ಪರಿಪೂರ್ಣತೆಯಸಂತಸವನ್ನು ಅನುಭವಿಸಿ
"ಗರ್ಭಗುಡಿ" ಹೊಸ ತಲೆಮಾರಿನ ಸಂತಾನೋತ್ಪತ್ತಿ ಚಿಕಿತ್ಸಾ ಆಸ್ಪತ್ರೆಗಳ ಸಮೂಹ ವಾಗಿದೆ. ದಿನೇದಿನೇ ಹೆಚ್ಚುತ್ತಿರುವ ಸಂತಾನೋತ್ಪತ್ತಿ ಸಮಸ್ಯೆಗಳ ಪರಿಹಾರಕ್ಕೆ ಬೇಕಾದ ಅತ್ಯಾಧುನಿಕ ಮೂಲ ಸೌಕರ್ಯ ಮತ್ತು ತಂತ್ರಜ್ಞಾನವನ್ನು ಗರ್ಭಗುಡಿ ಹೊಂದಿದೆ. ಖ್ಯಾತ ಸ್ತ್ರೀರೋಗ ತಜ್ಞೆ ಮತ್ತು ಫರ್ಟಿಲಿಟಿ ತಜ್ಞೆಯಾದ ಡಾ. ಆಶಾ ಎಸ್. ವಿಜಯ್ ಅವರ ನೇತೃತ್ವದಲ್ಲಿ ಖ್ಯಾತ ಉದ್ಯಮಿಗಳು ಮತ್ತು ನುರಿತ ವೈದ್ಯರ ತಂಡವೊಂದು ಗರ್ಭಗುಡಿಯನ್ನ ಸ್ಥಾಪಿಸಿದ್ದು ಅದು ಕರ್ನಾಟಕದಾದ್ಯಂತ ಇಂದು ಮನೆಮಾತಾಗಿದೆ.
ಗರ್ಭಗುಡಿ ಐವಿಎಫ್ ಸೆಂಟರ್ ಸುಮಾರು ೮೦೦೦ಕ್ಕೂ ಹೆಚ್ಚಿನ ದಂಪತಿಗಳು ತಮ್ಮದೇ ಆದ ಮಗು ಪಡೆಯುವಲ್ಲಿ ಆ ಮೂಲಕ ಜೀವನದಲ್ಲಿ ಸಂತಸ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮ್ಮಲ್ಲಿರುವ ನುರಿತ ತಜ್ಞರ ತಂಡ ಮತ್ತು ಅತ್ಯಾಧುನಿಕ ಚಿಕಿತ್ಸಾ ವಿಧಾನದಿಂದ ಸಂತಾನೋತ್ಪತ್ತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಯಶಸ್ಸನ್ನು ದಾಖಲಿಸಿದ ಕೀರ್ತಿ ಗರ್ಭಗುಡಿ ಪಾಲಿಗಿದೆ. ನಾವು ನಮ್ಮ ಉದ್ದೇಶಕ್ಕೆ ಯಾವಾಗಲೂ ಬದ್ಧರಾಗಿದ್ದೇವೆ. ಹಾಗೂ ನಮ್ಮ ಕೇಂದ್ರಕ್ಕೆ ಬಂದ ಪ್ರತಿಯೊಂದು ದಂಪತಿ ಆರೋಗ್ಯವಂತ ಮಗುವಿನೊಂದಿಗೆ ಮನೆಗೆ ಹೋಗಬೇಕು, ಆ ಮೂಲಕ ಪೋಷಕತ್ವವನ್ನುಆನಂದಿಸಬೇಕು. ಅದಕ್ಕೆ ಗರ್ಭಗುಡಿ ಸಂಪೂರ್ಣ ಸಹಾಯ ನೀಡುತ್ತದೆ. ಡಾ ಆಶಾ ಎಸ್. ವಿಜಯ್, ಗರ್ಭಗುಡಿಯ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರುಫರ್ಟಿಲಿಟಿ ಚಿಕಿತ್ಸೆ ನೀಡುವುದು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡ ಉಂಟುಮಾಡುತ್ತದೆ ಎನ್ನುವುದನ್ನು ನಾವು ಗರ್ಭಗುಡಿಯಲ್ಲಿ ಅರ್ಥ ಮಾಡಿಕೊಂಡಿದ್ದೇವೆ. ಯಾರು ಮಕ್ಕಳು ಬೇಕು ಅನ್ನೋ ಪ್ರಯತ್ನದಲ್ಲಿದ್ದಾರೋ ಅವರಿಗೆ ಹಲವು ಆಯ್ಕೆಗಳನ್ನುನೀಡುವುದಲ್ಲದೆ ಅವರ ಬದುಕಿನಲ್ಲಿ ಭರವಸೆಯ ಬೆಳಕು ತರಲು ಗರ್ಭಗುಡಿ ಯಾವಾಗಲೂ ಬದ್ಧವಾಗಿರುತ್ತದೆ. ನೀವು ನಮ್ಮಿಂದ ಈ ಕೆಳಗಿನ ಸೇವೆಗಳನ್ನು ನಿರೀಕ್ಷಿಸಬಹುದು.
