಗಿನ ರಚನೆಗಳ ನಿಖರವಾದ ಚಿತ್ರಗಳನ್ನು ಮೂಡಿಸಲು ಹೆಚ್ಚಿನ ಆವರ್ತನದ ಧ್ವನಿ ತರಂಗಗಳನ್ನು ಬಳಸುತ್ತದೆ. ಕೆಲವು ಸಂದರ್ಭಗಳಲ್ಲಿ, ವೀರ್ಯಾಣು ಅಭಿಧಮನಿಯನ್ನು ಸಂಕುಚಿತಗೊಳಿಸುವ ಗೆಡ್ಡೆಯನ್ನು ತಳ್ಳಿಹಾಕುವುದಕ್ಕಾಗಿ ಮತ್ತಷ್ಟು ಚಿತ್ರಣದ ಅಗತ್ಯವಿರುತ್ತದೆ.

ಚಿಕಿತ್ಸೆ

ವೆರಿಕೋಸೆಲೆ ಚಿಕಿತ್ಸೆಯು ಅಗತ್ಯವಿಲ್ಲದಿರಬಹುದು. ವೆರಿಕೊಸೆಲೆ ಹೊಂದಿರುವ ಅನೇಕ ಪುರುಷರು ಯಾವುದೇ ಚಿಕಿತ್ಸೆ ಇಲ್ಲದೆ ಮಗುವಿಗೆ ತಂದೆಯಾಗಬಹುದು. ನಿಮ್ಮ ವೆರಿಕೊಸೆಲೆಯು ನೋವನ್ನು ಉಂಟುಮಾಡಿದರೆ, ನೀವು ವೃಷಣ ಕ್ಷೀಣತೆಯನ್ನು ಹೊಂದಿರುತ್ತೀರಿ ಅಥವಾ ಸಂತಾನೋತ್ಪತ್ತಿ ಸಮಸ್ಯೆ ಎದುರಿಸುತ್ತಿರುವಿರಿ. ಅದಕಗಕೆ ನೀವು ಸಹಾಯಕ ಸಂತಾನೋತ್ಪತ್ತಿ ತಂತ್ರಗಳನ್ನು ಪರಿಗಣಿಸುತ್ತೀರಿ, ನಂತರ, ನೀವು ವೆರಿಕೊಸೆಲೆ ಚಿಕಿತ್ಸೆಗೆ ಒಳಗಾಗಬಹುದು.

ಶಸ್ತ್ರಚಿಕಿತ್ಸೆಯ ಉದ್ದೇಶವು ಪೀಡಿತ ರಕ್ತನಾಳವನ್ನು ಮುಚ್ಚಿಹಾಕುವುದು ಮತ್ತು ರಕ್ತದ ಹರಿವನ್ನು ಸಾಮಾನ್ಯ ರಕ್ತನಾಳಗಳಿಗೆ ಮರುನಿರ್ದೇಶಿಸುವುದಾಗಿರುತ್ತದೆ. ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ನಂತಹ ತಂತ್ರಗಳನ್ನು ಆರಿಸಿಕೊಂಡರೆ ವೆರಿಕೋಸೆಲ್ ಚಿಕಿತ್ಸೆಯು ಇನ್‌ಫರ್ಟಿಲಿಟಿಯನ್ನು ಸುಧಾರಿಸಬಹುದು ಅಥವಾ ಗುಣಪಡಿಸಬಹುದು ಅಥವಾ ವೀರ್ಯಾಣು ಗುಣಮಟ್ಟವನ್ನು ಸುಧಾರಿಸಬಹುದು.

