ಕರ್ನಾಟಕದ 9 ಸ್ಥಳಗಳಲ್ಲಿ ಬಂಜೆತನದ ಚಿಕಿತ್ಸೆಯನ್ನು ನೀಡಲು ನಾವು ಹೆಮ್ಮೆಪಡುತ್ತೇವೆ.
ನಮ್ಮ ಸೇವೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಂದು ನಮ್ಮನ್ನು ಸಂಪರ್ಕಿಸಿ ಮತ್ತು ನಿಮ್ಮ ಹತ್ತಿರದ ಶಾಖೆಯನ್ನು ಹುಡುಕಿ.
ದಾವಣಗೆರೆ ನಲ್ಲಿ ಬಂಜೆತನ ಚಿಕಿತ್ಸೆಯ ಆಯ್ಕೆಗಳು








ಶ್ರೀಸದಾ, ಮೊದಲು ಮತ್ತು ಎರಡನೇ ಮಹಡಿ, 2659/1, ಡೆಂಟಲ್ ಕಾಲೇಜು ರಸ್ತೆ, MCC B ಬ್ಲಾಕ್, MCC, ದಾವಣಗೆರೆ, ಕರ್ನಾಟಕ 577004
ಗರ್ಭಗುಡಿ IVF ಕೇಂದ್ರ, ದಾವಣಗೆರೆ
ಮಧ್ಯ ಕರ್ನಾಟಕದ ಹೃದಯವಂತರ ಜಿಲ್ಲೆ ದಾವಣಗೆರೆಯಲ್ಲಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ IVFs ಆಸ್ಪತ್ರೆ ಗರ್ಭಗುಡಿ ತನ್ನ ನೂತನ ಶಾಖೆ ಆರಂಭಿಸಿದೆ. ಅತ್ಯಾಧುನಿಕ ಸೌಕರ್ಯ, ವಿಶ್ವದರ್ಜೆಯ ಚಿಕಿತ್ಸೆ, ಪ್ರೀತಿ ಮತ್ತು ಅತ್ಯುತ್ತಮವಾದ ಆರೈಕೆಗೆ ಹೆಸರುವಾಸಿಯಾಗಿರುವ ಗರ್ಭಗುಡಿ ಮಧ್ಯಕರ್ನಾಟಕದ ಮಕ್ಕಳಿಲ್ಲದ ದಂಪತಿಗಳ ಪಾಲಿಗೆ ಒಂದು ವರದಾನವಾಗಿದೆ. ದಂಪತಿಗಳ ಬಾಳಿಗೆ ಭರವಸೆಯ ಬೆಳಕಾಗಿದೆ.
ನಾಡು ಕಂಡ ಶ್ರೇಷ್ಠ ಫಲವತ್ತತೆ ವೈದ್ಯೆ ಹಾಗೂ ಗರ್ಭಗುಡಿಯ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ಆಶಾ ಎಸ್. ವಿಜಯ್ ಮತ್ತು ಗರ್ಭಗುಡಿ ಗ್ರೂಪ್ CEO ವಿಜಯ್ ಕುಮಾರ್ ಎಸ್. ಇವರ ನೇತೃತ್ವದಲ್ಲಿ ಗರ್ಭಗುಡಿ ಆಸ್ಪತ್ರೆ ಅದ್ವಿತೀಯವಾದ ಸಾಧನೆಯನ್ನೇ ಮಾಡಿದೆ. ಸುಮಾರು 11 ಸಾವಿರಕ್ಕೂ ಹೆಚ್ಚು ಮಕ್ಕಳು ಜನ್ಮತಾಳಲು ನೆರವಾಗಿದೆ. ಆ ಮೂಲಕ 11 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸಂತಸದಿಂದ, ಸಂಭ್ರಮದಿಂದ ತಮ್ಮ ಕುಟುಂಬವನ್ನು ಪರಿಪೂರ್ಣಗೊಳಿಸಿಕೊಳ್ಳಲು ನೆರವಾಗಿದೆ.
ಇದು ಗರ್ಭಗುಡಿಯ ಹೆಮ್ಮೆ.
ಬೆಂಗಳೂರಿನಲ್ಲಿ ಎಂಟು ಸುಸಜ್ಜಿತ ಶಾಖೆಗಳನ್ನು ಹೊಂದಿರುವ ಗರ್ಭಗುಡಿ ಮಧ್ಯ ಕರ್ನಾಟಕದ ಜನರಿಗೆ ತನ್ನ ಸೇವೆಯನ್ನು ನೀಡಲೆಂದೇ ದಾವಣಗೆರೆಯಲ್ಲಿ ಅಂದರೆ, ಬೆಂಗಳೂರಿನಿಂದ ಹೊರಭಾಗದ ಜಿಲ್ಲೆಯಲ್ಲಿ ತನ್ನ ಮೊದಲನೇ ಶಾಖೆಯನ್ನು ಆರಂಭಿಸಿದೆ. ತನ್ನ ಒಡಲಲ್ಲಿ ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳನ್ನು ಹೊಂದಿರುವ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ ಮತ್ತು ಚಿಕ್ಕಮಗಳೂರು ಹಾಗೂ ಬಳ್ಳಾರಿ ಜಿಲ್ಲೆಗಳಿಂದ ಸುತ್ತುವರಿದಿದ್ದು ಆ ಭಾಗದ ಎಲ್ಲಾ ಜನರಿಗೆ ತನ್ನ ಉತ್ತಮ ಸೇವೆಯನ್ನು ನೀಡುತ್ತಿದೆ.
ದಾವಣಗೆರೆಯಲ್ಲಿ ಎಲ್ಲಾ ಶಾಖೆಗಳಂತೆ ಅತ್ಯುತ್ತಮವಾದ ನುರಿತ ಫಲವತ್ತತೆ ತಜ್ಞರಿದ್ದಾರೆ. ಎಂಬ್ರಿಯೋಲಾಜಿಸ್ಟ್ ಮತ್ತು ಆಂಡ್ರಾಲಜಿಸ್ಟ್‌ಗಳಿದ್ದಾರೆ. ಆಗಸ್ಟ್ 13 ರಂದು ಆರಂಭವಾಗಿರುವ ದಾವಣಗೆರೆ ಶಾಖೆ, ಆಗಸ್ಟ್ 17 ರಿಂದ ತನ್ನ ಸೇವೆಯನ್ನು ಆರಂಭ ಮಾಡಿದ್ದು ತನ್ನಲ್ಲಿಗೆ ಚಿಕಿತ್ಸೆಗೆಂದು ಬರುವ ದಂಪತಿಗಳಿಗೆ ವೈಯಕ್ತಿಕಗೊಳಿಸಿದ ಸಂಪೂರ್ಣ ಚಿಕಿತ್ಸೆ ನೀಡುತ್ತಿದೆ.
IVF ಜೊತೆಗೆ, ಗರ್ಭಗುಡಿಯು ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI), ಪ್ರಿಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ (PGD), ಮತ್ತು ಡೋನರ್ ಎಗ್/ಸ್ಪರ್ಮ್ IVF ನಂತಹ ಇತರ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳ ಸೇವೆಯನ್ನು ದಾವಣಗೆರೆಯಲ್ಲಿ ನೀಡುತ್ತಿದೆ.