ಗರ್ಭಗುಡಿ ಐವಿಎಫ್ ಸೆಂಟರ್ಗೆ ತಮಗೆ ಸ್ವಾಗತ
ನಮ್ಮ ಬಹುಕಾರ್ಯೋಪಯೋಗಿ ವಿಧಾನ
ಫರ್ಟಿಲಿಟಿಯ ಚಿಕಿತ್ಸೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡವನ್ನು ಉಂಟುಮಾಡಬಹುದು ಎಂದು ಗರ್ಭಗುಡಿಯಲ್ಲಿ ನಾವು ಅರ್ಥಮಾಡಿಕೊಂಡಿದ್ದೇವೆ. ಬಹಳಷ್ಟು ಆಯ್ಕೆಗಳನ್ನು ಒದಗಿಸಲು ಮತ್ತು ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಅನೇಕರಿಗೆ ಭರವಸೆಯ ನೂತನ ಕಿರಣವನ್ನು ತರಲು ನಾವು ಯಾವಾಗಲೂ ಬದ್ಧರಾಗಿದ್ದೇವೆ. ಆದ್ದರಿಂದ, ನೀವು ಈ ಕೆಳಗಿನದನ್ನು ನಿರೀಕ್ಷಿಸಬಹುದು:
ಐವಿಎಫ್ನ ಯಶಸ್ಸಿನ ಮಟ್ಟಗಳು
ಗರ್ಭಗುಡಿಯು ಉದ್ಯಮದಲ್ಲಿ ಶೇಕಡಾ 65-73 ಕ್ಕಿಂತ ಹೆಚ್ಚಿನ ಐವಿಎಫ್ ಚಿಕಿತ್ಸೆಗಳ ಯಶಸ್ಸಿನ ಮಟ್ಟವನ್ನು ಹೊಂದಿದೆ.
ವಿಶ್ವ ದರ್ಜೆಯ ಫರ್ಟಿಲಿಟಿ ಆರೈಕೆ
2011 ರಿಂದ 7,000 ಕ್ಕೂ ಹೆಚ್ಚು ಶಿಶುಗಳನ್ನು ಜಗತ್ತಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಮ್ಮೆ.
ಉನ್ನತ ಫಲವತ್ತತೆ ತಜ್ಞರು
ನಿಮಗೆ ಗರ್ಭಧರಿಸುವುದಕ್ಕೆ ಸಹಾಯ ಮಾಡಲು ಸ್ತ್ರೀರೋಗಶಾಸ್ತ್ರತಜ್ಞರು, ಭ್ರೂಣಶಾಸ್ತ್ರಜ್ಞರು, ತಂತ್ರಜ್ಞರು ಮತ್ತು ಸಿಬ್ಬಂದಿಗಳಂತಹ ಫರ್ಟಿಲಿಟಿ ತಜ್ಞರ ತಂಡ.
ಕೈಗೆಟುಕುವ ಚಿಕಿತ್ಸೆಗಳು
ಔಷಧಿಗಳು ಅಥವಾ ಸೇವೆಗಳ ಗುಣಮಟ್ಟ ಅಥವಾ ಸೇವಾಕಾರ್ಯದಲ್ಲಿ ಯಾವುದೇ ರಾಜಿ ಇಲ್ಲದೆ ಕೈಗೆಟುಕುವ ವೆಚ್ಚದ ಚಿಕಿತ್ಸೆ
ಉಚಿತ ಎರಡನೇ ಅಭಿಪ್ರಾಯ
ರೋಗಿಗಳು ಬಂದು ನಮ್ಮ ವೈದ್ಯರನ್ನು ಭೇಟಿ ಮಾಡಬಹುದು ಮತ್ತು ರೋಗಿ ದಂಪತಿಗಳಿಗೆ ಸಲಹೆ ನೀಡಲಾಗಿರುವ ಚಿಕಿತ್ಸೆಯು ಉತ್ತಮವಾಗಿದೆಯೇ ಎಂದು ಅರ್ಥಮಾಡಿಕೊಳ್ಳಬಹುದು.