ಅಪಾಯಗಳು

ವೆರಿಕೋಸೆಲೆ ದುರಸ್ತಿಯು ತುಲನಾತ್ಮಕವಾಗಿ ಕೆಲವು ಅಪಾಯಗಳನ್ನು ಒಳಗೊಂಡಿರುತ್ತದೆ, ಅವುಗಳಲ್ಲಿ ಈ ಕೆಳಗಿನವು ಸೇರಿವೆ:

• ವೃಷಣಗಳ ಸುತ್ತ ದ್ರವದ ರಚನೆ (ಹೈಡ್ರೋಸಿಲ್)

• ವೆರಿಕೋಸೆಲೆಯ ಪುನರಾವರ್ತನೆ

• ಸೋಂಕು

• ಅಪಧಮನಿಗೆ ಹಾನಿ

ದುರಸ್ತಿ ವಿಧಾನಗಳಲ್ಲಿ ಈ ಕೆಳಗಿನವು ಸೇರಿವೆ

• ತೆರೆದ ಶಸ್ತçಚಿಕಿತ್ಸೆ: ಪೀಡಿತ ಅಭಿಧಮನಿಯು ನಿಮ್ಮ ತೊಡೆಸಂದು (ಇಂಗ್ಯುನಲ್ ಅಥವಾ ಸಬ್‌ಇಂಗ್ಯುನಲ್) ಮೂಲಕ ತಲುಪಬಹುದು. ಮುಂದುವರಿದ ಶಸ್ತ್ರಚಿಕಿತ್ಸಾ ಸೂಕ್ಷ್ಮದರ್ಶಕವು ಶಸ್ತ್ರಕ್ರಿಯಾತಜ್ಞರಿಗೆ ಚಿಕಿತ್ಸೆ ನೀಡಬೇಕಾದ ಪ್ರದೇಶವನ್ನು ಉತ್ತಮವಾಗಿ ನೋಡಲು ಅನುಮತಿಸುತ್ತದೆ. ಇನ್ನೊಂದು ಡಾಪ್ಲರ್ ಅಲ್ಟ್ರಾಸೌಂಡ್ ಬಳಕೆ, ಇದು ಕಾರ್ಯವಿಧಾನವನ್ನು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ.

ಎರಡು ದಿನಗಳ ನಂತರ ನೀವು ಸಾಮಾನ್ಯ,ಶ್ರಮರಹಿತ ಚಟುವಟಿಕೆಗಳಿಗೆ ಮರಳಲು ಸಿದ್ಧರಾಗಿರಬಹುದು. ಸೌಮ್ಯವಾದ ನೋವು ಹಲವು ದಿನಗಳು ಅಥವಾ ವಾರಗಳವರೆಗೆ ಮುಂದುವರಿಯಬಹುದು. ನಿಮ್ಮ ವೈದ್ಯರು ಅನಾನುಕೂಲವನ್ನು ನಿವಾರಿಸಲು ಶಸ್ತ್ರಚಿಕಿತ್ಸೆಯ ನಂತರ ಸೀಮಿತ ಅವಧಿಗೆ ನೋವು ಔಷಧಿಗಳನ್ನು ಶಿಫಾರಸು ಮಾಡಬಹುದು.

ನಿಮ್ಮ ವೈದ್ಯರು ಸ್ವಲ್ಪ ಸಮಯದವರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಡಿ ಎಂದು ಸಲಹೆ ನೀಡಬಹುದು. ಸುಧಾರಿತ ವೀರ್ಯಾಣು ಗುಣಮಟ್ಟಕ್ಕಾಗಿ ಶಸ್ತ್ರಚಿಕಿತ್ಸೆಯ ನಂತರ ಹಲವಾರು ತಿಂಗಳುಗಳು ಹಿಡಿಯುತ್ತದೆ. ಏಕೆಂದರೆ ಹೊಸ ವೀರ್ಯಾಣು ಅಭಿವೃದ್ಧಿಗೊಳ್ಳಲು ಮೂರು ತಿಂಗಳು ಬೇಕಾಗುತ್ತದೆ.

ಮೈಕ್ರೋಸ್ಕೋಪ್ ಮತ್ತು ಸಬ್‌ಇಂಗ್ಯುನಲ್ ವಿಧಾನವನ್ನು ಬಳಸಿಕೊಂಡು ತೆರೆದ ಶಸ್ತ್ರಚಿಕಿತ್ಸೆಯು ಹೆಚ್ಚಿನ ಯಶಸ್ಸಿನ ಪ್ರಮಾಣವನ್ನು ಹೊಂದಿದೆ.

• ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ: ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಒಂದು ಸಣ್ಣ ಸೀಳುಗಾಯದ ಮೂಲಕ ಸಣ್ಣ ಉಪಕರಣವನ್ನು ಸಾಗಿಸುವುದರೊಂದಿಗೆ, ನಿಮ್ಮ ಶಸ್ತ್ರಚಿಕಿತ್ಸಕ ವೆರಿಕೋಸೆಲೆಅನ್ನು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಸರಿಪಡಿಸುತ್ತಾರೆ. ಈ ಪ್ರಕ್ರಿಯೆಗೆ ಸಾಮಾನ್ಯ ಅರಿವಳಿಕೆ ಅಗತ್ಯವಿರುತ್ತದೆ.

• ಪೆರ್ಕ್ಯುಟೇನಿಯಸ್ ಎಂಬೋಲೈಸೇಶನ್: ವಿಕಿರಣಶಾಸ್ತ್ರಜ್ಞರು ನಿಮ್ಮ ತೊಡೆಸಂದು ಅಥವಾ ಕುತ್ತಿಗೆಯಲ್ಲಿ ನಾಳದೊಳಗೆ ಟ್ಯೂಬ್ ಅನ್ನು ಸೇರಿಸುತ್ತಾರೆ. ಮಾನಿಟರ್‌ನಲ್ಲಿ ನಿಮ್ಮ ವಿಸ್ತರಿಸಿದ ರಕ್ತನಾಳಗಳನ್ನು ನೋಡಿದಾಗ, ವೈದ್ಯರು ಸುರುಳಿಗಳನ್ನು ಅಥವಾ ಆ್ಯನ್ಸರ್‌ಅನ್ನು ಬಿಡುಗಡೆ ಮಾಡುತ್ತಾರೆ, ಇದು ವೃಷಣ ನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ, ಅದು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ ಮತ್ತು ವೆರಿಕೋಸೆಲೆಯನ್ನು ಸರಿಪಡಿಸುತ್ತದೆ.

ವೆರಿಕೊಸೆಲೆಯೊಂದಿಗೆ ಬದುಕುವುದು

ಸಂತಾನೋತ್ಪತ್ತಿ ಸಮಸ್ಯೆ ವೆರಿಕೊಸೆಲೆಯ ಸಾಮಾನ್ಯ ಸಂಕೀರ್ಣ ತೊಂದರೆಯಾಗಿದೆ. ನೀವು ಮತ್ತು ನಿಮ್ಮ ಸಂಗಾತಿಯು ಗರ್ಭಧಾರಣೆಯಲ್ಲಿ ಸಮಸ್ಯೆಗಳನ್ನು ಹೊಂದಿದ್ದರೆ ನಮ್ಮ ಫರ್ಟಿಲಿಟಿ ವೈದ್ಯರೊಂದಿಗೆ ಮಾತನಾಡಿ. ವೆರಿಕೋಸೆಲೆ ನಿಮಗೆ ನೋವನ್ನು ಉಂಟುಮಾಡುತ್ತಿದ್ದರೆ ಅಥವಾ ನೀವು ಮಗುವನ್ನು ಹೊಂದಲು ವಿಫಲರಾಗಿದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ನಿಮಗೆ ಯಾವ ಚಿಕಿತ್ಸೆಯು ಸೂಕ್ತವಾಗಿದೆ ಎಂಬುದನ್ನು ಕುರಿತು ಬೆಂಗಳೂರಿನ ಪ್ರಮುಖ ಫರ್ಟಿಲಿಟಿ ಆರೈಕೆ ಸಲಹೆಗಾರರಾದ ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿರುವ ನಮ್ಮ ಫರ್ಟಿಲಿಟಿ ವೈದ್ಯರೊಂದಿಗೆ ಮಾತನಾಡಿ.

ಈ ಪುಟವನ್ನು ಹಂಚಿಕೊಳ್ಳಿ