content
ಡಾ. ಆಶಾ ಎಸ್ ವಿಜಯ್

ಡಾ. ಆಶಾ ಎಸ್ ವಿಜಯ್

MBBS, DGO, DNB, FRM - ಜರ್ಮನಿ | ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರು

ಡಾ. ಆಶಾ ಎಸ್. ವಿಜಯ್ ಪ್ರಸಿದ್ಧ ಸ್ತ್ರೀರೋಗತಜ್ಞರು. ಫರ್ಟಿಲಿಟಿ ಮತ್ತು ಸಂತಾನೋತ್ಪತ್ತಿ ಚಿಕಿತ್ಸಾ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಸಂತಾನೋತ್ಪತ್ತಿ ಸಮಸ್ಯೆ, ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ಸೋನಾಲಜಿ ಕ್ಷೇತ್ರದಲ್ಲಿ ಪರಿಣಿತಿ ಪಡೆದಿದ್ದಾರೆ. ಅಲ್ಲದೇ ಲ್ಯಾಪರೊಸ್ಕೋಪಿಕ್ ಸರ್ಜರಿಯಲ್ಲಿಯೂ ಅತಿ ಹೆಚ್ಚು ಪರಿಣಿತಿ ಹೊಂದಿದ್ದಾರೆ.

ಡಾ. ಆಶಾ ಎಸ್. ವಿಜಯ್ ಪ್ರತಿಷ್ಠಿತ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಮೆಡಿಸಿನ್ನಲ್ಲಿ ಪದವಿ ಪಡೆದರು. ಬೆಂಗಳೂರಿನ ಕಿದ್ವಾಯಿ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸಿದರು. ನಂತರ ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ೧೯೯೬ ರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು.

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ಅಂದ್ರೆ ೧೯೯೮ ರಲ್ಲಿ ನ್ಯಾಷನಲ್ ಬೋರ್ಡ್ ನವದೆಹಲಿಯಿಂದ ಡಿಪ್ಲೊಮೇಟ್ ಪಡೆದರು. ಆನಂತರ, ಕರ್ನಾಟಕ ಸರ್ಕಾರದಿಂದ ಇಎಸ್ಐ ಕಾರ್ಪೊರೇಶನ್ ಆಫ್ ಇಂಡಿಯಾ, ರಾಜಾಜಿನಗರ, ಬೆಂಗಳೂರು- ಇಲ್ಲಿ ಗೆಜೆಟೆಡ್ ವೈದ್ಯಕೀಯ ಅಧಿಕಾರಿಯಾಗಿ ಆಯ್ಕೆಯಾದರು. ೧೯೯೮ ರಿಂದ ೨೦೦೩ ರವರೆಗೆ ಇಎಸ್ಐ ಕಾರ್ಪೊರೇಶನ್ನಲ್ಲಿ ಕಾರ್ಯ ನಿರ್ವಹಿಸಿದರು. ನಂತರ ತಮ್ಮದೇ ಆದ ಖಾಸಗಿ ವೈದ್ಯಕೀಯ ವೃತ್ತಿಜೀವನ ಪ್ರಾರಂಭಿಸಿದರು.

ಡಾ. ಆಶಾ ಅವರು ಸನ್ನಿಧಿ ಹೆಸರಿನಲ್ಲಿ ಕ್ಲಿನಿಕ್ ಪ್ರಾರಂಭಿಸಿ ಸ್ತ್ರೀರೋಗ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದುಕೊಂಡರು. ಐವಿಎಫ್ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಕೈಗೆಟುಕುವ ಆರೋಗ್ಯ ಸೇವೆ ಕುರಿತಂತೆ ಬಂದ ಅಪಾರ ಪ್ರತಿಕ್ರಿಯೆ ಮತ್ತು ಅದರ ಅಗತ್ಯತೆಯನ್ನು ಮನಗಂಡು ಸಮಾಜಕ್ಕೆ ಸೇವೆ ಸಲ್ಲಿಸುವ ಉದ್ದೇಶದಿಂದ, ಡಾ. ಆಶಾ ಎಸ್. ವಿಜಯ್ ತಮ್ಮದೇ ಆದ ಆಸ್ಪತ್ರೆ - ಸನ್ನಿಧಿ ಸ್ಪೆಷಾಲಿಟಿ ಸೆಂಟರ್ ಪ್ರಾರಂಭಿಸಿದರು. ಇದಕ್ಕೆ ರೋಗಿಗಳಿಂದ ಮತ್ತು ವೈದ್ಯರಿಂದ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಅದೇ ಸನ್ನಿಧಿ ಆಸ್ಪತ್ರೆ ಈಗ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಬದಲಾವಣೆಗೊಂಡು ಬೆಂಗಳೂರಿನ ಹನುಮಂತನಗರ, ಶ್ರೀನಗರ , ಗಿರಿನಗರ ಸುತ್ತಮುತ್ತ ಅಪಾರ ಖ್ಯಾತಿ ಗಳಿಸಿದೆ.

ಈ ಪುಟವನ್ನು ಹಂಚಿಕೊಳ್ಳಿ