ಹಣಕಾಸು ನೆರವು ಆಯ್ಕೆಗಳು
ಕಾರ್ಯವಿಧಾನಗಳ ವೆಚ್ಚವನ್ನು ಪೂರೈಸುವುದಕ್ಕೆ ಹಣಕಾಸು ಹೊಂದಿಸುವುದು ಸಾಧ್ಯವಾಗದಿದ್ದಾಗ ರೋಗಿಗಳಿಗೆ ಶೂನ್ಯ ಬಡ್ಡಿಯಲ್ಲಿ ಹಣಕಾಸು ನೆರವು.
ಸಮಗ್ರ ಮಾರ್ಗ
ಮನಸ್ಸು-ದೇಹ-ಆತ್ಮಗಳನ್ನು ಒಳಗೊಂಡ ಕಾರ್ಯಕ್ರಮಗಳ ಮೂಲಕ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡುವುದು.
ಸಾಂಪ್ರದಾಯಿಕ ಶಿಷ್ಟಾಚಾರಗಳು
ಪ್ರಕ್ರಿಯೆ, ತಂತ್ರಜ್ಞಾನ ಮತ್ತು ವೈದ್ಯಕೀಯ ಸಂಶೋಧನೆಯಲ್ಲಿ ಇತ್ತೀಚಿನ ಪ್ರಗತಿಗಳನ್ನು ಅಳವಡಿಸಲು ನಿಗದಿತವಾಗಿ ವಿಸ್ತರಣೆÉ ಮತ್ತು ನವೀಕರಣ ಕಾರ್ಯ ಕೈಗೊಳ್ಳಲಾಗುತ್ತದೆ.
ಅತ್ಯುತ್ತಮ ಸೌಲಭ್ಯಗಳು
ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ಜೊತೆಗೆ ಅತ್ಯಂತ ಸವಾಲಿನ ಪ್ರಕರಣಗಳನ್ನು ನಿರ್ವಹಿಸಲು ಕೇಂದ್ರಗಳು ಸಜ್ಜಾಗಿವೆ
ನೀವು ನಿಮ್ಮ ಬಂಜೆತನ ಚಿಕಿತ್ಸೆಗಾಗಿ ಗರ್ಭಗುಡಿಯನ್ನು ನಂಬಬಹುದು
ನಮ್ಮ ಸದಾ ಬೆಳೆಯುತ್ತಿರುವ ಯಶಸ್ಸು
ಗರ್ಭಗುಡಿ ಎಂದರೆ ಕನಸುಗಳು ಜೀವಂತವಾಗಿರುವ ಸ್ಥಳ, ಇಲ್ಲಿ ಭರವಸೆಗಳು ಎಂದಿಗೂ ಮರೆಯಾಗುವುದಿಲ್ಲ ಮತ್ತು ಸಾಧ್ಯತೆಗಳು ಎಂದಿಗೂ ಕೊನೆಗೊಳ್ಳುವುದಿಲ್ಲ. ನಿಮ್ಮ ಆನಂದದ ಕಂದಮ್ಮಗಳನ್ನು ಕೈಯಲ್ಲಿ ಎತ್ತಿಹಿಡಿಯುವ ಸುವರ್ಣ ಕ್ಷಣವನ್ನು ಅನುಭವಿಸಲು ನಿಮಗೆ ಸಹಾಯ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ನಮ್ಮ ಗುಣಮಟ್ಟದ ಚಿಕಿತ್ಸೆ ಮತ್ತು ಆರೈಕೆಯ ಜೊತೆಗೆ, ಉನ್ನತ ಯಶಸ್ಸಿನ ಮಟ್ಟಗಳನ್ನು ಸಾಧಿಸಲು ಕೊಡುಗೆ ನೀಡುವ ಇತರ ಕೆಲವು ಅಂಶಗಳು:
10000+ಸಂತೋಷ ತುಂಬಿದ ಕುಟುಂಬಗಳು
111+ಉಚಿತ ಫರ್ಟಿಲಿಟಿ ಜಾಗೃತಿ ಶಿಬಿರಗಳು
65-73%ಐವಿಎಫ್ ಯಶಸ್ಸಿನ ಮಟ್ಟ
7ಬೆಂಗಳೂರಿನ ವಿವಿಧೆಡೆ 5 ಕೇಂದ್ರಗಳು
ನಮ್ಮ ತಜ್ಞರನ್ನು ಭೇಟಿ ಮಾಡಿ
ನಮ್ಮ ಫಲವತ್ತತೆ ತಜ್ಞರ ತಂಡವು ಅವರ ವ್ಯಾಪಕವಾದ ಕ್ಲಿನಿಕಲ್ ಅನುಭವ ಮತ್ತು ಸಂಶೋಧನಾ ಕೊಡುಗೆಗಳು ಮತ್ತು ಅತ್ಯಂತ ಸವಾಲಿನ ಫಲವತ್ತತೆ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರ ಯಶಸ್ಸಿಗೆ ಹೆಸರುವಾಸಿಯಾಗಿದೆ.