ಕರ್ನಾಟಕದಾದ್ಯಂತ ನಾವು ಒಂಭತ್ತು ಅತ್ಯಾಧುನಿಕ ಶಾಖೆಗಳನ್ನು ಹೊಂದಿದ್ದೇವೆ. ತಮಿಳುನಾಡಿನ ಹೊಸೂರಿನ ಶಾಖೆಯಲ್ಲಿ ಎಲ್ಲಾ ರೀತಿಯ ಇನ್‌ಫರ್ಟಿಲಿಟಿ ಸಮಸ್ಯೆಗಳಿಗೂ ವಿಶ್ವದರ್ಜೆಯ ಚಿಕಿತ್ಸೆ ದೊರೆಯಲಿದೆ.
ನಮ್ಮ ಸೇವೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮಗೆ ಹತ್ತಿರವಾದ ನಮ್ಮ ಶಾಖೆಯನ್ನು ಹುಡುಕಲು ಇಂದೇ ನಮ್ಮನ್ನು ಸಂಪರ್ಕಿಸಿ.
ಯಲಹಂಕ ಶಾಖೆಯಲ್ಲಿ ದೊರೆಯುವ ಚಿಕಿತ್ಸೆಗಳು
ಗರ್ಭಗುಡಿ IVF ಸೆಂಟರ್, ಎರಡನೇ ಮಹಡಿ, ಪಿರಮಿಡ್ ನಾರ್ಥ್ ಸ್ಕ್ವೇರ್, 520/432, ಬಳ್ಳಾರಿ ರಸ್ತೆ, ನೆಹರೂ ನಗರ, ಯಲಹಂಕ, ಬೆಂಗಳೂರು, ಕರ್ನಾಟಕ -560064
ಗರ್ಭಗುಡಿ IVF ಕೇಂದ್ರ, ಯಲಹಂಕ
ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ IVF ಸೆಂಟರ್ ಗರ್ಭಗುಡಿ ಫಲವತ್ತತೆ ಚಿಕಿತ್ಸೆಯಲ್ಲಿ ಮುಂಚೂಣಿಯ ಆಸ್ಪತ್ರೆಯಾಗಿದೆ. ಮಕ್ಕಳಿಲ್ಲದ ದಂಪತಿಗಳ ಪಾಲಿಗೆ ಭರವಸೆಯ ಚಿಕಿತ್ಸಾ ಕೇಂದ್ರವಾಗಿದೆ. ಗರ್ಭಗುಡಿಯು ಯಲಹಂಕದ ನೆಹರೂ ನಗರದಲ್ಲಿ ಅತ್ಯಂತ ಸುಸಜ್ಜಿತವಾದ ತನ್ನ 8ನೇ ಶಾಖೆಯನ್ನು ಹೊಂದಿದ್ದು, ಇದು ಏರ್‌ಪೋರ್ಟ್ ಮುಖ್ಯರಸ್ತೆಯಲ್ಲಿದೆ.
ಯಲಹಂಕದ ಗರ್ಭಗುಡಿ ಶಾಖೆ ಕೂಡ ಗರ್ಭಗುಡಿಯ ಇತರೆ ಶಾಖೆಗಳಂತೆ ಅತ್ಯಾಧುನಿಕ ಮೂಲ ಸೌಕರ್ಯ ಹೊಂದಿರುವುದರ ಜೊತೆಗೆ ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯವನ್ನು ಹೊಂದಿದೆ. ಗರ್ಭಗುಡಿಯು ಫಲವತ್ತತೆ ಚಿಕಿತ್ಸೆಯ ಯಶಸ್ಸನ್ನು ಹೆಚ್ಚಿಸಲು ಸಮಗ್ರ ಚಿಕಿತ್ಸಾವಿಧಾನವನ್ನು ಅನುಸರಿಸುತ್ತಿದೆ. ಯೋಗ, ನ್ಯೂಟ್ರಿಷನ್ ಮತ್ತು ಆಯುರ್ವೇದ ಚಿಕಿತ್ಸೆಯು IVF ಚಿಕಿತ್ಸೆ ಪಡೆದುಕೊಳ್ಳುವ ದಂಪತಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ.
ಯಲಹಂಕ ಶಾಖೆಯಲ್ಲಿ ಅತ್ಯಂತ ಅನುಭವೀ ಫಲವತ್ತತೆ ವೈದ್ಯರು, ನರ್ಸ್‌ಗಳು, ಭ್ರೂಣಶಾಸ್ತ್ರಜ್ಞರು ಮತ್ತು ಆಂಡ್ರಾಲಜಿಸ್ಟ್‌ಗಳ ತಂಡವಿದೆ. ಇಲ್ಲಿ IVF ಜೊತೆಗೆ ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ICSI), ಪ್ರಿಇಂಪ್ಲಾಂಟೇಶನ್ ಜೆನೆಟಿಕ್ ಡಯಾಗ್ನೋಸಿಸ್ (PGD) ಮತ್ತು ಇನ್ನೂ ಹೆಚ್ಚಿನ ಆಧುನಿಕ ಚಿಕಿತ್ಸೆಗಳು ದೊರೆಯುತ್ತವೆ. ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಲು ಪ್ರತಿ ಚಿಕಿತ್ಸೆಯನ್ನೂ ವೈಯಕ್ತಿಕವಾಗಿ ಮತ್ತು ಜಾಗರೂಕವಾಗಿ ರೂಪಿಸಲಾಗುತ್ತದೆ.
ಗರ್ಭಗುಡಿ IVF ಸೆಂಟರ್‌ನ ಸಂಸ್ಥಾಪಕರೂ ಮತ್ತು ವೈದ್ಯಕೀಯ ನಿರ್ದೇಶಕರೂ ಆದ ಡಾ. ಆಶಾ ಎಸ್. ವಿಜಯ್ ಅವರ ನೇತೃತ್ವದಲ್ಲಿನ ತಂಡ, ಫಲವತ್ತತೆ ಚಿಕಿತ್ಸೆ ಕೇವಲ ಒಂದು ವೈದ್ಯಕೀಯ ಚಿಕಿತ್ಸೆ ಮಾತ್ರವಲ್ಲ, ಅದೊಂದು ಭಾವನಾತ್ಮಕ ಮತ್ತು ಮಾನಸಿಕ ಪಯಣ ಎನ್ನುವುದನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದೆ. ಈ ಕೇಂದ್ರವು ದಂಪತಿಗಳಿಗೆ ಪ್ರತಿ ಹಂತದಲ್ಲೂ ಬೇಕಾದ ಸಹಾನುಭೂತಿ, ತಜ್ಞರ ಮಾರ್ಗದರ್ಶನ ನೀಡಲು ಸದಾ ಬದ್ಧವಾಗಿದೆ ಮತ್ತು ದಂಪತಿಗಳಿಗೆ ಚಿಕಿತ್ಸೆ ಸಮಯದಲ್ಲಿ ಉಂಟಾಗುವ ಸವಾಲುಗಳನ್ನು ಆತ್ಮವಿಶ್ವಾಸ ಮತ್ತು ಭರವಸೆಯೊಂದಿಗೆ ಎದುರಿಸಲು ಸಹಾಯ ಮಾಡುತ್ತದೆ.